ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುಮಠಕಲ್ ನಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ|| ಬಾಬು ಜಗಜೀವನ ರಾಮ್ ಜಯಂತಿ ಆಚರಣೆ

ದೇಶಕ್ಕೆ ಬಾಬು ಜೀ ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸೋಣ- ಅಂಬರೀಷ ಪಾಟೀಲ

ಯಾದಗಿರಿ/ಗುರುಮಠಕಲ್ : ಪುರಸಭೆ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಪೊಲೀಸ್ ಪಾಟೀಲ್ ರವರು ಇಂದು ಡಾ|| ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದ ಆವರಣದಲ್ಲಿರುವ ಡಾ|| ಬಿ. ಆರ್. ಅಂಬೇಡ್ಕರ್ ಮತ್ತು ಡಾ|| ಬಾಬು ಜಗಜೀವನ್ ರಾಮ್ ಅವರ ಪುತ್ತಳಿಗಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು, ಮುಂಭಾಗದಲ್ಲಿ ಡಾ|| ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಡಾ|| ಬಾಬು ಜಗಜೀವನ್ ರಾಮ್ 118 ನೇಯ ಜಯಂತಿಯನ್ನು ಇಂದು ಅಚರಿಸಲಾಯಿತು.
ಜಯಂತಿಯನ್ನು ಉದ್ದೇಶಿಸಿ ತಾಲೂಕ ಯೋಜನಾಧಿಕಾರಿ ಶ್ರೀ ಅಂಬರೀಷ ಪಾಟೀಲ ಮಾತನಾಡಿ ಭಾರತದ ಮಾಜಿ ಉಪಪ್ರಧಾನಿ, ದಲಿತರ ಅಪ್ರತಿಮ ನಾಯಕ ಡಾ.ಬಾಬು ಜಗಜೀವನರಾಮ್ ಅವರು ಬಾಬೂಜಿ ಎಂದೇ ಖ್ಯಾತರಾಗಿದ್ದರು, ಜಗಜೀವನ್ ರಾಮ್ ಶೋಷಿತರ, ದಮನಿತರ ಪರವಾಗಿ ಅವರ ಹಕ್ಕಿಗಾಗಿ ಮಾಡಿದ ಹೋರಾಟ ಹಾಗೂ ಈ ದೇಶಕ್ಕೆ ಅವರು ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸೋಣ ಎಂದು ತಿಳಿಸಿದರು.
ಅನಂತರ ಡಾ|| ಬಾಬು ಜಗಜೀವನರಾಮ ಯುವ ಸೇನೆ ಅಧ್ಯಕ್ಷರಾದ ಭೀಮಶಪ್ಪ ಕೆಳಮನಿ ಮಾತನಾಡಿ
ಸಾಮಾಜಿಕ ನ್ಯಾಯದ ದೃಢ ಪ್ರತಿಪಾದಕ ಮತ್ತು ದಾರ್ಶನಿಕ ನಾಯಕ ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿಯ ಸಮಯದಲ್ಲಿ ಕೃಷಿ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದರು. 1971 ರ ಯುದ್ಧದ ಸಮಯದಲ್ಲಿ ಅವರು ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದರು.ಸಮಾನತೆ, ಘನತೆ ಮತ್ತು ಸಬಲೀಕರಣಕ್ಕಾಗಿ ಅವರ ನಿರಂತರ ಹೋರಾಟ ಇಂದಿಗೂ ಪೀಳಿಗೆಗೆ ಸ್ಫೂರ್ತಿ ಎಂದು ಹೇಳಿದರು.
ಕೊನೆಯಲ್ಲಿ ಮಾತನಾಡಿದ ಪುರಸಭೆ FDC ಶ್ರೀ ಪರಶುರಾಮ ನರಿಬೋಳ ಮಾತನಾಡಿ ಬಡವರ ಹಸಿವು ನೀಗಿಸಿದ ಹಸಿರುಕ್ರಾಂತಿಯ ಹರಿಕಾರ, ಬಡವರ ಆಶಾಕಿರಣ ಡಾಕ್ಟರ್ ಬಾಬು ಜಗಜೀವನ ರಾಮ್ ಅವರ ಜಯಂತಿಯಂದು ದೇಶಕ್ಕೆ ಅವರು ನೀಡಿದ ಸ್ಫೂರ್ತಿದಾಯಕ ಸೇವೆಯನ್ನು ಸ್ಮರಿಸೋಣ ಮತ್ತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಇನ್ನೂ ಜಯಂತಿಯಲ್ಲಿ ಗುರುಮಠಕಲ್ ತಾಲೂಕ ದಂಡಾಧಿಕಾರಿಗಳಾದ ಶ್ರೀ ಶಾಂತಗೌಡ ಬಿರಾದರ,ಪುರಸಭೆ ಅಧ್ಯಕ್ಷರಾದ ಶ್ರೀಮತಿ ಭಾರತೀ ದಂಡೋತಿ, ತಾಲೂಕ ಯೋಜನಾಧಿಕಾರಿಗಳಾದ ಶ್ರೀ ಅಂಬರೀಷ ಪಾಟೀಲ, ಪುರಸಭೆ ಸದಸ್ಯರಾದ ನವಾಜರೆಡ್ಡಿ ಪೊಲೀಸ್ ಪಾಟೀಲ, ಬಾಲು ದಾಸರಿ, ಆಶನ್ನ ಬುದ್ದಾ, ಅಶೋಕ ಕಲಾಲ, ಶರಣಪ್ಪ ಲಿಕ್ಕಿ, ಅನಂತಪ್ಪ ಮುಕಡಿ, ನರಸಪ್ಪ ಗಡ್ಡಲ, ಪುರಸಭೆ ನಾಮ ನಿರ್ದೇಶನ ಸದಸ್ಯರು ಮತ್ತು ಡಾ|| ಬಾಬು ಜಗಜೀವನರಾಮ್ ಯುವ ಸೇನಾ ಅಧ್ಯಕ್ಷರು ಭೀಮಶಪ್ಪ ಕೆಳಮನಿ, JDS ಮುಖಂಡರು ರಘುನಾಥರೆಡ್ಡಿ ಪೊಲೀಸ್ ಪಾಟೀಲ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಶ್ರೀ ಲಾಲಪ್ಪ ತಲಾರಿ, ದಲಿತ ಸಂಘರ್ಷ ಸಮಿತಿ KDSS ತಾಲೂಕ ಅಧ್ಯಕ್ಷರಾದ ಶ್ರೀ ಅಶೋಕ್ ಶನಿವಾರಂ, ಸುರೇಶ್ ಬೆಟ್ಟದಳ್ಳಿ, ವೇಣು ಗೋಪಾಲ ಮನ್ನೆ, ಪುರಸಭೆ ಸಿಬ್ಬಂದಿ ಶ್ರೀ ರಾಮುಲು,ರಾಮಕೃಷ್ಣ ಯಾದವ್, ಶ್ರೀನಿವಾಸ, ಅಂಜಪ್ಪ, ವೀರಭದ್ರಪ್ಪ ಇನ್ನಿತರರು ಹಾಜರಿದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ