ಆರ್ಸಿಬಿ ಇದುವರೆಗೆ ಐಪಿಎಲ್ ಚಾಂಪಿಯನ್ ಆಗಿಲ್ಲದಿರಬಹುದು. ಆದರೆ ಈ ಸೀಸನ್ನಲ್ಲಿ ತಂಡ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ಬಾರಿ ಟ್ರೋಫಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಏಪ್ರಿಲ್ 24 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 11 ರನ್ಗಳಿಂದ ಸೋಲಿಸಿ ಆರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು.
ಆದರೆ, ರಾಜಸ್ಥಾನ ವಿರುದ್ಧ ಆರ್ಸಿಬಿ ಗೆಲುವು ಈ ಕಾರಣಕ್ಕಾಗಿ ಮಾತ್ರ ವಿಶೇಷವಾಗಿರಲಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ರಾಜಸ್ಥಾನವನ್ನು ಸೋಲಿಸುವ ಮೂಲಕ ಆರ್ಸಿಬಿ ತನ್ನ ವನವಾಸವನ್ನು ಕೊನೆಗೊಳಿಸಿತು. ಕಳೆದ 14 ವರ್ಷಗಳಿಂದ ಕಾಯುತ್ತಿದ್ದ ಆ ಸ್ಮರಣೀಯ ಗೆಲುವು ಕೊನೆಗೂ ಆರ್ಸಿಬಿ ಪಾಲಾಯಿತು.
ಐಪಿಎಲ್ 2025 ರಲ್ಲಿ ತಮ್ಮ ತವರಿನಲ್ಲಿ ಮೊದಲ ಗೆಲುವು ದಾಖಲಿಸಿದ ಆರ್ಸಿಬಿ, ಈ ಗೆಲುವಿನ ಮೂಲಕ ತನ್ನ ವನವಾಸವನ್ನು ಕೊನೆಗೊಳಿಸಿತು. ಬರೋಬ್ಬರಿ 14 ವರ್ಷಗಳ ಹಿಂದೆ ಅಂದರೆ 2011 ರಲ್ಲಿ ಐಪಿಎಲ್ನಲ್ಲಿ ಕೊನೆಯ ಬಾರಿಗೆ ಅಂತಹದೊಂದು ಗೆಲುವು ದಾಖಲಿಸಿದ್ದ ಆರ್ಸಿಬಿ ಇದೀಗ ಮತ್ತೊಮ್ಮೆ ಅಂತಹದ್ದೇ ಗೆಲುವು ಸಂಪಾದಿಸಿದೆ.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 205 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 194 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಈ ಆರನೇ ಜಯದೊಂದಿಗೆ ಆರ್ಸಿಬಿ 3ನೇ ಸ್ಥಾನಕ್ಕೇರಿದರೆ, ರಾಜಸ್ಥಾನಕ್ಕೆ ಪ್ಲೇಆಫ್ನ ಹಾದಿ ಈಗ ಬಹುತೇಕ ಮುಚ್ಚಿದಂತಿದೆ.
ಈ ಸಲಾ ಕಪ್ ನಮ್ದೆ :
ಪ್ರತಿ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ ಹೊರಬಂದಾಗ, ಈ ಹರ್ಷೋದ್ಗಾರ ಅಥವಾ ಘೋಷಣೆ ಅಂತರ್ಜಾಲದಲ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೈದಾನಕ್ಕೆ ಇಳಿದಾಗಲೆಲ್ಲಾ ದೇಶದಾದ್ಯಂತ ತುಂಬಿರುವ ಕ್ರೀಡಾಂಗಣಗಳಲ್ಲಿ ಕೇಳಿ ಬರುತ್ತದೆ.
- ಕರುನಾಡ ಕಂದ
