ಬೆಂಗಳೂರು: ಪ್ರೆಸ್ಟೀಜ್ ಜಿಂದಾಲ್ ಸಿಟಿ ಬಸವ ಬಳಗದ ವತಿಯಿಂದ ಇಂದು ಜಗಜ್ಯೋತಿ ಬಸವಣ್ಣನವರ 892 ನೇ ಜಯಂತಿಯನ್ನು ಸಾಂಪ್ರದಾಯಿಕವಾಗಿ ಅಚಾರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಜೀ ನಿವೃತ್ತ ಮು. ಪ್ರಾಧ್ಯಾಪಕರು ಬಸವಣ್ಣ ಎನ್ನುವುದು ಕೇವಲ ಒಂದು ಹೆಸರಲ್ಲ, ಅದೊಂದು ಶಕ್ತಿ, ವರ್ಣನಾತೀತ
ಮಾನವೀಯ ಮೌಲ್ಯಗಳ ಆಗರ, ಚಿಕ್ಕ ವಯಸ್ಸಿನಿಂದ ಸಂಪ್ರದಾಯದ ಕೆಲ ವಿಚಾರಗಳಿಗೆ ತಂದೆಯ ಮಾತಿಗೆ ಒಪ್ಪದೇ 8 ನೇಯ ವಯಸ್ಸಿಗೆ ಮನೆ ತೊರೆದು, ಜಾತಿ ನಿರ್ಮೂಲನೆಯನ್ನು ಮುಖ್ಯ ಧ್ಯೇಯವಾಗಿಸಿ ಅನುಭವ ಮಂಟಪ ಕಟ್ಟಿ, ಜಗತ್ತಿಗೆ ಕಾಯಕವೇ ಕೈಲಾಸವೆಂಬ ಸೂತ್ರವನ್ನು ಕಲಿಸಿ ಕೊಟ್ಟ ಮಹಾನ್ ವ್ಯಕ್ತಿ ಎಂದು ಹೇಳಿದರು.
ಪ್ರೆಸ್ಟೀಜ್ ಜಿಂದಾಲ್ ಸಿಟಿ (ಪಿ.ಜಿ.ಸಿ)
ಬಸವ ಬಳಗದ ವತಿಯಿಂದ ಮುಂದಿನ ತಿಂಗಳು ದಿ. 17-05-2025 ಶನಿವಾರರಂದು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೇಲೀಮಠ ಕ್ಷೇತ್ರದ ಮಠಾಧ್ಯಕ್ಷರಾದ ಶ್ರೀ ಶಿವರುದ್ರ ಸ್ವಾಮೀಜಿ ಅವರು ವಹಿಸಲಿದ್ದಾರೆ, ಅಂದು ಬೆಳಿಗ್ಗೆ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ, ಶ್ರೀಗಳ ಪಾದಪೂಜೆ ಮತ್ತು ಆಶೀರ್ವಚನ, ಜಗಜ್ಯೋತಿ ಬಸವೇಶ್ವರ ಪುತ್ತಳಿ ಭವ್ಯ ಮೆರವಣಿಗೆ ಇರುವುದು, ಸಾಯಂಕಾಲ ಬಸವ ರಥೋತ್ಸವ, ಡೊಳ್ಳು ಕುಣಿತ, ನಂದಿ ಧ್ವಜ, ಕೋಲಾಟ, ಸಂಗೀತ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಾಗಿ ಪ್ರೆಸ್ಟೀಜ್ ಜಿಂದಾಲ್ ಸಿಟಿ (ಪಿ.ಜಿ.ಸಿ) ಬಸವ ಬಳಗದ ಸದಸ್ಯರು ತಿಳಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಎಲ್ಲಾ ಪಿ.ಜಿ.ಸಿ ಬಸವ ಬಂಧುಗಳು ಭಾಗವಹಿಸಿದ್ದರು.
ವರದಿ: ಜಗದೀಶ ಕುಮಾರ ಶರಣಪ್ಪ ಭೂಮ
