ಯಾದಗಿರಿ/ಗುರುಮಠಕಲ್: ಗುರುಮಠಕಲ್ ತಾಲೂಕಿನಾದ್ಯಂತ ಇಂದು ವಚನಗಳ ಮೂಲಕ ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆಯ ವಿರುದ್ಧ ಅರಿವು ಮೂಡಿಸಿದ ಮಹಾ ಮಾನವತಾವಾದಿ, ನಾಡಿನ ಸಾಂಸ್ಕೃತಿಕ ರಾಯಭಾರಿ, ವಿಶ್ವಗುರು ಬಸವಣ್ಣನವರ 892 ನೇಯ ಜಯಂತಿ ಆಚರಿಸಲಾಯಿತು.
ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜ, ಪುರಸಭೆ ಕಾರ್ಯಾಲಯ, ಶ್ರೀ ಲಕ್ಷ್ಮೀ ತಿಮ್ಮಪ್ಪ ಶಾಲೆ, ಗುರುಮಠಕಲ್ ಭಾ.ಜ.ಪ ದ ಕಾರ್ಯಾಲಯ, ತಹಸೀಲ್ದಾರ ಕಾರ್ಯಾಲಯ, ಗುರುಮಠಕಲ್ ಬಸ್ ಘಟಕ ಹಾಗೂ ಶಾಂತಿನಿಕೇತ ಪಬ್ಲಿಕ್ ಶಾಲೆ ಚೆಪೆಟ್ಲಾ ಸೇರಿ ಹಲವು ಕಡೆ ಬಸವ ಜಯಂತಿ ಆಚರಣೆ ಮಾಡಲಾಯಿತು.
ವರದಿ: ಜಗದೀಶ್ ಕುಮಾರ್ ಭೂಮಾ
