ಬಳ್ಳಾರಿ / ಕಂಪ್ಲಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.
ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಬಂಗಿ ದೊಡ್ಡ ಮಂಜುನಾಥ ಅವರು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಆರಂಬಿಸಿದರು.ಅಲ್ಲದೇ ಮೂಢನಂಬಿಕೆ, ಅಂಧ ಶ್ರದ್ದೆಗಳನ್ನು ಧಿಕ್ಕರಿಸಿ ವೈಚಾರಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಕ್ಕೆ ಜಗಜ್ಯೋತಿ ಬಸವೇಶ್ವರ ಅವರ ಕೊಡುಗೆ ಅನನ್ಯವಾಗಿದ್ದು,ಅವರ ತತ್ವಾದರ್ಶಗಳ ಪರಿಪಾಲನೆಯೊಂದಿಗೆ ಜೀವನ ನಡೆಸಲು ಮುಂದಾಗಬೇಕು ಎಂದರು.
ನಂತರ ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಜೆಸಿ ಬಿ. ರಸೂಲ್ ಮಾತನಾಡಿ ಬಸವಣ್ಣನವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ ಜೀವನದಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಬಸವಣ್ಣನವರು ಸರ್ವಜಾತಿ ಜನಾಂಗದ ನಾಯಕ ಬಸವಣ್ಣನವರು, ಅವರ ವಚನಗಳನ್ನು ಯಾರೂ ಪಾಲಿಸುತ್ತಾರೋ ಎಲ್ಲರೂ ಸುಸಂಸ್ಕೃತರು, 12ನೇ ಶತಮಾನದ ಶರಣರು ಹೇಳಿದ್ದಾರೆ. ಶರಣರ ಆದರ್ಶಗಳು ನಮಗೆ ಮಾದರಿ ಬಸವಣ್ಣನವರ ಆಚಾರ, ವಿಚಾರಗಳು ನಮಗೆ ದಾರಿದೀಪವಾಗಿ, ಸುಂದರ ಸಮಾಜ ನಿರ್ಮಾಣಕ್ಕೆ ಶರಣರ ತತ್ವ ನಮಗೆ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಪದಾಧಿಕಾರಿಗಳಾದ ಜೆಸಿ ಯು. ಅಕ್ಕಿಜಿಲಾನ್, ಜೆಸಿ ಬಿ.ಹೆಚ್.ಎಂ.ಅಮರನಾಥ ಶಾಸ್ತ್ರಿ, ಜೆಸಿ ಸಿದ್ದರಾಮೇಶ್ವರ ಶಾಸ್ತ್ರಿ, ಮುಖಂಡರಾದ ನಬಿರಸೂಲ್, ಕರಿಯಪ್ಪನಾಯಕ, ಎಲೆಗಾರಖಾದರಬಾಷ, ಇಮ್ರಾನ, ರಿಯಾಜ್ ಭಾಷಾ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
