ವಿಜಯಪುರ/ ಮುದ್ದೇಬಿಹಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಈ ಶಾಲೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾಂತಗೌಡ ಮಾಡಗಿ ಹಾಗೂ ಮುಖ್ಯ ಅತಿಥಿಗಳಾಗಿ ವೇದಮೂರ್ತಿಗಳಾದ ಶ್ರೀಶೈಲ ಹಿರೇಮಠ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಭೀಮಾಶಂಕರ ದೊಡಮನಿ ಹಾಗೂ ಅತಿಥಿಗಳಾಗಿ ಎಸ್‌ಡಿಎಂಸಿ ಸದಸ್ಯರಾದ ಭೀಮನಗೌಡ ದೋರನಳ್ಳಿ ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ನವಲಿ ಹಾಗೂ ಅತಿಥಿ ಶಿಕ್ಷಕರಾದ ಶ್ರೀಮತಿ ಕಾಶಿಬಾಯಿ ಹಾದಿಮನಿ ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಮಾತನಾಡಿ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರಾಗಿ ಘೋಷಣೆ ಮಾಡಿರುವುದು ಸಾರ್ವತ್ರಿಕವಾಗಿ ಸ್ವಾಗತಾರ್ಹ ಎಂದು ಹೇಳಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಶ್ರೀ ಭೀಮಾಶಂಕರ ದೊಡಮನಿ ರವರು ಮಾತನಾಡಿ ಬಸವಣ್ಣನವರ ಜೀವನ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಹೇಳಿದರು. ಶ್ರೀಮತಿ ಕಾಶಿಬಾಯಿ ಹಾದಿಮನಿ ನಿರೂಪಿಸಿದರು, ಶ್ರೀ ಸಂಗಮೇಶ ಶಾಂತಪ್ಪ ನವಲಿ ಸ್ವಾಗತಿಸಿದರು, ಕುಮಾರಿ ನೀಲಮ್ಮ ಬೆಲವಂತರಕಂಠಿ ಪ್ರಾರ್ಥಿಸಿದರು, ಶ್ರೀ ಸಂಗಮೇಶ ಶಾಂತಪ್ಪ ನವಲಿ ವಂದಿಸಿದರು.
- ಕರುನಾಡ ಕಂದ
