ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕ ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ,ಬಹಳ ಸರಳತೆಯಿಂದ; ಇಂದು ವಚನಗಳ ಮೂಲಕ ಜಾತಿ ವ್ಯವಸ್ಥೆ, ಮಹಿಳೆಯರ ಶೋಷಣೆ, ಆಡಂಭರ ಆಚರಣೆ, ಮೂಢನಂಬಿಕೆಯ ವಿರುದ್ಧ ಅರಿವು ಮೂಡಿಸಿದ ಮಹಾ ಮಾನವತಾವಾದಿ, ನಾಡಿನ ಸಾಂಸ್ಕೃತಿಕ ರಾಯಭಾರಿ, ವಿಶ್ವಗುರು ಬಸವಣ್ಣನವರ 892 ನೇಯ ಜಯಂತಿ ಆಚರಿಸಲಾಯಿತು.
ಮಿನಿ ವಿಧಾನ ಸೌಧದಿಂದ ಬಸವೇಶ್ವರ ವೃತ್ತದವರೆಗೆ ಅದ್ದೂರಿಯಾಗಿ ಸಾವಿರಾರು ಬಸವಾದಿ ಶರಣ ಭಕ್ತರು ವಿಶ್ವ ಗುರು ಅಣ್ಣ ಬಸವಣ್ಣನವರ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಮೆರವಣಿಗೆಗೆ ತಾಲೂಕಿನ ಶಾಸಕರು ಹಾಗೂ ಕೆ ಕೆ ಆರ್ ಡಿ ಬಿ ಅಧ್ಯಕ್ಷರಾದ ಡಾ. ಅಜಯಸಿಂಗ್ ರವರು ಚಾಲನೆ ನೀಡಿದರು.
ತಾಲೂಕ ಆಡಳಿಯ ಆಯೋಜಿಸಿದ ವೇದಿಕೆಯನ್ನುದ್ದೇಶಿಸಿ ತಾಲೂಕ ದಂಡಾಧಿಕಾರಿಗಳಾದ ಮಲ್ಲಣ್ಣ ಯಲಗೋಡ ರವರು ಬಸವಣ್ಣನವರ ತತ್ವ ಸಿದ್ದಾಂತಗಳು ಮತ್ತು ವಿಚಾರ ಸಂಕೀರ್ಣಗಳ ಕುರಿತು ಮಾತನಾಡಿದರು.
ಇದೇ ರೀತಿಯಾಗಿ ಸಾಂಸ್ಕೃತಿಕ ರಾಯಬಾರಿ ಬಸವಣ್ಣನವರ ಕುರಿತು ಹಲವಾರು ಗಣ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ಡಾ. ಅಜಯ್ ಸಿಂಗ್, ತಹಶೀಲ್ದಾರ ಮಲ್ಲಣ್ಣ ಯಲಗೋಡ್, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ, ರವೀಂದ್ರ ಕೋಳ್ಕೂರ, ಸಿದ್ದು ಅಂಗಡಿ, ನೀಲಕಂಠ ಅವಂಟಿ, ವಿಜಯಕುಮಾರ ಹಿರೇಮಠ, ರವಿಚಂದ್ರ ಗುತ್ತೇದಾರ, ಸಿದ್ದು ಮಸ್ಕಿ, ಶ್ರೀ ಹರಿ ಕರ್ಕಿಹಳ್ಳಿ, ಸಂತೋಷ ಚನ್ನೂರ, ಬಸವರಾಜ ಭಾಗೇವಾಡಿ, ಗಿರೀಶ ತುಂಬಗಿ, ಸುರೇಶ ಹಿರೇಮಠ, ಮತ್ತು ಸಿಬ್ಬಂದಿಗಳಾದ ಪರಶುರಾಮ ಪಾಟೀಲ್, ಗೌಡಪ್ಪಗೌಡ ಪಾಟೀಲ್, ಅಂಬ್ರೇಶ್ ಚವ್ಹಾಣ, ಬಾಪೂಗೌಡ ಪಾಟೀಲ್ ಹಾಗೂ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಪಾಟೀಲ್
