
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶ್ರೀ ಬಸವೇಶ್ವರ, ಡಾ ll ಬಿ. ಆರ್. ಅಂಬೇಡ್ಕರ, ಮಾಜಿ ಉಪ ಪ್ರಧಾನಿ ಡಾ ll ಬಾಬು ಜಗನ್ ಜೀವ ರಾಮ್ ರವರ್ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಭಾರತ ದೇಶವು ಹಿಂದೂ ಧರ್ಮದ ನಾಡಾಗಿದೆ ಆದರೆ ಜಾತಿ , ಉಪ ಜಾತಿಗಳಿವೆ. ನಮ್ಮ ದೇಶಕ್ಕಾಗಿ ಪ್ರಮುಖ ನಾಯಕರು ಹೋರಾಟಗಳನ್ನು ಮಾಡಿ ತನ್ನ ಪ್ರಾಣವನ್ನು ಮುಡುಪಾಗಿಟ್ಟಿದ್ದಾರೆ. ನಮ್ಮ ಸಮಾಜದ ಚಿಂತನೆ, ಅಭಿವೃದ್ಧಿ ಆಗಬೇಕು ನಮ್ಮ ಧರ್ಮಕ್ಕೆ ಮತ್ತು ನಮ್ಮ ಜಾತಿಗಳಿಗೆ ತೊಂದರೆ ಉಂಟಾದರೆ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗೋಪಾಲ್ ರಾವ್ ಕಟ್ಟಿಮನಿ ಮಾತನಾಡಿದರು.
ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದವರು ಗೋಪಾಲ್ ರಾವ್ ಕಟ್ಟಿಮನಿ ಮತ್ತು ಡಾ. ಗೋಪಾಲ್ ರಾವ್ ತೆಲಂಗಿ, ಭೀಮರಾವ್ ಟಿಟಿ ಮಾತನಾಡಿದರು.
ಶ್ರೀ ಬಸವೇಶ್ವರ, ಡಾ ll ಬಿ. ಆರ್. ಅಂಬೇಡ್ಕರ್, ಡಾ ll ಬಾಬು ಜಗಜೀವನರಾಮ್ ಈ ಮಹಾಪುರುಷರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ. ಷ. ಬ್ರ. ರೇವಣ್ಣಸಿದ್ದ ಶಿವಾಚಾರ್ಯರು ಹಿರೇಮಠ ರಟಕಲ್ ದಿವ್ಯ ಸಾನಿಧ್ಯ ವಹಿಸಿದರು. ಪೂಜ್ಯರು ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ಅಪ್ಪಾಜಿ ರವರು ಇದ್ದರು. ಗೋಪಾಲ್ ರಾವ್ ಕಟ್ಟಿಮನಿ ಮಾದಿಗ ಸಮಾಜದ ಮುಖಂಡರು ಚಿಂಚೋಳಿ,ರೇವಣಸಿದ್ದಪ್ಪ ಕಟ್ಟಿಮನಿ ಮಾದಿಗ ಸಮಾಜದ ಮುಖಂಡರು ಮಳಗಿ, ಕಾಳಗಿ, ಮಂಜುಳಾ ಡಾ ಚಂದ್ರಕಾಂತ್ ಅಧ್ಯಕ್ಷರು ಗ್ರಾ. ಪಂ ಕಂದಗೋಳ, ಜಗದೀಪ ಮಾಳಗಿ ಅಧ್ಯಕ್ಷರು ಗ್ರಾ. ಪಂ. ರಟಕಲ್, ವೀರಣ್ಣ ಎಸ್. ಗಂಗಾಣಿ ರೈತ ಸೇನೆ ತಾಲೂಕಾಧ್ಯಕ್ಷರು ಕಾಳಗಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಸಹ ಪ್ರಾಧ್ಯಾಪಕರು, ಶ್ರೀ ಬಸವೇಶ್ವರ, ಡಾ ll ಬಿ. ಆರ್. ಅಂಬೇಡ್ಕರ್, ಡಾ ll ಬಾಬು ಜಗಜೀವನ್ ರಾಮ್ ರವರ ಸಮುದಾಯಗಳ ಮುಖಂಡರು, ರೈತ ಪರ ಹೋರಾಟ ನಾಯಕರು, ಮಹಿಳೆಯರು, ಸುತ್ತಮುತ್ತಲಿನ ಗ್ರಾಮಸ್ಥರು, ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳು, ಇತರರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಡಾ. ಜ್ಞಾನಮಿತ್ರ ಬಿ. ಬೈರಾ ಮಡಗಿ ಉಪನ್ಯಾಸಕರು ಸ. ಪ್ರ. ದ. ಕಾಲೇಜು ಸೇಡಂ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ಅಜಿತ್ ಕುಮಾರ್ ಬೈರಾಮಡಗಿ ಅರಟಗಲ್ ವಂದನಾರ್ಪಣೆ ಮಾಡಿದರು.
ವರದಿ : ಚಂದ್ರಶೇಖರ್ ಆರ್ ಪಾಟೀಲ್
