ದಿನವನ್ನು ಮೇ 1 ರಂದೇ ಆಚರಿಸುವ
ಶ್ರಮಿಕ ವರ್ಗವನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಬಂತು, ಇದರ ಇತಿಹಾಸ, ಮಹತ್ವ ತಿಳಿಯಿರಿ.
ದೇಶದ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹಳ ಮಹತ್ವದ್ದು. ಒಂದು ದೇಶ ಹಾಗೂ ರಾಜ್ಯ ತನ್ನದೇ ಆದ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಆರ್ಥಿಕತೆಯಿಂದ ನಿರ್ಮಿಸಲ್ಪಡುತ್ತದೆ. ಕಾರ್ಮಿಕ ವರ್ಗದವರು ದೇಶದ ಅಭಿವೃದ್ಧಿಗೆ ಬೇರುಗಳಂತೆ ಭದ್ರವಾಗಿರುವವರು. ಇವರು ದೇಶ ಹಾಗೂ ಪ್ರಪಂಚಕ್ಕೆ ಧನಾತ್ಮಕ ಬದಲಾವಣೆಗಳನ್ನು ಆರಂಭಿಸಲು ಮೂಲಭೂತ ಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಯಾವುದೇ ದೇಶಕ್ಕೆ ಕಾರ್ಮಿಕರು ಹಾಗೂ ಕಾರ್ಮಿಕ ವರ್ಗದವರು ಬೆನ್ನೆಲುಬಾಗಿರುವುದು ಬಹಳ ಮುಖ್ಯ. ಆ ಕಾರಣಕ್ಕೆ ಕಾರ್ಮಿಕರ ಬಗ್ಗೆ ಸದಾ ದೇಶ ಹಾಗೂ ಜನರು ಗಮನ ಹರಿಸಬೇಕು, ಅವರ ಯೋಗಕ್ಷೇಮದ ನಿಗಾ ವಹಿಸಬೇಕು. ಅವರ ಸಮಸ್ಯೆಗಳಿಗೆ ಕಿವಿಯಾಗಬೇಕು.
ಶ್ರಮಿಕ ವರ್ಗದ ಮಹತ್ವ ಹಾಗೂ ಅವರ ಅಗತ್ಯವನ್ನು ತಿಳಿಸುವ ಹಾಗೂ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.
ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಇತಿಹಾಸ
1886ರಲ್ಲಿ ಅಮೆರಿಕದಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಅಲ್ಲಿ ಕಾರ್ಮಿಕರು ದಿನದ ಕೆಲಸವನ್ನು 8 ಗಂಟೆಗಳ ಕಾಲ ನಿಗದಿ ಪಡಿಸಲು ಒತ್ತಾಯಿಸಿದರು. ಆದರೆ ಈ ಪ್ರತಿಭಟನೆ ಮುಂದುವರಿಯಿತು. ಇದರಲ್ಲಿ ಹಲವರು ಗಾಯಗೊಂಡರು. ಈ ಘಟನೆಯನ್ನು ಹೇಮಾರ್ಕೆಟ್ ಅಫೇರ್ ಎಂದು ಕರೆಯಲಾಯಿತು. ಇದು ಅಂತರರಾಷ್ಟ್ರೀಯ ಕಾರ್ಮಿಕರ ದಿನ ಆಚರಣೆಗೆ ನಾಂದಿಯಾಯಿತು. 1889ರಲ್ಲಿ ಯುರೋಪಿನ ಹಲವು ಸಮಾಜವಾದಿ ಪಕ್ಷಗಳು ಒಟ್ಟಾಗಿ ಮೇ 1 ಅನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದವು. ಅಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷ ಈ ದಿನದಂದು ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಗುತ್ತಿದೆ.
ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ
ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ವರ್ಗದ ಕೊಡುಗೆಗಳನ್ನು ಗುರುತಿಸಿ, ಗೌರವಿಸುವ ಮಹತ್ವವನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನ ಒತ್ತಿ ಹೇಳುತ್ತದೆ.
ಇದು ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಹೇಳಬೇಕು ಎಂದು ಒತ್ತಾಯಿಸುತ್ತದೆ. ಕಾರ್ಮಿಕರು ಹೆಚ್ಚಾಗಿ ಷೋಷಣೆಗೆ ಒಳಗಾಗುತ್ತಾರೆ. ಆದರೆ ಕಾರಣಕ್ಕೆ ತಮ್ಮನ್ನು ನಾವು ರಕ್ಷಿಸಿಕೊಳ್ಳಲು ತಮ್ಮ ಹಕ್ಕುಗಳನ್ನು ತಿಳಿದಿರುವುದು ಮುಖ್ಯವಾಗಿದೆ. ಇದು ಕಾರ್ಮಿಕರ ಕೆಲಸ ಹಾಗೂ ಜೀವನವನ್ನು ಅಭಿವೃದ್ಧಿ ಪಡಿಸಲು ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಒತ್ತಾಯಿಸುತ್ತದೆ.
ಕಠಿಣ ಪರಿಶ್ರಮ ನಿಮ್ಮನ್ನು ಎಂದಿಗೂ ಸೋಲುವುದಕ್ಕೆ ಬಿಡುವುದಿಲ್ಲ.ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಇದಾಗಿದೆ. ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ. ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಏಣಿ.
ಡಿಗ್ರಿ ಮಾಸ್ಟರ್ ಡಿಗ್ರಿಗಳನ್ನು ಪಡೆದು ನಾನು ನಿರುದ್ಯೋಗಿ ನನಗೆ ಯಾರೂ ಕೆಲಸ ಕೊಡುತ್ತಿಲ್ಲ ಅಂತ ಅದೆಷ್ಟು ಮಂದಿ ಪೋಷಕರ ಹಂಗಿನಲ್ಲಿ ಬದುಕುವ ಯುವಕರಿಗೆ ಹಿಂದಿನ ಕಾರ್ಮಿಕ ದಿನಾಚರಣೆ ಸ್ಪೂರ್ತಿಯಾಗಲಿ. ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದ ಕೆಲಸವು ಮುಂದೆ ದುಡಿಮೆಯ ನಂಬಿ ಬದುಕಬೇಕು.
ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮದಲ್ಲಿಯೇ ಬದುಕಿನ ಖುಷಿ ಕಾಣುವ ಎಲ್ಲಾ ಕಾರ್ಮಿಕರಿಗೂ ನಮ್ಮ ಕರುನಾಡ ಕಂದ ಪತ್ರಿಕೆ ವತಿಯಿಂದ ಕಾರ್ಮಿಕ ದಿನಾಚರಣೆಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
ಲೇಖನ ವರದಿ : ಜಿಲಾನಸಾಬ್ ಬಡಿಗೇರ್
