
ಬಿಎಸ್‌ಎಫ್ ಯೋಧ ಹೃದಯಾಘಾತದಿಂದ ಸಾವು
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಬಿಎಸ್‌ಎಫ್ ಯೋಧ ಸಿದ್ದಪ್ಪ ಮಾದರ ಅವರು ಗುರುವಾರರಂದು ಅಸ್ಸಾಂ ರಾಜ್ಯದ ಅಥರ್ಗಾ ತ್ರಿಪುರಾದಲ್ಲಿ ಸೇವೆಯಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದ ೩೩ ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಮಾದರ ಅವರು ಕಳೆದ ೧ ತಿಂಗಳ ಹಿಂದೆ ಬಳಗಾನೂರ ಗ್ರಾಮಕ್ಕೆ ಆಗಮಿಸಿ ಕಳೆದ ವಾರವಷ್ಟೇ ಮರಳಿ ಸೇವೆಗೆ ಮರಳಿದ್ದರು. ಸಾಕಷ್ಟು ಜನ ಯೋದರು ವಯೋ ನಿವೃತ್ತಿಯ ಮುಂಚೆಯೇ ಸ್ವಯಂ ನಿವೃತ್ತಿ ಪಡೆದುಕೊಳ್ಳುತ್ತಿದ್ದರೂ ಕೂಡಾ ದೇಶದ ಗಡಿ ಕಾಯುವ ಕೆಲಸ ಅತ್ಯಂತ ಪವಿತ್ರವಾದುದ್ದು ಭಾರತ ಮಾತೆಯ ಮಗನಾಗಿ ಜನಿಸಿದ ನಾನು ನನ್ನ ಸೇವೆಯನ್ನು ಸಂಪೂರ್ಣವಾಗಿ ಮುಡಿಪಾಗಿಡುತ್ತೇನೆಂದು ಸೇವೆಯಲ್ಲಿ ತೊಡಗಿಕೊಂಡಿದ್ದ ಯೋಧ ಸಿದ್ದಪ್ಪ ಮಾದರ ಅವರಿಗೆ ಹೃದಯಾಘಾತದ ಕಾಯಿಲೆ ದೇಶ ಸೇವೆಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಮಾಡಿದೆ.
ಬಿಎಸ್‌ಎಎಫ್ ಯೋಧ ಸಿದ್ದಪ್ಪ ಮಾದರ ಅವರ ಪತ್ನಿ ಕವಿತಾ, ಪುತ್ರಿಯರಾದ ಸುಮಿತಾ ವೈದ್ಯರಾಗಿದ್ದರೆ ಪುತ್ರ ರವಿಕಾಂತ ಇಂಜನಿಯರಾಗಿ ಸೇವೆಯಲ್ಲಿದ್ದಾರೆ ಇನ್ನೋರ್ವ ಪುತ್ರ ಕಾಮರ್ಸ ಪದವಿ ಮುಗಿಸಿದ್ದಾರೆ.
ಇಂದು ಬಳಗಾನೂರಕ್ಕೆ ಪಾರ್ಥಿವ ಶರೀರ ಆಗಮನ
ಹೃದಯಘಾತದಿಂದ ನಿಧನ ಹೊಂದಿರುವ ಬಿಎಸ್‌ಎಫ್ ಯೋಧ ಸಿದ್ದಪ್ಪ ಮಾದರ ಅವರ ಪಾರ್ಥಿವ ಶರೀರವು ಶನಿವಾರರಂದು ಮುಂಜಾನೆ ೧೧ ಗಂಟೆಗೆ ಬಳಗಾನೂರ ಗ್ರಾಮಕ್ಕೆ ಆಗಮಿಸಲಿದ್ದು ಯೋಧ ಸಿದ್ದಪ್ಪ ಮಾದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ವ್ಯವಸ್ಥೆ ಮಾಡಲಾಗಿದೆ.
ನಂತರ ಆಗಮಿಸಿದ ಬಿಎಸ್‌ಎಫ್ ಯೋಧರಿಂದ ಸರ್ಕಾರಿ ಗೌರವಗಳೊಂದಿಗೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಯೋಧ ಸಿದ್ದಪ್ಪ ಮಾದರ ಸಂಬಂದಿ ದೇವೇಂದ್ರ ಅರಳಿಕಟ್ಟಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಬಳಗಾನೂರ ಗ್ರಾಮದ ಬಿಎಸ್‌ಎಫ್ ಯೋಧ ಸಿದ್ದಪ್ಪ ಮಾದರ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆಂಬ ಮಾಹಿತಿ ಬಂದಿದೆ ಅವರ ಪಾರ್ಥಿವ ಶರೀರವು ಶನಿವಾರ ಮುಂಜಾನೆ ೧೧ ಗಂಟೆಗೆ ಬಳಗಾನೂರ ಗ್ರಾಮಕ್ಕೆ ಆಗಮಿಸಲಿದ್ದು ಗ್ರಾಮದಲ್ಲಿ ಗದ್ದಲ ವಾತಾವರಣ ನಿರ್ಮಾಣವನ್ನು ತಡೆಗಟ್ಟಲು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಆಗಮಿಸಿದ ಯೋಧರಿಂದಲೇ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ವರದಿಗಾರರು : ಉಸ್ಮಾನ ಬಾಗವಾನ (ಬಳಗಾನೂರ)
