ಕಲಬುರಗಿ: ಹಿಂದೂ ಜಾಗೃತಿ ಸೇನೆ ಹಾಗೂ ರಾಮ್ ಸೇನೆ ಕರ್ನಾಟಕ ಕಲಬುರಗಿ ವತಿಯಿಂದ ಪಟಾಕಿ ಸಿಡಿಸಿ ಹಿಂದೂ ಮಹಿಳೆಯರಿಗೆ ಸಿಂಧೂರ ಹಚ್ಚುವ ಮೂಲಕ ವಿಜಯೋತ್ಸವ ಆಚರಣೆ.
ಆಪರೇಶನ್ ಸಿಂಧೂರ ಮೂಲಕ 9 ಉಗ್ರರ ತಾಣ ಗಳನ್ನು ಮತ್ತು 100 ಉಗ್ರರನ್ನು ನಾಶ ಮಾಡಿದ ಭಾರತೀಯ ಸೇನೆಗೆ, ಪ್ರಧಾನಿ ಮೋದಿಯವರಿಗೆ ಹಿಂದೂ ಜಾಗೃತಿ ಸೇನೆ ಹಾಗೂ ರಾಮ್ ಸೇನೆ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಪಟಾಕಿ ಸಿಡಿಸಿ ಹಿಂದೂ ಮಹಿಳೆಯರಿಗೆ ಸಿಂಧೂರ ಹಚ್ಚುವ ಮೂಲಕ ವಿಜಯೋತ್ಸವ ಹಾಗೂ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ನಾಯಕಿ ದಿವ್ಯ ಹಾಗರಗಿ, ಶ್ವೇತಾ ಸಿಂಗ್, ಮಹೇಶ್ ಕೆಂಭಾವಿ ರಾಮ್ ಸೇನೆ ಜಿಲ್ಲಾ ಅಧ್ಯಕ್ಷರು, ಸುನಿಲ್ ಶಿರ್ಕೆ ಇಂದು ಜಾಗೃತಿ ಸೇನೆ ಜಿಲ್ಲಾ ಉಪಾಧ್ಯಕ್ಷರು ಮಹೇಶ್ ಕೆಂಭಾವಿ, ದಶರಥ್ ಇಂಗೋಳೆ ಹಿಂದೂ ಜಾಗೃತಿ ಸೇನೆ ನಗರಾಧ್ಯಕ್ಷರು ಚಿದಾನಂದ ಮಠಪತಿ, ಪ್ರಶಾಂತ್ ಶಿರೂರ್, ರಮೇಶ್ ದೇಸಾಯಿ, ತನಿಷ್ ಗಾಜರೆ, ಕೇದಾರನಾಥ್ ಕಂಠಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ
