ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಾಕಿಸ್ತಾನದ ರಾಜಧಾನಿಗೇ ನುಗ್ಗಿದ ಭಾರತ, ಇಸ್ಲಮಾಬಾದ್, ಲಾಹೋರ್ ಮೇಲೆ ವಾಯುದಾಳಿ

ನವದೆಹಲಿ : ಎಲ್​ಒಸಿಯಲ್ಲಿ ಪಾಕಿಸ್ತಾನದ ಸೇನೆ ದಾಳಿ ನಡೆಸಿ 16 ಜನರನ್ನು ಕೊಂದಿತ್ತು. ಅದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಲಾಹೋರ್​​ನಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ಮೂಲ ಸೌಕರ್ಯದ ಮೇಲೆ ದಾಳಿ ನಡೆಸಿ ನಾಶಪಡಿಸಿತ್ತು. ಹಾಗೇ, ಚೀನಾ ನಿರ್ಮಿತ ಕ್ಷಿಪಣಿಯನ್ನೂ ಹೊಡೆದುರುಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಂದು ಸಂಜೆ ಪಾಕಿಸ್ತಾನ ಜಮ್ಮುವಿನಲ್ಲಿ ಡ್ರೋನ್ ದಾಳಿಗೆ ಯತ್ನಿಸಿತ್ತು. ಆದರೆ, ಭಾರತೀಯ ಸೇನೆ 8 ಪಾಕ್ ಡ್ರೋನ್​ಗಳನ್ನು ಹೊಡೆದುರುಳಿಸಿತ್ತು. ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ದಾಳಿ ನಡೆಸಿರುವುದರಿಂದ ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತ ಇದೀಗ ಮತ್ತೆ ಪಾಕಿಸ್ತಾನದೊಳಗೆ ನುಗ್ಗಿದೆ. ಲಾಹೋರ್, ಇಸ್ಲಮಾಬಾದ್ ಸೇರಿದಂತೆ ಹಲವೆಡೆ ವೈಮಾನಿಕ ದಾಳಿ ನಡೆಸಿದೆ.

ಪಾಕಿಸ್ತಾನದ ಡ್ರೋನ್-ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಭಾರತ ಲಾಹೋರ್‌ಗೆ ದಾಳಿ ಮಾಡಿದೆ. ಪಾಕಿಸ್ತಾನವು ಅನೇಕ ಸ್ಥಳಗಳಲ್ಲಿ ಕ್ಷಿಪಣಿಗಳನ್ನು ಹಾರಿಸಿ, AWACS ಅನ್ನು ನಾಶಪಡಿಸಿದ ನಂತರ ಭಾರತ ಲಾಹೋರ್, ಸಿಯಾಲ್‌ಕೋಟ್ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದಿಂದ ಜಮ್ಮು ವಾಯುನೆಲೆಯ ಕಡೆಗೆ ದಾಳಿಗಳನ್ನು ಪ್ರಾರಂಭಿಸಿದಾಗ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಯಿತು. ಎಂಟು ಕ್ಷಿಪಣಿಗಳು ಮತ್ತು ಮೂರು ಡ್ರೋನ್‌ಗಳನ್ನು ಭಾರತದ S-400 ರಕ್ಷಣಾ ವ್ಯವಸ್ಥೆಗಳು ತಡೆ ಹಿಡಿದಿವೆ.

ಜಮ್ಮು ವಿಮಾನ ನಿಲ್ದಾಣದ ಬಳಿ ಸಹ ಭಾರತ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿತು ಮತ್ತು ಜೈಸಲ್ಮೇರ್ ಮತ್ತು ಪಠಾಣ್‌ಕೋಟ್‌ನಲ್ಲಿ ಡ್ರೋನ್‌ಗಳನ್ನು ಸಹ ತಡೆಹಿಡಿಯಲಾಯಿತು. ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಆಪರೇಷನ್ ಸಿಂದೂರ್ ದಾಳಿ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಈ ದಾಳಿಯಲ್ಲಿ 100 ಭಯೋತ್ಪಾದಕರನ್ನು ಕೊಲ್ಲಲಾಗಿತ್ತು.

ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಕೆಲವೇ ನಿಮಿಷಗಳ ಮೊದಲು ಭಾರತೀಯ ಸೇನೆ ಪಾಕಿಸ್ತಾನದ 3 ಎಡಬ್ಲ್ಯುಎಸಿಎಸ್‌ ಅನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನದ ಲಾಹೋರ್, ಮುಲ್ತಾನ್, ಸರ್ಗೋಧಾ, ಫೈಸಲಾಬಾದ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಭಾರತ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸಿದೆ.

ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿಗೆ ಗುರಿಯಿಟ್ಟಿದೆ. ಮೊದಲ ಬಾರಿಗೆ ಇಸ್ಲಾಮಾಬಾದ್‌ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಪಾಕಿಸ್ತಾನದ ಪ್ರಮುಖ 5 ನಗರಗಳ ಮೇಲೆ ಭಾರತ ದಾಳಿ ನಡೆಸಿದೆ. ಇಸ್ಲಮಾಬಾದ್, ಮುಲ್ತಾನ್, ಸರ್ಗೋದಾ, ಲಾಹೋರ್ ಮತ್ತು ಸಿಯಾಲ್‌ಕೋಟ್‌ನಲ್ಲಿ ಡ್ರೋನ್ ದಾಳಿ ನಡೆಸುವ ಮೂಲಕ ಪಾಕಿಸ್ತಾನದ ಆಕ್ರಮಣಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ‌.

ಐಎನ್‌ಎಸ್ ವಿಕ್ರಾಂತ್ ಪರಾಕ್ರಮ ಪಾಕಿಸ್ತಾನದ ಕರಾಚಿ ಬಂದರು ಧ್ವಂಸ.

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿದ್ದು, ಭಾರತ ವಾಯು ಸೇನಾಪಡೆ ಪಾಕಿಸ್ತಾನ ಹಲವು ನಗರಗಳಿಗೆ ನುಗ್ಗಿ ಹೊಡೆಯುತ್ತಿದೆ. ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕ್​ ನಗರಗಳ ಮೇಲೆ ದಾಳಿ ನಡೆಸಿದೆ. ಇತ್ತ ಭಾರರತೀಯ ನೌಕಾಪಡೆಯೂ ಸಹ ಐಎನ್‌ಎಸ್‌ ವಿಕ್ರಾಂತ್ ಮೂಲಕ ತನ್ನ ಆರ್ಭಟ ಶುರು ಮಾಡಿಕೊಂಡಿದೆ.

ದೇಶದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆಪರೇಷನ್ ಸಿಂಧೂರ್​​ ಬೆನ್ನಲ್ಲೇ ಕರ್ನಾಟದ ಡ್ಯಾಂಗಳಲ್ಲಿ ಹೈ ಅಲರ್ಟ್: ಬಿಗಿ ಭದ್ರತೆ

ದೇಶದ ಡ್ಯಾಂಗಳಲ್ಲಿ ಭದ್ರತೆಗೆ ಸೂಚನೆ ಬೆನ್ನಲ್ಲೇ ಇತ್ತ ಕರ್ನಾಟಕದ ಜಲಾಶಯಗಳಲ್ಲಿ ಬಿಗಿ ಭದ್ರತೆ ಸೂಚಿಸಲಾಗಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ