ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಂಖನಾದ ಮಹೋತ್ಸವದ ನಿಮಿತ್ತ ಗೋವಾದಲ್ಲಿ ಭವ್ಯ ವಾಹನ ಜಾಥಾ; ದೇಶಾದ್ಯಂತದ ಸಾವಿರಾರು ಭಕ್ತರ ಸ್ವಯಂಪ್ರೇರಿತ ಸಹಭಾಗ !

ವಾಹನ ಜಾಥಾ ಎಂದರೆ ಭಕ್ತಿಯ ದಿವ್ಯ ಯಾತ್ರೆ! – ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ

ಫೊಂಡಾ (ಗೋವಾ) – ನಾಳೆಯಿಂದ ಫೊಂಡಾ, ಗೋವಾದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಜಾಗೃತಿಗಾಗಿ ಇಂದು ಐತಿಹಾಸಿಕ ಮತ್ತು ಭವ್ಯ ವಾಹನ ಜಾಥಾವನ್ನು ಆಯೋಜಿಸಲಾಗಿತ್ತು. ಈ ವಾಹನ ಜಾಥಾ ಫೊಂಡಾದ ಸನಾತನ ಆಶ್ರಮದಿಂದ ಫರ್ಮಾಗುಡಿಯವರೆಗೆ ಸಾಗಿತು, ಮತ್ತೊಂದೆಡೆ ದೇಶದ ಮೂಲೆಮೂಲೆಗಳಿಂದ ಮಹೋತ್ಸವಕ್ಕಾಗಿ ಆಗಮಿಸುವ ನೂರಾರು ವಾಹನಗಳು ಪತ್ರದೇವಿ, ಕಾಣಕೋಣ ಮುಂತಾದ ಗಡಿಗಳನ್ನು ದಾಟಿ ಗೋವಾವನ್ನು ಪ್ರವೇಶಿಸಿ ಸುಸಜ್ಜಿತ ಜಾಥಾದ ಭಾಗವಾದವು. ದ್ವಿಚಕ್ರ ವಾಹನಗಳು, ನಾಲ್ಕು ಚಕ್ರ ವಾಹನಗಳು ಮತ್ತು ಬಸ್‌ಗಳ ಮೇಲೆ ಹಾರಾಡುತ್ತಿದ್ದ ಭಗವಾನ್ ಧ್ವಜಗಳು, ಹಾಗೂ ಮೊಳಗುತ್ತಿದ್ದ ‘ಹರ ಹರ ಮಹಾದೇವ’, ‘ಸನಾತನ ಧರ್ಮಕ್ಕೆ ಜಯವಾಗಲಿ’, ‘ಜಯತು ಜಯತು ಹಿಂದುರಾಷ್ಟ್ರಮ್’ ಎಂಬ ಘೋಷಣೆಗಳಿಂದ ಇಡೀ ಗೋವಾ ಕೇಸರಿಮಯವಾಯಿತು! ಈ ತೇಜೋಮಯ ಜಯಘೋಷಗಳು ಕೇವಲ ರಸ್ತೆಗಳನ್ನು ಮಾತ್ರವಲ್ಲದೆ ಜನರ ಮನಸ್ಸಿನಲ್ಲಿಯೂ ತುಂಬಿ ತುಳುಕಿದವು. ಎಲ್ಲೆಡೆ ಒಂದೇ ಸಂಚಲನ ‘ಸನಾತನ ರಾಷ್ಟ್ರದ ಶಂಖನಾದ’! ಈ ಜಾಥಾವು ಸನಾತನ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಹಿಂದೂ ರಾಷ್ಟ್ರದ ಕಡೆಗೆ ಇಟ್ಟ ಮುಂದಿನ ಹೆಜ್ಜೆಯಾಗಿದೆ!

ಸನಾತನ ಸಂಸ್ಥೆಯ ಫೊಂಡಾದ ಸನಾತನ ಆಶ್ರಮದ ಬಳಿ ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ (IAS) ಶ್ರೀ ಅರುಣ ದೇಸಾಯಿ ಅವರಿಂದ ಧರ್ಮಧ್ವಜ ಪೂಜೆಯ ನಂತರ ವಾಹನ ಜಾಥಾ ಪ್ರಾರಂಭವಾಯಿತು. ಈ ವಾಹನ ಜಾಥಾವು ಮುಂದೆ ಕವಳೆ -ತಿಸ್ಕಫೊಂಡಾ, ಶಾಂತಿನಗರ ಜಂಕ್ಷನ್, ಗೋವಾ ಬಾಗಾಯತದಾರ, ಫೊಂಡಾ ಪೋಸ್ಟ್ ಆಫೀಸ್ ಕಚೇರಿ-ಫೊಂಡಾದ ಹಳೆಯ ಬಸ್ ನಿಲ್ದಾಣ-ಶ್ರೀ ಹನುಮಾನ್ ದೇವಸ್ಥಾನ, ಕುರ್ಟಿ-ಫರ್ಮಾಗುಡಿಯ ಕೋಟೆಯ ಬಳಿ ಮುಕ್ತಾಯವಾಯಿತು. ಇದಕ್ಕೂ ಮುನ್ನ ವಿವಿಧ ಸ್ಥಳಗಳಲ್ಲಿ ಸುಮಂಗಲಿಯರು ಧರ್ಮಧ್ವಜಕ್ಕೆ ಆರತಿ ಬೆಳಗಿ ಮತ್ತು ರಸ್ತೆಯಲ್ಲಿ ರಂಗೋಲಿ ಹಾಕಿ ಜಾಥಾವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

ವಾಹನ ಜಾಥಾ ಎಂದರೆ ಭಕ್ತಿಯ ದಿವ್ಯ ಯಾತ್ರೆ! – ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ

ವಾಹನ ಜಾಥಾದ ಆರಂಭದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ ಅಭಯ ವರ್ತಕ ಅವರು ಮಾತನಾಡಿ, ‘‘ಯಾವ ರೀತಿ ಆಷಾಢ ಏಕಾದಶಿಯ ವಾರಿಗೆ ಲಕ್ಷಾಂತರ ವಾರಕರು ವಿಠ್ಠಲನ ಭೇಟಿಯ ಆಸೆಯಿಂದ ಪಂಢರಪುರಕ್ಕೆ ಪ್ರಯಾಣ ಬೆಳೆಸುತ್ತಾರೋ, ಅದೇ ರೀತಿ ಸನಾತನ ಧರ್ಮಕ್ಕಾಗಿ ವಿಶ್ವವ್ಯಾಪಿ ಕಾರ್ಯ ಮಾಡುತ್ತಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ೮೩ ನೇ ಜನ್ಮೋತ್ಸವಕ್ಕಾಗಿ ದೇಶವಿದೇಶಗಳಿಂದ ಸಾವಿರಾರು ಸಾಧಕರು ಮತ್ತು ಧರ್ಮಪ್ರೇಮಿ ಹಿಂದೂಗಳು ವಿವಿಧ ಮಾರ್ಗಗಳ ಮೂಲಕ ಇಂದು ಗೋವಾದ ಪಂಢರಿಗೆ ಪ್ರವೇಶಿಸಿದ್ದಾರೆ. ಇದು ಕೇವಲ ವಾಹನ ಜಾಥಾ ಅಲ್ಲ, ಶ್ರೀ ಗುರುದೇವರ ಮೇಲಿನ ಭಕ್ತಿಯ ದಿವ್ಯ ಯಾತ್ರೆಯಾಗಿದೆ. ಪತ್ರಕರ್ತರು, ಪೊಲೀಸರು ಮುಂತಾದವರು ನೀಡಿದ ಮಾಹಿತಿಯ ಪ್ರಕಾರ ಇದು ಗೋವಾದಲ್ಲಿ ಇದುವರೆಗಿನ ಅತಿದೊಡ್ಡ ಮಹೋತ್ಸವ ಇದಾಗಿದೆ.’’ ಈ ಮಹೋತ್ಸವದ ಹೆಚ್ಚಿನ ಮಾಹಿತಿಗಾಗಿ, ಹಾಗೂ ನೇರ ಪ್ರಸಾರವನ್ನು ವೀಕ್ಷಿಸಲು SanatanRashtraShankhnad.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ!

  • ತಮ್ಮ ವಿಶ್ವಾಸಿ,
    ಶ್ರೀ ಅಭಯ ವರ್ತಕ,
    ವಕ್ತಾರರು, ಸನಾತನ ಸಂಸ್ಥೆ,
    (ಸಂಪರ್ಕ: 99879 22222)

ವರದಿಗಾರರು : ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ