ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ರವರ ನೇತ್ರತ್ವದಲ್ಲಿ ಪ್ರಗತಿಪರ ಸಂಘಟನೆಯ ಒಕ್ಕೂಟಗಳಿಂದ ಗುರುವಾರ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು,
ಈ ಸಭೆಯಲ್ಲಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಉಪಾಧ್ಯಕ್ಷರಾದ ಎನ್ . ಭರ್ಮಣ್ಣನವರು ಮಾತನಾಡಿ ನಾವು ಈಗಾಗಲೇ ಸಾಕಷ್ಟು ಹೊರಟ ಮಾಡಿ ಬಹಳಷ್ಟು ರೈತರಿಗೆ ನ್ಯಾಯ ಕೊಡಿಸಿದ್ದೇವೆ ಈಗಿನ ಯುವಕರು ನಮಗೆ ವಯಸ್ಸಾದ ಕಾರಣ ಯುವಕರು ರೈತರಿಗೆ ಆಗುವ ಅನ್ಯಾಯವನ್ನು ಖಂಡಿಸಿ ವಿರೋಧಿಸಬೇಕೆಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಬಿ ಮರಿಸ್ವಾಮಿಯವರು ನಮ್ಮ ಸರ್ಕಾರಗಳಿಗೆ ಕಣ್ಣು ಕಿವಿ ಮೂಗು ಬಾಯಿ ಇವು ಯಾವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ರೈತರಿಗೆ ಹಾಗೂ ಕಾರ್ಮಿಕರಿಗೆ ಅಗುವ ಅನ್ಯಾಯಗಳಿಗೆ ನ್ಯಾಯ ಕೊಡಿಸದೆ ಕಿವುಡ ಮೂಕ ಕುರುಡ ನೀತಿಯನ್ನು ಅನುಸರಿಸುವ ಆಡಳಿತವಾಗಿ ಇದನ್ನು ನಾನು ಖಂಡಿಸುತ್ತೇನೆ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ನೀಡುತ್ತೇನೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರು ಹಾಗೂ ವಕೀಲರು ಟಿ . ಹನುಮಂತಪ್ಪನವರು ಮಾತನಾಡಿ ರೈತರ ಹಾಗೂ ಕಾರ್ಮಿಕರ ವಿರುದ್ದ ಕಾನೂನು ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರವನ್ನು ಹೇಳುತ್ತಾ ನಾವು ನಮ್ಮ ಸಂಘಟನೆಯಿಂದ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದರು.
ಅಖಿಲ ಕರ್ನಾಟಕ ಕಿಸಾನ್ ಜಾಗೃತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮರುಳು ಸಿದ್ದಪ್ಪ ಮಾತನಾಡಿ ರೈತರಿಗೆ ಪ್ರತಿ ವರ್ಷ ಬಿತ್ತನೆ ಸಮಯದಲ್ಲಿ ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳನ್ನು ಸರಿಯಾದ ಸಮಯಕ್ಕೆ ಒದಗಿಸುವುದು ಸರ್ಕಾರದ ಆದ ಕರ್ತವ್ಯ ಆದರೆ ಆ ಸಮಯಕ್ಕೆ ಸರಿಯಾಗಿ ಅಂಗಡಿಯ ಮಾಲೀಕರು ಗೊಬ್ಬರವನ್ನು ನೀಡದೆ ರೈತರಿಗೆ ಸತಾಯಿಸುವುದು ರೈತರಿಗೆ ಹಿಂಸೆ ಮಾಡುವುದು ಇದನ್ನು ನಾವು ರೈತ ಸಂಘಟನೆಯಿಂದ ವಿರೋಧಿಸುತ್ತೇನೆ ಮತ್ತು ನಿಮ್ಮ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.
ಪಿ ಚಂದ್ರಶೇಖರ್ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಹೆಚ್ಚಾಗಿ ನಮ್ಮ ಹಿಂದುಳಿದ ವರ್ಗ ದಲಿತರು ಕಾರ್ಮಿಕ ವೃತ್ತಿಯಲ್ಲಿ ತೊಡಗಿರುತ್ತಾರೆ ,
ಇವರಿಗೆ ಹಾಗೂ ಅನ್ಯಾಯವನ್ನು ಖಂಡಿಸಿ ನೀವುಗಳು ಪ್ರತಿಭಟನೆ ಮಾಡುವ ರ್ಯಾಲಿಗೆ ನಮ್ಮ ಸಹಕಾರ ಇರುತ್ತದೆ ಎಂದರು.
ಸಿಪಿಐ (ಎಂಎಲ್) ಲಿಬರೇಷನ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ರಾಮನಾಯಕ್ನಳ್ಳಿ ಅಜ್ಜಪ್ಪನವರು ಮಾತನಾಡಿ ಕಾರ್ಮಿಕರನ್ನು ಕಾನೂನಿನ ಪ್ರಕಾರ ಎಂಟು ಗಂಟೆಗಳ ಕಾಲ ಕೆಲಸ ನೀಡಬೇಕೆಂದು ಕಾನೂನು ಇದ್ದರು ಕೆಲವು ಮಾಲೀಕರು ಅವರನ್ನು 12 ಗಂಟೆಯವರೆಗೆ ಅವರಿಂದ ಕೆಲಸವನ್ನು ತೆಗೆದುಕೊಳ್ಳುತ್ತಾರೆ ಹೀಗೆ ಕೆಲಸವನ್ನು ತೆಗೆದುಕೊಳ್ಳುವುದು ಅವರಿಗೆ ಸರಿಯಾದ ಕೂಲಿಯನ್ನು ಕೊಡದೇ ಕುಡಿಯಲು ನೀರು ಕೊಡದೆ ಮತ್ತು ರಕ್ಷಕ ಕವಚಗಳನ್ನು ನೀಡದೆ ಬೇಕಾಬಿಟ್ಟಿಯಾಗಿ ದುಡಿಸಿಕೊಳ್ಳುವುದನ್ನು ನಮ್ಮ ಸಂಘಟನೆಯಿಂದ ಅದನ್ನು ವಿರೋಧಿಸುತ್ತೇವೆ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಪ್ರತಿಭಟನೆ ಮಾಡಲು ಹೊರಟಿರುವ ಸಂಘಟನೆಗಳಿಗೆ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ ಎಂದರು.
ಬೀದಿ ಬದಿ ವ್ಯಾಪಾರ ತಾಲೂಕು ಉಪಾಧ್ಯಕ್ಷರಾದ ಕೊಟ್ರಗೌಡರವರು ಬೀದಿ ಬದಿ ವ್ಯಾಪಾರಸ್ಥರ ಸ್ಥಿತಿ ಬಹಳ ದುಃಸ್ಥಿರವಾಗಿದೆ ಅವರಿಗೆ ನೆರಳು ಕೂಡಾ ಇರುವುದಿಲ್ಲ ಸಣ್ಣ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ನಿರ್ವಹಣೆ ಮಾಡುತ್ತಾರೆ, ನಮ್ಮ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಖಂಡಿಸುತ್ತಾ ತಮ್ಮ ಬಂದು ಪ್ರತಿಭಟನೆಗೆ ಸಹಕರಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಮಟ್ಟದ ಪದಾಧಿಕಾರಿಗಳು ರೈತರಿಗೆ ಹಾಗೂ ಕಾರ್ಮಿಕರಿಗೆ ಆಗುವ ಅನ್ಯಾಯವನ್ನು ಖಂಡಿಸುತ್ತಾ ಪದೇ ಪದೇ ಇದೇ ರೀತಿ ಇದೇ ರೀತಿ ರೈತ ಮತ್ತು ಕಾರ್ಮಿಕರ ಮೇಲೆ ಸರ್ಕಾರವು ತಿದ್ದುಪಡಿ ಮಾಡುವ ಮೂಲಕ ಹತ್ತಿಕುವ ಹುನ್ನಾರ ಮಾಡುತ್ತಿದೆ ನಮ್ಮ ದೇಶದಲ್ಲಿ ಸಮಾನ ವೇತನ ಎಂದು ಲೆಕ್ಕಿಸದೆ ದೀರ್ಘ ಸಮಯದವರಿಗೆ ಅಲ್ಪ ಪ್ರಮಾಣದ ಕೂಲಿ ಕೊಟ್ಟು ಜೀವನ ನಿರ್ವಹಣೆಗೂ ಕಷ್ಟವಾಗುವ ಸಂದರ್ಭವನ್ನು ಸೃಷ್ಟಿಸುತ್ತಾರೆ ಇಂಥ ಮಾಲೀಕರಿಗೆ ನಮ್ಮ ಸಂಘಟನೆಯಿಂದ ಧಿಕ್ಕಾರವಿರುತ್ತದೆ ಸರಕಾರವು ಇತ್ತಕಡೆ ಗಮನ ಹರಿಸಿ ಇವರಿಗೆ ನ್ಯಾಯ ಕೊಡಿಸಬೇಕು ಎಂದು ಮುಂಬರುವ ಪ್ರತಿಭಟನೆಯಲ್ಲಿ ಈ ವೇತನದ ಬಗ್ಗೆ ತಾವುಗಳು ಹೆಚ್ಚಾಗಿ ಮಾತನಾಡುವ ಮೂಲಕ ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದರು.
ಈ ಸಭೆಯಲ್ಲಿ ಪ್ರಗತಿ ಪರ ಸಂಘಟನೆಗಳ ಪಧಾದಿಕಾರಿಗಳು ತೀರ್ಮಾನಿಸಿ ಮೇ 20 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಕಾರ್ಮಿಕ ನೀತಿಗಳ ವಿರುಧ್ಧ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿ ಮಂಜುನಾಥ , ಜಿ ಮಲ್ಲಿಕಾರ್ಜುನ , ಬಾಲ ಗಂಗಾಧರ, ಹೊನ್ನೂರು ಸಾಹೇಬ್, ರಮೇಶ್ ನಾಯ್ಕ ,ಕೊಟ್ರೇಶ್, ಕರಿಯಪ್ಪ, ಮುರುಡಾಚಾರಿ ಹನುಮಂತ, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
