- ಅರ್ಕಾವತಿ ನದಿ ನೀರಿನಲ್ಲಿ ಪಾದರಸ ಹಾಗೂ ಕ್ರಿಮಿನಾಶಕ ಅಂಶಗಳು ಇವೆ ಎಂಬ ಮಾಧ್ಯಮ ವರದಿಯನ್ನು ಆಧಾರವಾಗಿಸಿಕೊಂಡು ರಾಷ್ಟೀಯ ಹಸಿರು ನ್ಯಾಯ ಪೀಠ (National Green tribunal ) ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದೆ.
- ಬೆಂಗಳೂರು ನಗರದ ತರಕಾರಿಗಳಲ್ಲಿ ಭಾರ ಲೋಹ ( heavy metals) ಗಳು ಇವೆ ಎಂದು ಮಾಧ್ಯಮ ವರದಿಗಳನ್ನು ಇತ್ತೀಚಿಗಷ್ಟೇ ಪತ್ರಿಕೆಗಳಲ್ಲಿ ಓದಿದ್ದೇವೆ.
- ಕೊಳಚೆ ನೀರು ಎಂದರೆ ಬರೀ ಕಸ ಕಡ್ಡಿಯಲ್ಲ, ಪಾದರಸ, ಕ್ರೋಮಿಯಂ,ಆರ್ಸೆನಿಕ್, ಸೀಸ ಇಂಥ ಭಾರ ಲೋಹಗಳು (ಭಾರವಾದ ಲೋಹ ಅಲ್ಲ) ಮನುಷ್ಯ ಹಾಗೂ ನಿಸರ್ಗದ ಇತರ ಜೀವಿಗಳಿಗೆ ಮಾರಕ.
ಇಂಥ ಭಾರ ಲೋಹಗಳು 3 ನೇ ಹಂತದ ಶುದ್ಧಿಕರಣದಲ್ಲಿ ಮಾತ್ರ ತೆಗೆಯಲು ಸಾಧ್ಯ.
4.ನಮ್ಮಲ್ಲಿರುವ ಕೆರೆ ಕುಂಟೆಗಳನ್ನು ಪುನರುಜ್ಜಿವನಗೊಳಿಸದೇ ಹೊರಗಿನಿಂದ ಕೊಳಚೆ ನೀರು ಶುದ್ಧ ಮಾಡಿ ಕೆರೆಗೆ ಹರಿಸುವುದು ಮೂರ್ಖತನ.
5.ಹೋರಾಟಕ್ಕೆ ಮೊದಲು ಅರಿವು ಮೂಡಿಸಬೇಕು, ಹೋರಾಟ ರಾಜಕೀಯ ಪ್ರೇರಿತವಾಗಿರಕೂಡದು. ಹೋರಾಟ ಕೊಳಚೆ ನೀರಿನ ವಿರುದ್ಧ ಮಾತ್ರ ಹುಟ್ಟಿಕೊಳ್ಳಬಾರದು. ಪರಿಸರ ಸಂರಕ್ಷಣೆಯ ಸಮಗ್ರ ಅರಿವಿಗಾಗಿ ಸಂಘಟನೆ ತುರ್ತಾಗಿ ಬೇಕಾಗಿದೆ. ಆದ್ದರಿಂದ, ನಮ್ಮ ನಮ್ಮ ಗ್ರಾಮಗಳಲ್ಲಿ ಮೊದಲು ಪರಿಸರ ಸಂರಕ್ಷಣೆ ಘಟಕಗಳನ್ನು ಸ್ಥಾಪನೆ ಮಾಡಿಕೊಳ್ಳೋಣ ನಂತರ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಘಟಕಗಳು ಸ್ಥಾಪನೆ ಮಾಡಬೇಕಾಗಿದೆ.
6.ಇತ್ತೀಚಿಗೆ ಜನರು ರಾಜಕೀಯ ಕಾರಣಗಳಿಂದ ಗುಂಪು ಗುಂಪಾಗಿ ಚದುರಿ ಹೋಗುತ್ತಿದ್ದಾರೆ. ಇದು, ನಾಗರಿಕ ಸಮಾಜವನ್ನು ನಿರ್ಮಾಣ ಮಾಡುವುದಿಲ್ಲ ಎಂಬುದು ನೆನಪಿರಲಿ. ಆದ್ದರಿಂದ, ಎಲ್ಲರೂ ಒಟ್ಟಾಗಿ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕಾದರೆ ‘ ಪರಿಸರ ಸಂರಕ್ಷಣೆ ಘಟಕ ಗಳನ್ನು ಸ್ಥಾಪಿಸೋಣ, ಅಂತರ್ಜಲ ಅಭಿವೃದ್ಧಿ, ಕೆರೆ ಕುಂಟೆಗಳ ಸಂರಕ್ಷಣೆ. ಜೀವ ವೈವಿಧ್ಯ ಸಂರಕ್ಷಣೆ, ಶೇ. 33 ರಷ್ಟು ಅರಣ್ಯ ಸಂರಕ್ಷಣೆ, ಕೃಷಿಯಲ್ಲಿ ರಾಸಾಯನಿಕಗಳನ್ನು ಕಡಿತಗೊಳಿಸುವುದು.
ನಮಗೆ ಅರಿವಿಲ್ಲದೆ ಆಹಾರ, ಗಾಳಿ ನೀರಿನ ಮೂಲಕ ದೇಹಕ್ಕೆ ಸೇರುತ್ತಿರುವ ವಿಷ ರಾಸಾಯನಿಕಗಳ ಮೂಲವನ್ನು ಗುರುತಿಸಿ ತಡೆಯುವುದು. ಹಾಗೆಯೇ, ವಿಷ ರಾಸಾಯನಿಕಗಳು ಪ್ರಾಣಿ ಪಕ್ಷಿಗಳು ಮತ್ತಿತರ ಜೇವಿಗಳ ದೇಹವನ್ನು ಸೇರುವುದನ್ನು ತಡೆಯುವುದು. ಇಂಥ ಪಾರಿಸಾರಿಕ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವಂತ ಸಮಗ್ರ ಪರಿಸರ ಶಿಕ್ಷಣವನ್ನು ತುರ್ತಾಗಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಪರಿಸರ ವೇದಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಜಾಗೃತಿಯನ್ನು ತರಬೇಕಾಗಿದೆ.
- ಡಾ. ಜಿ. ಬೈರೇಗೌಡ ,ಕೊಡಿಗೇಹಳ್ಳಿ, ನೆಲಮಂಗಲ ತಾಲ್ಲೂಕು.
