ಬೆಂಗಳೂರು : ವೃಷಭಾವತಿ ಹೆಸರಿನಲ್ಲಿ ಗ್ರಾಮೀಣ ಭಾಗದ ಕೆರೆಗಳಿಗೆ ಕೊಳಚೆ ನೀರು ಹರಿಸದೆ ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಬೇಕು:
ಈ ಪರಿಸರ ವಿರೋಧಿ ಯೋಜನೆಯ ಕುರಿತು ಸಾಮಾಜಿಕ ಹೋರಾಟಗಾರ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಹ್ಯಾಡಾಳು ಹರ್ಷ ಮಾತನಾಡಿ ನಾಯಂಡಹಳ್ಳಿಯ ಸಂಸ್ಕರಣಾ ಘಟಕದಿಂದ ಕೇವಲ ಎರಡು ಹಂತದಲ್ಲಿ ಸಂಸ್ಕರಣೆಗೊಂಡು ರೈಸಿಂಗ್ ಪೈಪ್ ಮೂಲಕ ಮೊದಲ ಲಿಫ್ಟ್ ಹಂತದಲ್ಲಿ ಯಲಹಂಕ ಕ್ಷೇತ್ರದ 7 ಕೆರೆ, ಯಶವಂತಪುರ ಕ್ಷೇತ್ರದ 5 ಕೆರೆ, ನೆಲಮಂಗಲ ಕ್ಷೇತ್ರದ 9 ಕೆರೆ ಸೇರಿದಂತೆ ಒಟ್ಟು 21 ಕೆರೆಗಳಿಗೆ ತಲುಪಿದರೆ ಎರಡನೇ ಲಿಫ್ಟ್ ಹಂತದಲ್ಲಿ ನೆಲಮಂಗಲದ ಹುರುಳಿ ಹಳ್ಳಿ ಕೆರೆಯಿಂದ ರೈಸಿಂಗ್ ಪೈಪ್ ಮೂಲಕ ತುಮಕೂರು ಗ್ರಾಮಾಂತರ ಕ್ಷೇತ್ರದ 07 ಕೆರೆ ನೆಲಮಂಗಲ ಕ್ಷೇತ್ರದ 41 ಕೆರೆ ಹಾಗೂ ದೊಡ್ಡಬಳ್ಳಾಪುರ ಕ್ಷೇತ್ರದ 01 ಕೆರೆಗೆ ಹರಿಸಲಾಗುತ್ತದೆ,
ಯಲಹಂಕ ಕ್ಷೇತ್ರದ ಗೋಪಾಲಪುರ, ಹುಸ್ಕೂರು, ಅಗ್ರಹಾರಪಾಳ್ಯ, ವಡೇರಹಳ್ಳಿ, ಹುಚ್ಚನಪಾಳ್ಯ, ಕೋಡಿಪಾಳ್ಯ ತಲುಪಿ ನೆಲಮಂಗಲ ಕ್ಷೇತ್ರದ ಶ್ರೀನಿವಾಸಪುರ, ಮೈಲನಹಳ್ಳಿ, ಕಣೇಗೌಡನಹಳ್ಳಿ ಮೂಲಕ ನೆಲಮಂಗಲದ ಅಮಾನಿಕೆರೆ, ಬಿನ್ನಮಂಗಲ ಕೆರೆ ಮೂಲಕ ಮುಂದೆ ಸಾಗುವ ನೀರು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಕಾವೇರಿ ನದಿ ಸೇರಲಿದೆ, ಮತ್ತೊಂದೆಡೆ ಮೈಲನಹಳ್ಳಿ ಮೂಲಕ ಬರುವ ನೀರು ವೀರನಂಜಿಪುರದ ಎರಡು ಕೆರೆ, ಹುರುಳಿಹಳ್ಳಿ, ಕಾಚನಹಳ್ಳಿ ಕೆರೆ ತಲುಪಲಿದೆ ಬಳಿಕ ಎರಡನೇ ಹಂತದಲ್ಲಿ ಹುರುಳಿಹಳ್ಳಿಯಿಂದ ಲಿಫ್ಟ್ ಆಗಿ ರೈಸಿಂಗ್ ಪೈಪ್ ಮುಖಾಂತರ ಟಿ.ಬೇಗೂರು ಚಿಕ್ಕ ಕೆರೆ ಮತ್ತು ದೊಡ್ಡ ಕೆರೆ, ತಿರುಮಲಾಪುರ, ಅರಳಸಂದ್ರ, ಕೆಂಪೋಹಳ್ಳಿ, ದೊಡ್ಡೇರಿಯ ಎರಡು ಕೆರೆಗಳು, ಗೋವೇನಹಳ್ಳಿ, ಕಳಲುಘಟ್ಟ, ಹನುಮಂತಪುರ,ಕೆರೆಕತ್ತಿಗನೂರು,ಕಾಸರಘಟ್ಟ,ಬಸವಾಪಟ್ಟಣ,ಕಂಬಾಳು,ಹೊಸಹಳ್ಳಿ,ಬೀರಗೊಂಡನಹಳ್ಳಿ, ತ್ಯಾಮಗೊಂಡ್ಲು ಅಮಾನಿಕೆರೆ 1-2-3, ಲಕ್ಕೂರು,ನಿಡವಂದ,ಮಣ್ಣೆ,ನಿಜಗಲ್ ಕೆಂಪೋಹಳ್ಳಿ, ಚನ್ನೋಹಳ್ಳಿ, ನರಸೀಪುರ, ತಟ್ಟೆಕೆರೆ, ಕರಿಮಣ್ಣೆ, ಹೆಗ್ಗುಂದ, ನಿಜಗಲ್ಲು,ಹಳೇನಿಜಗಲ್ಲು,ಕೆಂಗಲ್ 1-2 ಕೆರೆಗಳಿಗೆ ವೃಷಭಾವತಿ ಕೊಳಚೆ ನೀರು ಸೇರಲಿದೆ, ಈ ಕೊಳಚೆ ನೀರು ಅಂತರ್ಜಲ ಮಟ್ಟ ಸೇರಿ ಕುಡಿಯುವ ನೀರಿನ ಬೋರ್ವೆಲ್ ಗಳಲ್ಲಿ ಬಂದಲ್ಲಿ ಮುಂದಿನ ದಿನಗಳಲ್ಲಿ ಸುಮಾರು 69 ಹಳ್ಳಿಗಳ ಜನರ ಬದುಕು ದುಸ್ಥಿರ ಸ್ಥಿತಿಗೆ ತಲುಪಿ ಊಹೆಗೂ ನಿಲುಕದಷ್ಟು ಸಾವು ನೋವು ರೋಗ-ರುಜಿನಗಳು ಸಂಭವಿಸುವ ಸಾಧ್ಯತೆ ಹೆಚ್ಚಿದ್ದು ನೀರಿ (ನ್ಯಾಷನಲ್ ಎನ್ವಿರಾಲ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಟಿಟ್ಯೂಟ್ ಸಂಸ್ಥೆಯು ಹೈಕೋರ್ಟ್‌ಗೆ ವಿಷಪೂರಿತ ನೀರಿನ ಬಗ್ಗೆ ಸಂಪೂರ್ಣ ವರದಿ ನೀಡಿರುತ್ತದೆ ವರದಿಯಲ್ಲಿ ಈ ವೃಷಭಾವತಿ ಹೆಸರಿನಲ್ಲಿ ಹರಿಯುತ್ತಿರುವ ನೀರು ಜೀವಮಾನದಲ್ಲೇ ಸರಿಪಡಿಸಲಾಗದಷ್ಟು ಹಾಳಾಗಿದೆ ಎಂದು ತಿಳಿಸಿರುತ್ತದೆ ಯಾವುದೇ ಹಂತದಲ್ಲಿಯೂ ಆ ನೀರನ್ನು ರೀಜನರೇಟ್ ಮಾಡಲು ಸಾಧ್ಯವಿಲ್ಲ ಕಾರ್ಕಾನೆಗಳ ಹಾಗೂ ಅಪಾರ್ಟ್‌ಮೆಂಟ್ಗಳ ನೀರು ನದಿ ಪಾತ್ರಕ್ಕೆ ಸೇರುತ್ತಿರುವುದರಿಂದ ಸಂಪೂರ್ಣ ಮಲಿನವಾಗಿ ವಿಷವಾಗಿ ಪರಿವರ್ತನೆಯಾಗಿದೆ ಆರ್ ಆರ್ ನಗರದ ಬಿ.ಬಿ.ಎಂ.ಪಿ ಆರ್ ಓ ಅಡಿಯಲ್ಲಿ ಬರುವ ಎಲ್ಲಾ ಕಾರ್ಖಾನೆಗಳು ಕಲುಷಿತ ನೀರನ್ನು ಬಿಡುಗಡೆ ಮಾಡುತ್ತಿರುವುದನ್ನು ಫೋಟೋ ದಾಖಲೆ ಸಹಿತ ಮಾನ್ಯ ನ್ಯಾಯಾಲಯಕ್ಕೆ ನೀಡಿರುತ್ತದೆ, ಈ ನೀರನ್ನು ರೀ ಜನರೇಟ್ ಮಾಡಲು ಯಾವ ರೀತಿಯ ಬಫರ್ ಜೋನ್‌ಗಳನ್ನು ಮೀಸಲಿರಿಸಬೇಕು ಅಷ್ಟೇ ಅಲ್ಲದೇ ಆರು ಅಡಿಗಳಷ್ಟು ಫೆನ್ಸಿಂಗ್ ಸಹ ಅಳವಡಿಸಬೇಕು ಜೊತೆಗೆ ವ್ಯಾಲಿಯ ಪಕ್ಕದಲ್ಲಿ ರಸ್ತೆಯನ್ನು ಸಹ ನಿರ್ಮಾಣ ಮಾಡಬೇಕು ಎಂಬೆಲ್ಲಾ ವಿವರವನ್ನು ನೀರಿ ಸಂಸ್ಥೆಯು ವರದಿಯಲ್ಲಿ ಸಂಕ್ಷೀಪ್ತವಾಗಿ ತಿಳಿಸಿರುತ್ತದೆ ಈ ಮೊದಲು ಕೆ.ಸಿ ವ್ಯಾಲಿ ಮಾಡುವಾಗ ಸರ್ಕಾರ ಐ ಐ ಎಸ್ ಸಿ ಮುಖ್ಯಸ್ಥರಾದ ಟಿ. ವಿ. ರಾಮಚಂದ್ರ ಅವರನ್ನು ವರದಿ ಕೇಳಲಾಗಿ ಈ ಯೋಜನೆಯ ನೀರನ್ನು ಎರಡು ಅಂತದಲ್ಲಿ ಶುದ್ದೀಕರಿಸಿದರೆ ಸಾಕಾಗುವುದಿಲ್ಲ ಈ ನೀರು ಮೂರನೇ ಅಂತದಲ್ಲಿ ಶುದ್ದೀಕರಣವಾಗಲೇಬೇಕು ಈಗಾಗಲೇ 10 ವರ್ಷಗಳು ಕಳೆದರೂ 3 ನೇ ಹಂತದಲ್ಲಿ ಶುದ್ದೀಕರಣವಾಗದೇ ಹಾಗೇ ಇದೆ, ಈಗಾಗಲೇ ಹೈಕೋರ್ಟ್ ಗೂ ಸಹ ಅಂದಿನ ಬೊಮ್ಮಾಯಿ ಸರ್ಕಾರ ಪ್ರತಿ ದಿನವೂ ನೀರಿನ ಪರೀಕ್ಷೆಯ ರಿಪೋರ್ಟ್ ನೀಡುತ್ತೇವೆ ಎಂದು ತಿಳಿಸಿರುತ್ತಾರೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಪರೀಕ್ಷಾ ವರದಿಯನ್ನು ಸಲ್ಲಿಸಿರುವುದಿಲ್ಲ, 2024 ರ ಸೆಷನ್ ಈ ಕುರಿತು ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಧ್ವನಿ ಎತ್ತಿದಾಗ ವೀರಾವೇಷದಲ್ಲಿ ಮಾತನಾಡಿದ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ನಾವು ಬಹಳ ಅದ್ಬುತವಾದ ನೀರನ್ನು ಶುದ್ದೀಕರಿಸುತ್ತಿದ್ದೇವೆ ಈ ನೀರು ಬಂದಾಗಿನಿಂದ ಕೋಲಾರ ಹಾಗೂ ಸುತ್ತ ಮುತ್ತಲಿನ ಜನರಿಗೆ ಡಯೇರಿಯಾ, ಮಲೇರಿಯಾ ಹಾಗೂ ಟೈಫಾಯಿಡ್ ಜ್ವರವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಸ್ಕಾಡ ಎಂಬ ಟೆಕ್ನಾಲಜಿ ಯನ್ನು ಬಳಸಿಕೊಂಡು ಆ ಟೆಕ್ನಾಲಜಿಯ ಮೂಲಕ ಪ್ರತಿ ದಿನವೂ ನೀರಿನ ಪರೀಕ್ಷಾ ವರದಿಯನ್ನು ಆನ್ಲೈನ್ ನಲ್ಲಿ ನೀಡುತ್ತದೆ ಎಂದು ತಿಳಿಸಿದರು ಆದರೆ ಈವರೆಗೂ ಆ ರೀತಿಯ ಯಾವ ವರದಿಯನ್ನು ಸಹ ನೀಡಿರುವುದಿಲ್ಲ, 10 ಲಕ್ಷ ಲೀಟರ್ ನೀರಿಗೆ 01 ಎಂ.ಎಲ್.ಡಿ ಆದರೆ ಒಟ್ಟು 300 ಎಂ.ಎಲ್.ಡಿ ಕಲುಷಿತ ನೀರನ್ನು ನಮ್ಮ ನೆಲಮಂಗಲ ಭಾಗಕ್ಕೆ ತರಲು ಶಾಸಕರು ಸಿದ್ದವಾಗಿದ್ದಾರೆ, ಒಂದು ಎಂ.ಎಲ್.ಡಿ ನೀರನ್ನು ಶುದ್ದೀಕರಿಸಲು ಸುಮಾರು 1.50 ಕೋಟಿ ಖರ್ಚಾಗಲಿದ್ದು ಪ್ರೈಮರಿ ಮತ್ತು ಸೆಕೆಂಡರಿ ಖರ್ಚು 370 ಕೋಟಿಯಾದರೆ ಅಂದಾಜು ಒಂದು ವರ್ಷಕ್ಕೆ ಸುಮಾರು 800 ಕೋಟಿಗಳಷ್ಟು ಖರ್ಚು ಬರಲಿದೆ ಇಷ್ಟು ಖರ್ಚನ್ನು ಪ್ರತಿ ವರ್ಷ ವ್ಯಯ ಮಾಡಲು ಸರ್ಕಾರಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೇ ಶುದ್ದೀಕರಣವಾದರೂ ಸಹ ಅದು ಕೇವಲ ಬೆಂಗಳೂರಿಗರು ಗೃಹಪಯೋಗಕ್ಕೆ ಬಳಕೆ ಮಾಡಿದ ನೀರು ಮಾತ್ರ ಶುದ್ದವಾಗುತ್ತದೆ ಹೊರತು ಅದರಲ್ಲಿಯೂ ಸಹ ಯಾವುದೇ ರಾಸಾಯನಿಕ ಅಂಶಗಳು ಮಿಶ್ರಣವಾಗಬಾರದೆಂದು ಟಿ. ವಿ. ರಾಮಚಂದ್ರ ಅವರು ನೀಡಿರುವ ವರದಿಯಲ್ಲಿ ಇರುತ್ತದೆ, ಪೀಣ್ಯ ಕೈಗಾರಿಕಾ ಪ್ರದೇಶ, ಮಾದಾವರ ಕೈಗಾರಿಕಾ ಪ್ರದೇಶ ಹಾಗೂ ರಾಜಾಜಿನಗರದ ಕೈಗಾರಿಕಾ ಪ್ರದೇಶದ ನೀರು ಸಹ ಇದೇ ವ್ಯಾಲಿಗೆ ಸೇರಲಿದ್ದು ಕೆಮಿಕಲ್ ಮಿಶ್ರಿತ ನೀರು ಎಷ್ಟು ಭಾರಿ ಶುದ್ದೀಕರಣ ಮಾಡಬೇಕೆಂದು ಈವರೆಗೂ ಎಲ್ಲಿಯೂ ಸಹ ತಿಳಿಸಿರುವುದಿಲ್ಲ, ಕೇಂದ್ರದ ನಿಯಮವಿರುವುದು ಪ್ರತಿ ಕೆರೆಗಳಿಗೂ ನೀರು ಎಂಬ ಯೋಜನೆ ಇದ್ದರೂ ನಗರ ಪ್ರದೇಶದ ನೀರನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳುವಂತೆ ತಿಳಿಸಿರುತ್ತಾರೆ, ಆದರೆ ಈ ರೀತಿಯ ಕೆಮಿಕಲ್ ಕಲುಷಿತ ನೀರಿನ ಬಳಕೆಯ ಕುರಿತು ಎಲ್ಲಿಯೂ ಪ್ರಸ್ಥಾಪಿಸಿರುವುದಿಲ್ಲ, ಅದರ ಡಿ.ಪಿ.ಆರ್ ಪ್ರತಿಯನ್ನು ಕೇಳಿ 2 ತಿಂಗಳುಗಳೇ ಕಳೆದರೂ ಈ ವರೆಗೂ ನಮಗೆ ಮೇಲ್ಮನವಿ ಸಲ್ಲಿಸಿದರೂ ಸಹ ಡಿ.ಪಿ.ಆರ್ ಪ್ರತಿಯನ್ನು ನೀಡಿರುವುದಿಲ್ಲ, ಈ ಯೋಜನೆಯ ಅಡಿಯಲ್ಲಿ ಅತಿ ಹೆಚ್ಚು ಆರ್.ಡಿ.ಪಿ.ಆರ್ ಕೆರೆಗಳು ಇದ್ದು ದನಕರುಗಳು ನೀರು ಕುಡಿಯಲು ಬಹಳ ಅವಶ್ಯಕವಾಗಿರುತ್ತದೆ ಆದರೆ ಈ ವೃಷಭಾವತಿ ಕೋಳಚೆ ನೀರನ್ನು ತುಂಬಿಸುವ ಕೆರೆಗಳಲ್ಲಿ ದನ-ಕರುಗಳು ನೀರು ಕುಡಿಯಬಾರದು ಮತ್ತು ಕೃಷಿಗೆ ಸಂಭಂದಿಸಿದಂತೆ ಎಲ್ಲಿಯೂ ನೇರವಾಗಿ ಈ ನೀರನ್ನು ಬಳಸಬಾರದು ಎಂದು ಎಚ್ಚರಿಕೆಯ ಫಲಕವನ್ನು ಅಳವಡಿಸುತ್ತಾರೆ, ಈ ರೀತಿಯಾದರೆ ಪಶು-ಪಕ್ಷಿಗಳು ಎಲ್ಲಿ ನೀರು ಕುಡಿಯಬೇಕು ಈ ನೀರು ಕೇವಲ 2 ವರ್ಷಗಳು ಮಾತ್ರ ಭೂಮಿಯಲ್ಲಿ ವಿಲೀನವಾಗುವುದು ನಂತರ ಭೂಮಿಯ ಪದರಗಳು ಕಾಂಕ್ರೀಟ್ ಮಾದರಿಯಲ್ಲಿ ಪರಿವರ್ತನೆಯಾಗಿ ನೀರು ಭೂಮಿಯಲ್ಲಿ ಇಂಗದೆ ಅಲ್ಲೇ ಕೊಳೆಯಲು ಶುರುವಾಗುತ್ತದೆ ಇದರಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಕ್ಕೆ ಜನ ತುತ್ತಾಗಿ ಮಕ್ಕಳಲ್ಲಿ ಅಂಗವೈಕಲ್ಯವೂ ಸಹ ಹೆಚ್ಚಾಗುತ್ತದೆ, ಈ ನೀರಿನಲ್ಲಿ ಕಿಂಗ್ ಆಫ್ ಪಾಯಿಸನ್ ಎನಿಸಿಕೊಳ್ಳುವ ಅರ್ಸನಿಕ್ ಅಂಶವು ಸಹ ಹೆಚ್ಚಾಗಿದೆ, ಈಗಾಗಲೇ ಅಡ್ವಕೇಟ್ ಗೀತಾ ಮಿಶ್ರಾ ಅವರು ಹೈಕೋರ್ಟ್ ಪಿ ಎಲ್ ಫೈಲ್ ಮಾಡಿರುತ್ತಾರೆ, ಕೂಡಲೇ ನಮ್ಮಗಳ ಅಸ್ತಿತ್ವದ ಉಳಿವಿಗೆ ಕಾನೂನು ಮೂಲಕ ಹೋರಾಟ ನೆಡೆಸಲು ಯುವಜನತೆ ಮುಂದಾಗಬೇಕು ಎಂದು ತಾಲ್ಲೂಕಿನ ಜನತೆಗೆ ಯೋಜನೆಯ ವಿರುದ್ದ ಹೋರಾಡಲು ಕರೆ ನೀಡಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಜನಾಭಿಪ್ರಾಯ ಹಾಗೂ ಆಂದೋಲನಗಳು ಪ್ರಾರಂಭವಾಗಿವೆ.
- ಕರುನಾಡ ಕಂದ
