ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ನಾಟಕಗಳ ವಿಭಿನ್ನ ನೆಲೆಗಳು : ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟ

ಗ್ರಾಮೀಣ ಸೊಗಡೆ ಕನ್ನಡ ನಾಟಕಗಳ ಜೀವಾಳ: ಡಾ.ವೀರೇಶ ಬಡಿಗೇರ


ಬಾಗಲಕೋಟೆ: ಜಾನಪದ ಹಾಗೂ ಶಾಸ್ತ್ರೀಯ ಕಾವ್ಯ ಕೃತಿಗಳನ್ನು ಮರು ವಾಖ್ಯಾನಿಸಿ, ವಿಭಿನ್ನವಾಗಿ ಕಟ್ಟಿಕೊಡುವ ವಿಶಿಷ್ಟ ಸಾಮರ್ಥ್ಯ ಕನ್ನಡ ಕವಿಗಳಿಗೆ ಮಾತ್ರ ದಕ್ಕಿದ್ದು, ಆ ಪರಂಪರೆಯ ಮುಂದುವರಿಕೆಯಾಗಿ ನಾವು ಕನ್ನಡ ನಾಟಕಗಳ ಬೆಳೆದು ಬಂದ ಬಗೆಯಲ್ಲಿ ಕಂಡುಕೊಳ್ಳಬಹುದಾಗಿದೆ, ಗ್ರಾಮೀಣ ಸೊಗಡೆ ಕನ್ನಡ ನಾಟಕಗಳ ಜೀವಾಳವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಹಾಗೂ ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಹೇಳಿದರು.
ಅವರು ನವನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ, ಗುಳೆದಗುಡ್ಡದ ರಾಷ್ಟ್ರೀಯ ಸಂಶೋಧನಾ ವೇದಿಕೆ, ಇವರುಗಳ ಸಹಯೋಗದಲ್ಲಿ “ಕನ್ನಡ ನಾಟಕಗಳ ವಿಭಿನ್ನ ನೆಲೆಗಳು” ಕುರಿತು ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟವನ್ನು ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕನ್ನಡ ನಾಟಕಗಳ ಕಥಾವಸ್ತುವಿಗೆ ಮೂಲ ಬೇರು ಸಿಗುವುದು ನಮ್ಮ ಗ್ರಾಮೀಣ ಭಾಗದ ಜನ ಸಮುದಾಯದ ನಿತ್ಯದ ಸಂಹವನ, ಸಂಭಾಷಣೆ, ಹಾವ ಭಾವಗಳ ಅನುಕರಣೆ ಮೂಲಕ ನೆಲೆ ಕಂಡುಕೊಂಡದ್ದಾಗಿದೆ, ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದಾಗ ಕನ್ನಡ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಟನೆ ಮತ್ತು ಅಭಿನಯಕ್ಕೆ ಸೂಕ್ಷ್ಮವಾದ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ, ಒಬ್ಬರು ಹೇಳಿದಂತೆ ನಟಿಸುವುದು ನಟನೆಯಾದರೆ, ಅನುಭವಿಸಿ ಅಭಿವ್ಯಕ್ತಿಸುವುದು ಅಭಿನಯವಾಗಿದೆ, ಅಭಿನಯದ ಮೂಲಕ ಅಭಿವ್ಯಕ್ತಿಗೊಂಡ ಕಲೆಯೇ ನಾಟಕವೆನಿಸಿಕೊಳ್ಳುತ್ತದೆ ಎಂದರು.
ರಾಷ್ಟೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷರಾದ ಡಾ. ಸಂಗಮೇಶ ಕಲ್ಯಾಣಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಸಮಾಜದ ಏರುಪೇರುಗಳನ್ನು ತಿದ್ದುವ, ತಿಳುವಳಿಕೆ ನೀಡುವ, ಅರಿವು ಮೂಡಿಸೂವ ವಿಷಯಗಳ ಮೇಲೆ ನಾಟಕ ರಚನೆ, ಅಭಿನಯ, ಅನುಭವಗಳ ಮಾತು ಎಲ್ಲವೂ ಬೇಕಾಗುತ್ತದೆ. ಹಳಗನ್ನಡದ ಚಂಪೂ ಕಾವ್ಯಗಳನ್ನು ಓದಿದರೆ ಹತ್ತಾರು ಕನ್ನಡ ನಾಟಕಗಳನ್ನು ಬರೆಯಬಹುದು, ನಾಟಕ ರಚನೆಯಲ್ಲಿ ಹೆಚ್ಚು ಅನುಭವ ಮುಖ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಅರುಣಕುಮಾರ ಗಾಳಿ ಮಾತನಾಡಿ, ಕನ್ನಡ ನಾಟಕ ಪರಂಪರೆ ಶ್ರೀಮಂತವಾಗಿದೆ. ನಮ್ಮ ನವನಗರ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸಂಶೋಧನಾ ಕಮ್ಮಟದ ವಿಷಯವು ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಇದ್ದ ಕಾರಣ ನಾಡಿನ ಅನೇಕ ಸಂಪನ್ಮೂಲ ವ್ಯಕ್ತಿಗಳನ್ನು ಆಮಂತ್ರಿಸಿ, ಕುವೆಂಪು ಅವರ ಶೂದ್ರ ತಪಸ್ವಿ, ಕಂಬಾರ ಅವರ ಶಿವರಾತ್ರಿ ಹಾಗೂ ಕಾರ್ನಾಡ ಅವರ ತಲೆದಂಡ ನಾಟಕಗಳ ವಸ್ತು ಅವುಗಳ ಮಹತ್ವ ತಿಳಿಸುವ ಉದ್ದೇಶವಾಗಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಿದೆ ಎಂದರು.
ಕನ್ನಡ ವಿಭಾದ ಸಹ ಪ್ರಾಧ್ಯಾಪಕರಾದ ಡಾ. ಜಿ. ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನಾಟಕಗಳ ವಿಭಿನ್ನ ನೆಲೆಗಳ ಕುರಿತಾಗಿ ನಡೆದ ಸಂಶೋಧನಾ ಕಮ್ಮಟದ ಆಶಯಗಳನ್ನು ವಿವರವಾಗಿ ತಿಳಿಸಿದರು. ರಾಷ್ಟ್ರೀಯ ಸಂಶೋಧನಾ ವೇದಿಕೆಯ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಗೋಷ್ಠಿ -1 ರಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಸದಾಶಿವ ದೊಡ್ಡಮನಿ ಅವರು ಕುವೆಂಪು ಅವರ ಶೂದ್ರ ತಪಸ್ವಿ ನಾಟಕ ಕುರಿತು ವಿಷಯ ಮಂಡನೆ ಮಾಡಿದರು, ಗದಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಗೋಷ್ಠಿ -2 ರಲ್ಲಿ ಯರಗಟ್ಟಿಯ ಸಿ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರಾಜಶೇಖರ ಬಿರಾದಾರ ಅವರು ಕಂಬಾರ ಅವರ ಶಿವರಾತ್ರಿ ನಾಟಕ ಕುರಿತು ವಿಷಯ ಮಂಡನೆ ಮಾಡಿದರು ರಂಗ ನಿರ್ದೇಶಕರಾದ ಪ್ರೊ.ಶ್ರೀಹರಿ ಧೂಪದ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಷ್ಠಿ -3 ರಲ್ಲಿ ಧಾರವಾಡದ ಅಂಜುಮನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರುದ್ರೇಶ ಮೇಟಿ ಅವರು ಕಾರ್ನಡ ಅವರ ತಲೆದಂಡ ನಾಟಕ ಕುರಿತು ವಿಷಯ ಮಂಡನೆ ಮಾಡಿದರು. ಬೀಳಗಿಯ ಮಹಿಳಾ ಸಾಹಿತಿಗಳಾದ ಡಾ.ವಿಜಯಶ್ರೀ ಇಟ್ಟಣ್ಣವರ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಸಂಶೋಧನಾ ಕಮ್ಮಟದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೊಡ, ಸಾಹಿತಿ ಡಾ.ಸಣ್ಣವೀರಣ್ಣ ದೊಡ್ಡಮನಿ, ಸಿ.ಎನ್.ಬಾಳಕ್ಕನವರ, ಪಾಂಡುರಂಗ ಸಣ್ಣಪ್ಪನವರ, ಮಲ್ಲಿಕಾರ್ಜುನ ಸಜ್ಜನ, ಪತ್ರಕರ್ತ ಜಗದೀಶ ಹದಲಿ ಡಾ.ಮಲ್ಲಿಕಾರ್ಜುನ ಇಂಚಲ, ಡಾ.ಮೌನೆಶ ಕಮ್ಮಾರ, ಬಸವರಾಜ ಕುಂಬಾರ, ಡಾ.ವೀಣಾ ಕಲ್ಮಠ, ಸುನೀಲ ನಡಕಟ್ಟಿ, ಸಂಗಮೇಶ ಬ್ಯಾಳಿ, ಸಂಗಮೇಶ ಬಡಿಗೇರ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ಹಾಗೂ ನವನಗರ ಕಾಲೇಜಿನ ಬೋಧಕರು, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಸಾವಿತ್ರಿ ಮುತ್ತಗಿ ಪ್ರಾರ್ಥನೆ ಮಾಡಿದರು, ಪ್ರೊ.ಪರಸಪ್ಪ ತಳವಾರ ಸ್ವಾಗತಿಸಿದರು. ಡಾ.ಸುಮಂಗಲಾ ಮೇಟಿ ಕಾರ್ಯಕ್ರಮ ನಿರೂಪಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ