ಬಳ್ಳಾರಿ / ಕಂಪ್ಲಿ : ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕ್ರಿಯಾಶೀಲತೆಯಿಂದ ಶ್ರಮವಹಿಸಬೇಕು ಎಂದು ತಹಶೀಲ್ದಾರ್ ಮಂಜುನಾಥ ನಾಯಕ ಹೇಳಿದರು.
ಪಟ್ಟಣದ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕಲಿಯುವ ವಯಸ್ಸಿನಲ್ಲಿ ಮಕ್ಕಳ ದುಡಿಮೆ ಆತoಕಾರಿ ಬೆಳವಣಿಗೆಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಹಾಗೂ ಜನಜಾಗೃತಿ ಅವಶ್ಯಕವಾಗಿದೆ ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ, ಆಟ, ವಿರಾಮ, ಆಹಾರ ಎಲ್ಲಾ ರೀತಿಯ ಹಕ್ಕಗಳನ್ನು ಪಡೆಯಬೇಕು. ಇಲ್ಲವಾದರೆ ಅವರ ಬೆಳವಣಿಗೆ ಕುಂಠಿತವಾಗುತ್ತದೆ ಬಡತನ ನೆಪಮಾಡಿಕೊಂಡು ಬಾಲಕಾರ್ಮಿಕತನಕ್ಕೆ ಇಳಿಯುವ ಮಕ್ಕಳು ತಮ್ಮ ಎಲ್ಲಾ ಮಕ್ಕಳ ಹಕ್ಕುಗಳಿಂದ ವoಚಿತರಾಗುತ್ತಿದ್ದಾರೆ ಅದನ್ನು ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯು ಪ್ರತಿ ವರ್ಷ ಜೂನ್ 12ನ್ನು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಮುಖ್ಯಗುರು ಕೆ.ವಿಷ್ಣು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಮಕ್ಕಳಿಗೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಆರ್. ಕೆ. ಶ್ರೀ ಕುಮಾರ, ಪ್ರಭಾರಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಶಾಲೆಯ ಮುಖ್ಯಸ್ಥ ಸುಬ್ಬಾರಾವ್, ಎಎಸ್ಐ ಗಂಗಣ್ಣ, ಶಿಕ್ಷಣ ಸಂಯೋಜಕ ಟಿ.ಎಂ.ಬಸವರಾಜ, ಆರೋಗ್ಯ ನಿರೀಕ್ಷಕ ಪಿ.ಬಸವರಾಜ, ಅಂಗನವಾಡಿ ಮೇಲ್ವಿಚಾರಕಿ ಲತೀಫಾಬೇಗಂ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















