ಬಾಗಲಕೋಟೆ : ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತರಲು ಇಂದು (ರವಿವಾರ ದಿ.13) ರಂದು ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆಯ ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ಜಿಲ್ಲೆಯ ಕಲಾವಿದರ ಸಭೆಯನ್ನು ಕರೆಯಲಾಗಿದೆ ಎಂದು ಕಲಾವಿದರಾದ ಆನಂದಕುಮಾರ್ ಕಂಬಳಿಹಾಳ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಜಿಲ್ಲೆಯ ಸಂಗೀತಗಾರರು, ಜನಪದ ಸಂಗೀತಗಾರರು, ರಂಗಭೂಮಿ ಕಲಾವಿದರು, ಸಾಹಿತಿಗಳು ಸೇರಿದಂತೆ ಎಲ್ಲಾ ಮುಖಂಡರುಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಸೇರಿದ ಕಲಾವಿದರೊಂದಿಗೆ ಚಚಿ೯ಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಿ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತರಲು ಸಹಕರಿಸಬೇಕೆಂದು ಆನಂದಕುಮಾರ್ ಕೋರಿದ್ದಾರೆ.
- ಕರುನಾಡ ಕಂದ



















