ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನವಿಗೆ ಸ್ಪಂದಿಸಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಧನ್ಯವಾದ ಅರ್ಪಿಸಿದವರುಣ್ ಚಕ್ರವರ್ತಿ

ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದಿಂದ ರಾತ್ರಿ ಸಮಯದಲ್ಲಿ ಗೋಣಿಬೀಡು- ಬೇಲೂರು ಮಾರ್ಗವಾಗಿ ಹಾಸನ ನಗರ ಸೇರಿದಂತೆ ಚನ್ನರಾಯಪಟ್ಟಣ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ ಬಸ್ ಸಂಚಾರ ಆರಂಭಿಸುವ ಬಗ್ಗೆ, ವರುಣ್ ಚಕ್ರವರ್ತಿ ಅವರು ಮನವಿ ಮಾಡಿದ್ದರು
ಈ ವಿಷಯಕ್ಕೆ ಸಂಭಂಧಿಸಿದಂತೆ, ಅಖಿಲ ಕರ್ನಾಟಕ ವಿಧ್ಯಾರ್ಥಿ ಯುವ ಸಂಘಟನೆ, ಬೆಂಗಳೂರು ಹಾಸನ ಜಿಲ್ಲಾ ಅಧ್ಯಕ್ಷರು ವರುಣ್ ಚಕ್ರವರ್ತಿ ಅವರು ಮನವಿ ಮಾಡಿದರು ಇವರ ಬೇಡಿಕೆಯಂತೆ ಮೂಡಿಗೆರೆ ಪಟ್ಟಣಕ್ಕೆ ಆಗಮಿಸುವ ವಿವಿಧ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ, ಹಲವಾರು ಖಾಸಗಿ ಕಂಪೆನಿಗಳಿಗೆ, ರೈತರುಗಳಿಗೆ, ಸಾರ್ವಜನಿಕರಿಗೆ ರಾತ್ರಿ 8.30ರ ನಂತರ ಮೂಡಿಗೆರೆ ಪಟ್ಟಣದಿಂದ ಜನ್ನಾಪುರ, ಗೋಣಿಬೀಡು, ಸಾಲುಮರ, ಕಸೈಬೈಲ್, ನಾಗೇನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಅವರವರ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ವಾಪಾಸ್ ತೆರಳಲು ಸೂಕ್ತ ಸಮಯದಲ್ಲಿ ಬಸ್ ನ ವ್ಯವಸ್ಥೆ ಸರಿಯಾದ ಸಮಯಕ್ಕೆ ಇಲ್ಲದೆ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದು, ರಾತ್ರಿ 8.00 ಗಂಟೆಯ ನಂತರ ಬಸ್ಸಿನ ವ್ಯವಸ್ಥೆ ಕೋರಿ ಮನವಿ ಸಲ್ಲಿಸಿರುತ್ತಾರೆ.
ಆದ್ದರಿಂದ ವಿವಿಧ ಸರ್ಕಾರಿ ಕಛೇರಿಗಳಿಗೆ, ಶಾಲಾ – ಕಾಲೇಜುಗಳ ವಿಧ್ಯಾರ್ಥಿಗಳಿಗೆ, ಹಲವಾರು ಖಾಸಗಿ ಕಂಪನಿಗಳಿಗೆ, ರೈತರುಗಳಿಗೆ, ಸಾರ್ವಜನಿಕರಿಗೆ ಮೂಡಿಗೆರೆ ಪಟ್ಟಣದಿಂದ ವಾಪಾಸ್ ರಾತ್ರಿ ಸಮಯದಲ್ಲಿ ಅವರುಗಳ ಗ್ರಾಮಗಳಿಗೆ ಸುರಕ್ಷಿತವಾಗಿ ತೆರಳಲು ರಾತ್ರಿ ಸಮಯದಲ್ಲಿ ( 8.00, 8.30, 9.00, 9.30 ಹಾಗೂ 10.00. 11.30.12.30 ಗಂಟೆಗೆ ) ಚಿಕ್ಕಮಗಳೂರು ವಿಭಾಗಕ್ಕೆ ಸೇರಿದ ಮೂಡಿಗೆರೆ ಘಟಕದಿಂದ ಹೆಚ್ಚುವರಿಯಾಗಿ ಜನ್ನಾಪುರ, ಗೋಣಿಬೀಡು, ಸಾಲುಮರ, ಕಸೈಬೈಲ್, ನಾಗೇನಹಳ್ಳಿ ಮೂಲಕ ಬೇಲೂರು ಮಾರ್ಗವಾಗಿ, ಹಾಸನ ನಗರ ಸೇರಿದಂತೆ ಚನ್ನರಾಯಪಟ್ಟಣ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ ಬಸ್ ಸಂಚಾರವನ್ನು ತುರ್ತಾಗಿ ಆರಂಭಿಸಿ, ಅಗತ್ಯ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡಬೇಕೆಂದು ಕೇಳಿದ್ದರು ತಕ್ಷಣ ಅವರ ಮನವಿಗೆ ಸ್ಪಂದಿಸಿದ ಮೂಡಿಗೆರೆ ಎಂಎಲ್ಎ ನಯನಾ ಮೋಟಮ್ಮ ಅವರು
ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕ. ರಾ. ರ. ಸಾರಿಗೆ ನಿಗಮ, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ಪತ್ರ ಬರೆದು ಅತೀ ಶೀಘ್ರದಲ್ಲಿ ವ್ಯವಸ್ಥೆಯನ್ನು ಮಾಡಿಸುವುದಾಗಿ ತಮ್ಮ ಉಲ್ಲೇಖ ಪತ್ರವನ್ನು ಸಾರಿಗೆ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ ಈ ಕುರಿತು ಅಖಿಲ ಕರ್ನಾಟಕ ವಿದ್ಯಾರ್ಥಿ ಯುವ ಸಂಘಟನೆ ಬೆಂಗಳೂರು. (ರಿ) ಇವರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ವರುಣ್ ಚಕ್ರವರ್ತಿ ಅವರು ತಿಳಿಸುತ್ತಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!