ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆತ್ಮಗಳ ಆತ್ಮ ಪರಮಾತ್ಮ : ತಳವಾರ ಈರಣ್ಣ

ಬಳ್ಳಾರಿ / ಕಂಪ್ಲಿ : ಎಲ್ಲಾ ಧರ್ಮಗಳು ಒಂದೇ. ದೇವರು ಧರ್ಮಗಳನ್ನು ಮಾಡಿಲ್ಲ, ಮಾಡಿರುವುದು ಮನುಷ್ಯ. ಇಡೀ ಜಗತ್ತನ್ನೇ ಮಾಡಿರುವ ಶಕ್ತಿಯೇ ದೇವರು. ಎಲ್ಲದರಲ್ಲೂ ದೇವರಿದ್ದಾನೆ. ಅದರಿಂದಲೇ ಬೇರೆ ಬೇರೆ ಸ್ವರೂಪಗಳು ಇವೆ. ಅಂದರೆ ಪ್ರತಿಯೊಂದರಲ್ಲಿಯೂ, ಪ್ರತಿಯೊಬ್ಬರಲ್ಲಿಯೂ ದೇವರಿದ್ದಾನೆ. ಆತ್ಮಗಳ ಆತ್ಮ ಪರಮಾತ್ಮ ಎಂದು ಸಿರುಗುಪ್ಪ ತಾಲೂಕಿನ ಮಣ್ಣೂರು ಗ್ರಾಮದ ಕೃಷಿಕ ತಳವಾರ ಈರಣ್ಣ ತಿಳಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 180ನೇ ಮಹಾಮನೆ ಕಾರ್ಯಕ್ರಮದಲ್ಲಿ “ಶರಣರ ವಚನ ವಿಚಾರ ಧಾರೆ” ಕುರಿತು ಉಪನ್ಯಾಸ ನೀಡಿ ಮಾತನಾಡಿದರು ಪ್ರಕೃತಿಯಲ್ಲಿನ ಮರಗಿಡಗಳು, ಚರಾಚರ ವಸ್ತುಗಳು, ತಂದೆ ತಾಯಿ ಎಲ್ಲವೂ ದೇವರ ಪ್ರತಿರೂಪವೇ. ಜೀವನದಲ್ಲಿ ವಿಭಿನ್ನ ರೂಪಗಳಲ್ಲಿ ಬರುವ ವ್ಯಕ್ತಿಗಳೂ ದೇವರಾಗಿ ಕಾಣುತ್ತಾರೆ. ಪರಮಾತ್ಮನಿಂದಲೇ ಆತ್ಮ ಪಡೆದುಕೊಳ್ಳುವುದರಿಂದ ಎಲ್ಲರಲ್ಲೂ ಏನೋ ಒಂದು ರೀತಿಯ ದೈವ ಸ್ವರೂಪವಾದ ಶಕ್ತಿ ಇದೆ, ಶರಣರು ಸಮಾಜದ ಸಮಸ್ಯೆ ಪರಿಹಾರಕ್ಕೆ ವಚನಗಳನ್ನು ರಚಿಸಿದ್ದು, ಅವುಗಳಿಗೆ ಮನುಷ್ಯನ ಬದುಕು ಕಟ್ಟುವ ಶಕ್ತಿ ಇದೆ. ವಚನಗಳನ್ನು ಪಾಲಿಸುವುದರಿಂದ ನಾವು ಉತ್ತಮ ವ್ಯಕ್ತಿಗಳಾಗಿ ಬೆಳೆಯಬಹುದು ಮತ್ತು ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ಪ್ರಭುದೇವರ ವಚನ ಹಾಗೂ ಬಸವಣ್ಣರ ವಚನಗಳನ್ನು ಅದರ ತಾತ್ಪರ್ಯಗಳನ್ನು ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿಯಾದ ಬಿ. ಎಂ. ಪುಷ್ಪ ಮಾತನಾಡಿ ಫ. ಗು. ಹಳಕಟ್ಟಿಯವರ ಜೀವನ ವೃತ್ತಾಂತ ಹಾಗೂ ವಚನಗಳ ಸಂಗ್ರಹದ ಬಗ್ಗೆ ತಿಳಿಸಿಕೊಟ್ಟರು.

ಸಂಗಾತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಹಿರೇಮಠ ಮಾತನಾಡಿ ವಚನಗಳಲ್ಲಿ ಅರ್ಥಪೂರ್ಣವಾಗಿವೆ ಧಾರ್ಮಿಕ ಗ್ರಂಥಗಳಲ್ಲಿರುವ ತತ್ವಗಳಿಗಿಂತ ಹೆಚ್ಚಿನ ವಿಚಾರಗಳು ಇಲ್ಲಿ ಅಡಕವಾಗಿವೆ ತಂದೆ- ತಾಯಿ, ಗುರು, ಹಿರಿಯರ ಮಾತನ್ನು ಪಾಲಿಸಿದರೆ ಮಾತ್ರ ಸಂಸ್ಕಾರವಂತನಾಗಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಾಜ್ಯ ಅಕ್ಕಿಗಿರಿಣಿಗಳ ಮಾಲೀಕರ ಉಪಾಧ್ಯಕ್ಷ ಹಿರಿಯ ಶರಣರಾದ ಕ. ಮಾ. ಹೇಮಯ್ಯಸ್ವಾಮಿ ಮಾತನಾಡಿ ವಚನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿವೆ. ಅವುಗಳನ್ನು ಓದುವುದರಿಂದ ನಮ್ಮ ಬೇರುಗಳನ್ನು ಅರಿಯಬಹುದು ಎಂದರು.

ವೇದಿಕೆ ಮೇಲೆ ಅಕ್ಕಮಹಾದೇವಿ ಮಹಿಳಾ ಮಂಡಲದ ಉಪಾಧ್ಯಕ್ಷ ಭತ್ತದ ಸಂಧ್ಯಾ ಹಾಗೂ ಪರಿಷತ್ ನ ತಾಲೂಕು ಅಧ್ಯಕ್ಷ ಜಿ. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪಾಠಶಾಲೆ ಪ್ರಾಚಾರ್ಯ ಶಶಿಧರ ಶಾಸ್ತ್ರಿಗಳು, ಪಾಮಯ್ಯ ಶರಣರು,ಶರಣರಾದ ಅಶೋಕ ಕುಕುನೂರು, ಚನ್ನಬಸಪ್ಪ, ಚಂದ್ರಶೇಖರ, ವೆಂಕಟರೆಡ್ಡಿ, ಬಿ.ಎಂ. ರುದ್ರಯ್ಯ, ಯಂಕರೆಡ್ಡಿ, ಮಡಿವಾಳರ ಹುಲಗಪ್ಪ, ಬಡಿಗೇರ್ ಜಿಲಾನಸಾಬ್, ಸಜ್ಜೆದ ವೀರಭದ್ರಪ್ಪ, ಕೆ. ಯಂಕಾರೆಡ್ಡಿ, ಉಗಾದಿ ಬಸವರಾಜ, ಎಂ. ರಾಮು, ಪೀರಸಾಬ್, ಸಂಗಮೇಶ್ ಕಂದಕೂರು, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಪಾಠಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರೀರಕ್ಷಾ ಪ್ರಾರ್ಥಿಸಿದರು.
ಶಿಕ್ಷಕ ಎಸ್. ಶಾಮಸುಂದರರಾವ ವಂದಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!