ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಾಜ ಸೇವೆಯ ಮಾದರಿಯಾದ ಮಂಗಳಮುಖಿ ರಾಜಮ್ಮ ರವರಿಗೆ ಪಿ. ಐ ವಾಸುಕುಮಾರ್ ರವರಿಂದ ಗೌರವ ಸನ್ಮಾನ

ಬಳ್ಳಾರಿ / ಕಂಪ್ಲಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ಮಂಗಳಮುಖಿ ಸಮುದಾಯದ ರಾಜಮ್ಮ ರವರು ತಮ್ಮ ಜೀವನದ ದೈನಂದಿನ ಭಿಕ್ಷೆಯಿಂದ ಉಳಿತಾಯ ಮಾಡಿದ ಹಣವನ್ನು ಮಾನವೀಯ ಸೇವೆಗೆ ಬಳಸಿಕೊಂಡು, ಸಮಾಜಕ್ಕೆ ಮಾದರಿಯಾದಿದ್ದಾರೆ.

ಸುಮಾರು ₹60,000 ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಶಾಲೆಯ 150 ವಿದ್ಯಾರ್ಥಿಗಳಿಗೆ ಬ್ಯಾಗ್, ಪ್ಯಾಂಟ್ ಮತ್ತು ಟಿ-ಶರ್ಟ್‌ಗಳನ್ನು ದಾನವಾಗಿ ನೀಡಿದ ರಾಜಮ್ಮ ಅಕ್ಕನ ಈ ಉದಾತ್ತ ಕಾರ್ಯ ಸಮಾಜದಲ್ಲಿ ನಿಜವಾದ ಸೇವಾಭಾವನೆಯ ಪ್ರತೀಕವಾಗಿದೆ.

ಅವರ ಸೇವೆಯನ್ನು ಗೌರವಿಸಿ, ಕಂಪ್ಲಿ ಪೊಲೀಸ್ ಠಾಣೆಯ ಪಿ. ಐ. ವಾಸುಕುಮಾರ್ ರವರು ಮಾತನಾಡಿ ರಾಜಮ್ಮರವರು ತೋರಿದ ದಾನಶೀಲತೆ ಮತ್ತು ಸಮಾಜದ ಮೇಲಿನ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ ಸಮಾಜದಲ್ಲಿ ಬದಲಾವಣೆ ತರಲು ಹಣದ ದೊಡ್ಡ ಪ್ರಮಾಣದ ಇಲ್ಲದಿದ್ದರೂ ಉತ್ತಮ ಸೇವಾ ಕಾರ್ಯ ಮಾಡುವ ಮನಸ್ಸಿದ್ದರೆ ಸಾಕು ಎಂಬುದಕ್ಕೆ ಇವರು ನಿದರ್ಶನವಾಗಿದ್ದಾರೆ ಎಂದು ತಿಳಿಸಿ ರಾಜಮ್ಮರವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಕಂಪ್ಲಿ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ : ಜಲಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!