ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗೋವಾದ ಬಿಚ್ಚೋಲಿಯಲ್ಲಿ 16 ನೇ ಬಾರಿಗೆಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಮಾಡಲು ನಿರ್ಣಯ

2025ರ ಡಿಸೆಂಬರ್ 7 ಭಾನುವಾರದಂದು ಗೋವಾದ ಬಿಚ್ಚೋಲಿಯಂನ ಹೀರಾಬಾಯಿ ಸಭಾಂಗಣದಲ್ಲಿ
ಶ್ರೀ ಹನುಮಂತಪ್ಪ ರೆಡ್ಡಿ ಶಿರೂರು ಅವರ ಅಧ್ಯಕ್ಷತೆಯ
ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂ
ಮತ್ತು ಮಹೇಶ್ ಬಾಬು ಸುರ್ವೆ ಸಂಚಾಲಕತ್ವದ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಸಂಸ್ಥೆ ಜೊತೆಗೂಡಿ ಅಖಿಲ ಗೋವಾ ಕನ್ನಡ ಮಹಾಸಂಘ
ಸಹಕಾರದಲ್ಲಿ 16 ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ನಡೆಸಲಿದೆ.
ಕಳೆದ 15 ವರ್ಷಗಳಿಂದಲೂ ಗೋವಾದಲ್ಲಿ
ನಿರಂತರವಾಗಿ ಅಲ್ಲಿಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಮ್ಮೇಳನಗಳನ್ನು ಮಾಡುತ್ತಾ ಬಂದಿದೆ.
ಅದರ ಜೊತೆಗೆ ಗೋವಾದಲ್ಲಿನ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡಮಯ ವಾತಾವರಣವನ್ನು ನಿರ್ಮಿಸುವಲ್ಲಿ ಈ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಪಾತ್ರ ಪ್ರಮುಖವಾದದ್ದು.
ಗೋವಾದ ಬಿಚ್ಚುಲಿಯಂನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ಮ ಭೂಮಿ ಕನ್ನಡ ಸಂಘದ ಪದಾಧಿಕಾರಿಗಳು. ಮಂಜುನಾಥ ಗ್ರಾಮೀಣ ಅಭಿವೃದ್ಧಿ ಯೋಜನೆ ಮಹಿಳಾ ಸ್ವಸಹಾಯ ಸಂಘ ಗೋವಾದ ಮಹಿಳಾ ಕಾರ್ಯಕರ್ತರು ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳು ಮತ್ತು ಗೋವಾದ ಕನ್ನಡಿಗರು ಸಭೆಯಲ್ಲಿ ಭಾಗವಹಿಸಿ 2025 ಡಿಸೆಂಬರ್ 7 ರಂದು ಅದ್ದೂರಿಯಾಗಿ ಕನ್ನಡಿಗರ 16 ಸಾಂಸ್ಕೃತಿಕ ಸಮ್ಮೇಳನವನ್ನು ಪ್ರತಿ ವರ್ಷವೂ ಈ ವರ್ಷವೂ ವಿಶೇಷವಾಗಿ ಆಚರಿಸುವ ಬಗ್ಗೆ ಶ್ರೀ ಹನುಮಂತ್ ರೆಡ್ಡಿ ಶಿರೂರವರ ನೇತೃತ್ವದಲ್ಲಿ ನಿರ್ಣಯಿಸಲಾಯಿತು.
ಡಿಸೆಂಬರ್ 7ರಂದು 500 ಕ್ಕೂ ಹೆಚ್ಚು ಗೋವಾದ ಸ್ವಾಭಿಮಾನಿ ಕನ್ನಡಿಗ ಮಹಿಳಾ ಕಾರ್ಯಕರ್ತರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲಾತಂಡಗಳ ಮೂಲಕ ಸ್ವಾಮೀಜಿಗಳು ಹಾಗೂ ಸಮ್ಮೇಳನ ಅಧ್ಯಕ್ಷರ ಅವರೊಂದಿಗೆ ಪೂರ್ಣ ಕುಂಬದ ಮೆರವಣಿಗೆ
ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಸ್ಯ ಸಂಜೆ ನೃತ್ಯ ಮಿಮಿಕ್ರಿ ಗಾಯನ ದಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಮ್ಮೇಳನದಲ್ಲಿ ಆಯೋಜಿಸಲಾಗುವುದು.
ಬನ್ನಿ ಬಂಗಾರ ಹಬ್ಬದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ಮ ಭೂಮಿ ಕನ್ನಡ ಸಂಘದ ಉಪಾಧ್ಯಕ್ಷ ನಾಗೇಶ್ ಮೂಟೆಬೆನ್ನೂರು
ಅಖಿಲ ಗೋವಾ ಕನ್ನಡ ಮಹಾಸಂಗದ ಪದಾಧಿಕಾರಿಗಳು ಕರ್ಮಭೂಮಿ ಕನ್ನಡ ಸಂಘದ ಸುರೇಶ್ ಅಸ್ಕಿ. ಕರ್ಮಭೂಮಿ ಕನ್ನಡ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು
ಶ್ರೀ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಯೋಜನೆ ಮಹಿಳಾ ಸ್ವಸಹಾಯ ಸಂಘ ಗೋವಾದ
ಮಹಿಳಾ ಕಾರ್ಯಕರ್ತರು
ಶ್ರೀ ಹನುಮಂತರೆಡ್ಡಿ ಶಿರೂರ್ ಅವರ ಅಧ್ಯಕ್ಷತೆಯಲ್ಲಿ
ಎಲ್ಲರೂ ಸೇರಿ ಬನ್ನಿ ಬಂಗಾರ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿ ತದ ನಂತರ ಗೋವಾದ ಬಿಚ್ಚುಲಿಯಲ್ಲಿ ಡಿಸೆಂಬರ್ 7ರಂದು ಕಾರ್ಯಕ್ರಮ ನಡೆಸಲು ಕುರಿತು ಚರ್ಚಿಸಿ ನಿರ್ಣಯಿಸಿದರು.
ಗೋವಾದಲ್ಲಿ ಬನ್ನಿ ಬಂಗಾರ ಹಬ್ಬವನ್ನು ಪರಸ್ಪರ ಬನ್ನಿ ಹಂಚುವ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!