ರಾಯಚೂರು :ಸಿಂಧನೂರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡಯುತ್ತಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದ್ದು ನಗರ ಪ್ರದೇಶ ವ್ಯಾಪ್ತಿಯಲ್ಲಿ ಶೇಕಡಾ 100ರಷ್ಟು ಪ್ರಗತಿ ಸಾಧಿಸಲು ಸ್ಥಳೀಯ ನಾಗರಿಕರು ಸಹಕರಿಸಿಬೇಕೆಂದು ತಹಶೀಲ್ದಾರ ಅರುಣ ಎಚ್. ದೇಸಾಯಿ ಮನವಿ ಮಾಡಿದ್ದಾರೆ.
ಅವರು ಈ ಕುರಿತು ನೀಡಿದ ಪತ್ರಿಕಾ ಪ್ರಟಣೆಯಲ್ಲಿ, ಅಕ್ಟೋಬರ್ 18ರವರೆಗೆ ಸಮೀಕ್ಷಾ ಕಾರ್ಯದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಸಿಂಧನೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಮೀಕ್ಷಾ ಮನೆಗಳನ್ನು ಗಣತಿದಾರರು ಮನೆ-ಮನೆ ಸಮೀಕ್ಷೆಗೆ ಹೋದಾಗ ಬಾಗಿಲು ಮುಚ್ಚಿರುವ, ಸ್ಥಳಾಂತರವಾಗಿರುವ, ಖಾಲಿ ಇರುವ ಮನೆಗಳ ಪ್ರಕರಣಗಳು ಕಂಡುಬಂದಿರುತ್ತವೆ.
ಕಾರಣ ಇಲ್ಲಿಯವರೆಗೂ ಸಮೀಕ್ಷೆ ಆಗದಿರುವ ಸಿಂಧನೂರು ನಗರದ ನಿವಾಸಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣತಿ ಮೇಲ್ವಿಚಾರಕರನ್ನು ಸಂಪರ್ಕಿಸಿ ತಮ್ಮ ಕುಟುಂಬದ ಸಮೀಕ್ಷೆಯನ್ನು ಪೂರ್ಣಗೊಳಿಸಿಕೊಳ್ಳುವುದು. ವಾರ್ಡುವಾರು ಗಣತಿ ಮೇಲ್ವಿಚಾರಕರ ವಿವರ ಈ ರೀತಿಯಿದ್ದು ವಿವರಗಳಿಗೆ ಈರನಗೌಡ- 9739343940 (ವಾ.ನಂ-7, 9, 28, 30), ಭೀಮರೆಡ್ಡಿ- 9980885281 (ವಾ.ನಂ-11, 13, 14, 15, 16, 17,),
ವೀರೇಶಪ್ಪ-8139913889 (ವಾ.ನಂ-9, 10, 11, 12, 13, 16),
ಶಿವಶಂಕ್ರಪ್ಪ-9008279222 (ವಾ.ನಂ-20, 21, 22, 29, 30),
ತುಳಸಿದಾಸ-9880114558 (ವಾ.ನಂ-9, 12, 13, 14, 15, 16, 17, 18, 30),
ವೀರೇಶ ಬಿ-9916769879 (ವಾ.ನಂ-4, 7), ನಾಗರಾಜ ಶೆಟ್ಟಿ-8073402833 (ವಾ.ನಂ-2, 3, 4, 5, 6, 7, 8, 9),
ಹನುಮೇಶ-9900392230 (ವಾ.ನಂ-25, 26, 27, 28, 29, 31),
ಜಿ.ಎಸ್.ಪಾಟೀಲ-9480446681 (ವಾ.ನಂ-18, 22, 23, 24, 25),
ಪ್ರಭುಗೌಡ-9108539339 (ವಾ.ನಂ-1, 7, 8, 17, 19, 20, 21, 22, 23, 25) ಇವರನ್ನು ಸಂಪರ್ಕಿಸುವುದು.
ಸಮೀಕ್ಷೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ವಾರ್ ರೂಮ್ ಸಹಾಯವಾಣಿ ಸಂಖ್ಯೆಗಳಾದ 9880968243, 9902055969, 8971610308 ಸಂಪರ್ಕಿಸಲು ಕೋರಿದ್ದಾರೆ.
- ಕರುನಾಡ ಕಂದ




















