ಕಲಬುರಗಿ : ರೈತಪರ, ದಲಿತ, ಕನ್ನಡ, ಮಹಿಳಾ ಪರ ಸಂಘಟನೆಗಳ ವತಿಯಿಂದ ಒಗ್ಗಟ್ಟಾಗಿ ಹಸಿ ಬರಗಾಲ ಘೋಷಣೆ, ಸಾಲ ಮನ್ನಾ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ಬಂದ್ ಮಾಡಲಾಯಿತು.
ಕಳೆದ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿಯಿಂದ ಅಪಾರ ಬೆಳೆ ಹಾನಿಯಾಗಿದ್ದು
ರೈತರ ನೆರವಿಗೆ ಸರ್ಕಾರ ನಿಂತು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲೆಯಲ್ಲಿನ ಅಂಗಡಿ, ಮುಂಗಟ್ಟು, ಮಾಲ್, ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಯಿತು.
ಕಲಬುರಗಿ ನಗರದಲ್ಲಿನ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹುಮ್ನಾಬಾದ, ರಿಂಗ್ ರೋಡ್ ಸೇರಿ
ಇನ್ನಿತರ ಕಡೆಗಳಲ್ಲಿ ರಸ್ತೆ ತಡೆದ ರೈತರು
ಬೆಳಗ್ಗೆ 7:00 ಗಂಟೆಯಿಂದ ಸಾಯಂಕಾಲ 4:00 ರವರೆಗೆ ಸಂಪೂರ್ಣ ಕಲಬುರ್ಗಿ ಬಂದ್ ಮಾಡಿದರು.
ನಗರೇಶ್ವರ ಶಾಲೆಯಿಂದ ಜಗತ್ ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ಮುಖಾಂತರ ಬಂದು ಮಾನವ ಸರಪಳಿ ಮಾಡಿ ರೈತ ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ರೈತರು ರೈತ ಮುಖಂಡರ ಜೊತೆ ಪೊಲೀಸರ ವಾಗ್ವಾದ ನಡೆಯಿತು.
ರೈತರನ್ನು ಹತ್ತಿಕ್ಕುವ ಕೆಲಸ ಪೊಲೀಸರು ಮಾಡಿದರೂ ಸಹ ರೈತರು ಜಗ್ಗಲಿಲ್ಲ.
ವೀರಣ್ಣ ಗಂಗಾಣಿ ಅಧ್ಯಕ್ಷರು ಕಾಳಗಿ ಮತ್ತು ಚಿಂಚೋಳಿ ತಾಲೂಕ ರೈತ ಸೇನೆ, ಶಿವರಾಜ್ ಪಾಟೀಲ್ ಗೋಣಗಿ, ಮಲ್ಲು ಪಾಟೀಲ್, ರಮೇಶ್ ಹೆಬ್ಬಾಳ, ಲಕ್ಷ್ಮಿಕಾಂತ್ ಪಾಟೀಲ್ ಆಟೋ ಯೂನಿಯನ್ ಕಲಬುರ್ಗಿ, ದಯಾನಂದ ಪಾಟೀಲ್, ಚೆನ್ನವೀರ ಕಮಲಾಪುರ್, ಸಿದ್ದಪ್ಪ ಕಲಶೆಟ್ಟಿ ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು ಈ ಹೋರಾಟದಲ್ಲಿ ಭಾಗವಹಿಸಿದ್ದರು.
ವರದಿ : ಎಸ್ ವಿ ಗಂಗಾಣಿ



















