ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಶಿಶುವಿಗೆ ಎದೆಹಾಲು ಕುಡಿಸಿ ತಾಯ್ತನ ಮೆರೆದ ಪೊಲೀಸ್

ಮಹಿಳೆಯೊಬ್ಬಳು ತನ್ನ ಹಸುಗೂಸನ್ನು ಹೊರಗಡೆ ಸಂಬಂಧಿಕರೊಂದಿಗೆ ಬಿಟ್ಟು ಪರೀಕ್ಷೆ ಬರೆಯಲು ಕೊಠಡಿಯೊಳಗೆ ಹೋಗಿದ್ದರು. ಆಗ ಆ ಮಗು ಜೋರಾಗಿ ಅಳುತ್ತಿತ್ತು. ಇದರಿಂದ ಒಳಗೆ ತಾಯಿಗೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಮಗು ಅಳುತ್ತಿದ್ದುದರಿಂದ ಆ ತಾಯಿಗೆ ಸಂಕಟವಾಗುತ್ತಿತ್ತು. ಆ ತಾಯಿಗೆ ಕಷ್ಟವಾಗಬಾರದೆಂದು ಅಲ್ಲಿದ್ದ ಮಹಿಳಾ ಕಾನ್ಸ್​ಟೆಬಲ್ ಒಬ್ಬರು ತಾವೇ ಆ ಶಿಶುವಿಗೆ ಎದೆಹಾಲು ಕುಡಿಸಿ, ಸಮಾಧಾನ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಿ : ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಬಾಣಂತಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಒಳಗೆ ಆ ಮಹಿಳೆ ಪರೀಕ್ಷೆ ಬರೆಯುವಾಗ ಆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಇದರಿಂದ ಒಳಗಿದ್ದ ಅಮ್ಮನಿಗೆ ಸಂಕಟವಾಗಿ ಪರೀಕ್ಷೆಯತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಆ ತಾಯಿಗೆ ಸಹಾಯ ಮಾಡಲು ಮುಂದಾದ ಒಡಿಶಾ ಮಹಿಳಾ ಕಾನ್‌ಸ್ಟೆಬಲ್ ತಾನೇ ಆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು, ಎದೆಹಾಲು ಕುಡಿಸಿ, ನಿದ್ರೆ ಮಾಡಿಸುವ ಮೂಲಕ ತಾಯ್ತನ ಮತ್ತು ಮಾನವೀಯತೆ ಮೆರೆದಿದ್ದಾರೆ.

ಈ ಘಟನೆ ಬಿಬಿಗುಡಾ ಪರೀಕ್ಷಾ ಕೇಂದ್ರದಲ್ಲಿ ಆರ್‌ಐ ಮತ್ತು ಅಮೀನ್ ನೇಮಕಾತಿ ಪರೀಕ್ಷೆಗಳ ಸಮಯದಲ್ಲಿ ನಡೆಯಿತು. ಈ ಪರೀಕ್ಷೆಗೆ ಹಾಜರಾಗುತ್ತಿದ್ದ ಭೈರವಿ ಮಂಡಲ್ ಎಂಬ ಮಹಿಳೆ ತನ್ನ ಒಂದೂವರೆ ತಿಂಗಳ ಮಗು ಪರೀಕ್ಷಾ ಕೇಂದ್ರದ ಹೊರಗೆ ತನ್ನ ಮಗು ಜೋರಾಗಿ ಅಳುತ್ತಿದ್ದುದರಿಂದ ಪರೀಕ್ಷೆ ಬರೆಯಲಾಗದೆ ಚಡಪಡಿಸುತ್ತಿದ್ದರು. ಆ ಶಿಶುವನ್ನು ಸಮಾಧಾನಪಡಿಸಲು ಆಕೆಯ ಪತಿ ಪ್ರಯತ್ನಿಸಿದರೂ ಅದು ಸುಮ್ಮನಾಗಲಿಲ್ಲ. ಇದರಿಂದ ಆಕೆ ಪರೀಕ್ಷೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಗೆ ಬರಲು ಯೋಚಿಸಿದ್ದರು.

ಆ ಮಗು ಅಳುತ್ತಿರುವುದನ್ನು ನೋಡಲಾಗದೆ ಅಲ್ಲೇ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಕಾನ್​ಸ್ಟೆಬಲ್ ಮಗುವನ್ನು ಎತ್ತಿಕೊಂಡು, ಹಾಲುಣಿಸಿ ಸಮಾಧಾನ ಮಾಡಿದ್ದಾರೆ. 7 ವರ್ಷಗಳಿಂದ ಮಲ್ಕನ್‌ಗಿರಿ ಮೀಸಲು ಪೊಲೀಸರಲ್ಲಿ ಸೇವೆ ಸಲ್ಲಿಸಿರುವ ಕಾನ್‌ಸ್ಟೆಬಲ್ ಮಾಝಿ ಆ ಒಂದೂವರೆ ತಿಂಗಳ ಮಗುವಿನ ಹಸಿವು ನೀಗಿಸಿದ್ದಾರೆ. ಮಾಝಿ ಅವರಿಗೂ ಪುಟ್ಟ ಮಗುವಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಕಾನ್​ಸ್ಟೆಬಲ್ ರಜನಿ ಮಾಝಿ, “ಆ ಮಹಿಳೆ ಪರೀಕ್ಷೆಗೆ ಹಾಜರಾಗಬೇಕೇ ಬೇಡವೇ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದರು. ಏಕೆಂದರೆ, ಅವರ ಮಗು ಬಹಳ ಸಮಯದಿಂದ ಅಳುತ್ತಿತ್ತು. ಆದರೆ, ನಾನು ಅವರಿಗೆ ನಾನೇ ಮಗುವನ್ನು ನೋಡಿಕೊಳ್ಳುತ್ತೇನೆ, ನೀವು ಪರೀಕ್ಷೆ ಬರೆಯಿರಿ ಎಂದು ಭರವಸೆ ನೀಡಿದೆ” ಎಂದಿದ್ದಾರೆ.

ನನ್ನ ಮಗುವನ್ನು ತಮ್ಮ ಮಡಿಲಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ನನ್ನ ಮಗುವಿನ ಪರಿಸ್ಥಿತಿಯ ಬಗ್ಗೆ ನನಗೆ ಇನ್ನೂ ಚಿಂತೆಯಾಗಿತ್ತು. ಆದರೆ ಕಾನ್‌ಸ್ಟೆಬಲ್ ಅಕ್ಕ ಆ ಮಗುವನ್ನು ಚೆನ್ನಾಗಿ ನೋಡಿಕೊಂಡರು. ನಾನು ಅವರಿಗೆ ಮತ್ತು ಇತರ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು. ಅವರಿಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ” ಎಂದು ಮಗುವಿನ ತಾಯಿ ಮಂಡಲ್ ಹೇಳಿದ್ದಾರೆ.

ಮಹಿಳಾ ಕಾನ್​ಸ್ಟೆಬಲ್ ರಜನಿ ಮಾಝಿಯವರಿಗೆ ನಮ್ಮ ” ಕರುನಾಡ ಕಂದ ಪತ್ರಿಕೆ “ಯಿಂದ ಕೋಟಿ ಕೋಟಿ ಅಭಿನಂದನೆಗಳು

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!