ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನ.12ರಿಂದ ನ.16ರ ವರೆಗೆ ಎಂಪಿಎಲ್-2025 ಕ್ರಿಕೆಟ್ ಟೂರ್ನಿಮೆಂಟ್

ಬೆಳಗಾವಿ/ ಮೂಡಲಗಿ: ಮೂಡಲಗಿಯ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಇವರ ಸಹಯೋಗದಲ್ಲಿ ಇದೇ ನ. 12ರಿಂದ ನ.16ರ ವರೆಗೆ 5 ದಿನಗಳ ವರೆಗೆ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್‍ವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರಾದ ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ ಹಾಗೂ ಸನ್ನಿತ ಸೋನವಾಲಕರ ಹೇಳಿದರು.
ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಇಡಲಾಗಿದ್ದು,
ಪ್ರಥಮ ಬಹುಮಾನ ರೂ.51,001,
ದ್ವಿತೀಯ ರೂ.30,001 ಹಾಗೂ
ತೃತೀಯ ರೂ.20,001 ನಗದು ಬಹುಮಾನಗಳೊಂದಿಗೆ ಆಕರ್ಷಕ ಟ್ರೋಫಿಗಳನ್ನು ವಿಜೇತ ತಂಡಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಬಹುಮಾನಗಳ ಪ್ರಾಯೋಜಕತ್ವವನ್ನು ಕ್ರಮವಾಗಿ ಪ್ರಕಾಶ ಸೋನವಾಲಕರ, ಬಸವೇಶ್ವರ ಅರ್ಬನ್ ಕೋ. ಆಪ್ ಕೆಡಿಟ್ ಸೊಸೈಟಿತ ಆಡಳಿತ ಮಂಡಳಿ ಹಾಗೂ ಶ್ರೀಶೈಲ್ ಮದಗನ್ನವರ ಇವರು ವಹಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರರಿಗೆ ಹಲವಾರು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ
ಬಾಲಶೇಖರ ಬಂದಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಶಾಲ ಶೀಲವಂತ, ಗಿರೀಶ ಆಸಂಗಿ, ಕೃಷ್ಣಾ ಕೆಂಪಸತ್ತಿ, ವಿಶ್ವನಾಥ ಬೆಲ್ಲದ, ಪ್ರವೀಣ ಕುರಬಗಟ್ಟಿ, ಸೋಮು ಮಠಪತಿ, ಶೇಖರಯ್ಯ ಹಿರೇಮಠ, ಲಕ್ಕಪ್ಪ ತಳವಾರ, ಮಹೇಶ ಖಡಕಬಾವಿ, ಗಿರೀಶ ಮೇತ್ರಿ, ರವಿ ಪತ್ತಾರ, ಶಿವಬಸು ಭುಜನ್ನವರ ಮತ್ತಿತರರು ಇದ್ದರು.

ಮೂಡಲಗಿ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ್ ಕ್ಲಬ್‍ದಿಂದ ನ.12ರಿಂದ ಜರುಗಲಿರುವ ಎಂಪಿಎಲ್-2025 ಕ್ರಿಕೆಟ್ ಟೂರ್ನಮೆಂಟ್‍ ಪ್ರಚಾರ ಪತ್ರಿಕೆಯನ್ನು ಸೋಮವಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ ಬಿಡುಗಡೆ ಮಾಡಿದರು.

ವರದಿ ವಿಲ್ಸನ್ ಢವಳೇಶ್ವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!