
ಕಲ್ಯಾಣ ನಾಡಿನ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಂಟಾಣ ಗ್ರಾಮದಲ್ಲಿ ದಿನಾಂಕ 18-11-2025-ಸಾಯಂಕಾಲ 7-30.ಗಂಟೆಗೆ, ಶ್ರೀ ಕ್ಷೇತ್ರ ಸುಂಟಾಣ ಗ್ರಾಮದಲ್ಲಿ ದೈವಿಕ ಮಂಗಳ ವಾತಾವರಣ ದೊಂದಿಗೆ ಪರಮ ಪೂಜ್ಯ ಶ್ರೀ ಷ. ಬ್ರ. ಡಾ. ಚನ್ನಾರುದ್ರಮುನಿ ಶಿವಾಚಾರ್ಯರ ದಿವ್ಯ ಸಾನಿಧ್ಯ ನೀಡಿದ ಪವಿತ್ರ ದಿನ ದೀಪಗಳ ಜ್ಯೋತಿ, ಭಕ್ತರ ಮನ, ಮಂತ್ರಘೋಷಗಳ ಮಧ್ಯೆ ಗುರುಗಳ ಜನ್ಮದಿನ ಮಹೋತ್ಸವ ಭಕ್ತಿ ಭಾವದಿಂದ ಜರುಗಿತು. ಭಕ್ತರ ಮನದಲ್ಲಿ ನಂಬಿಕೆಯ ಬೆಳಕು ಸಮಾಜದಲ್ಲಿ ಸೇವೆಯ ಬೆಳಕು ಮಠದ ಆಶೀರ್ವಾದದಲಿ ಆದ್ಯಾತ್ಮದ ಬೆಳಕು, ಎಲ್ಲವನ್ನೂ ಒಂದೇ ಜ್ಯೋತಿ ಸೇರಿಸಿ ಗುರುಗಳವರ ಜನ್ಮೋತ್ಸವ ನಿಜವಾಗಿ ಜ್ಞಾನ, ಭಕ್ತಿ, ಸೇವೆಯ ಹಬ್ಬವಾಗಿ ಅರಳಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ಹರಸೂರ್ ಕೇದಾರನಾಥ ಕುಲಕರ್ಣಿ ಸಮಾಜ ಸೇವಕರು, ಬಾಲವಿಜ್ಞಾನಿ ಅಜಿತ್ ಪಾಟೀಲ್, ಬಸವರಾಜ್ ದೇಶವರ, ನಾಗರಾಜ್ ಪಾಟೀಲ್ ಹುಳಗೇರಾ, ವೀರಣ್ಣ ಗಂಗಾಣಿ ರೈತ ಮುಖಂಡರು ರಟಕಲ್, ಲಾವಣ್ಯ ಮೆಲೋಡಿಸ್ ತಂಡದ ಸಂಯೋಜಕರು ರಾಜು ಬಿ. ಹುಲಸಗೂಡ್, ಕುಮಾರಿ ಸೌಜನ್ಯ ಆರ್. ಹುಲಸಗೂಡ್ ಹಾಗೂ ಸುಂಟಾಣ ಗ್ರಾಮದ ಮುಖಂಡರಾದ ಜೈಶಂಕರ್ ಪಾಟೀಲ್, ಕಾಶೀನಾಥ ಮಾಲಿ ಬಿರಾದಾರ, ಸೂರ್ಯಕಾಂತ್ ಇಟಗಿ, ಪ್ರೇಮ್ ಎಲ್ಮಡಗಿ, ಅಮಿತ್ ಪಾಟೀಲ್, ಮಲ್ಲಿನಾಥ್ ಮುಚ್ಚಟ್ಟಿ, ಶರಣು ಸೀಗಿ, ವೀರೇಶ ಬುಕ್ಕಟಗಿ, ರಾಜಶೇಖರ ಮಾಲಿ ಬಿರಾದಾರ ನಿರೂಪಿಸಿದರು. ಸಹಸ್ರಾರು ಭಕ್ತ ಸಮೂಹದಿಂದ ಮಹೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.
ವರದಿ ಎಸ್ ವಿ ಗಂಗಾಣಿ.




















