ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಭಕ್ತಿ ಗೀತೆ ಬಿಡುಗಡೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮರಡಿ ಬೂದಿಹಾಳ ಗ್ರಾಮದ ಆರಾಧ್ಯ ದೈವಾಗಿರುವ ಮಹಾಮಹಿಮ ಶ್ರೀ ಮಾರುತೇಶ್ವರನ ಕುರಿತು “ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ” ಎಂಬ ಭಕ್ತಿ ಗೀತೆಯನ್ನು ಮರಡಿ ಬೂದಿಹಾಳ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಬಸವನಾಳ, ಮರಡಿ ಬೂದಿಹಾಳ ಹಾಗೂ ಮೂಗನೂರ ಈ ಮೂರು ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವುದರ ಮೂಲಕ ಊರಿನ ಸಮಸ್ತ ಗುರುಹಿರಿಯರು ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಸಾಯಂಕಾಲ ಬಿಡುಗಡೆ ಮಾಡಿದರು.
ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಎಂಬ ಭಕ್ತಿ ಗೀತೆಯಲ್ಲಿ ಶ್ರೀ ಮಾರುತೇಶ್ವರ ದೇವರ ಪವಾಡಗಳು, ಭಕ್ತಿ ಭಾವಗಳು ಊರಿನ ಗಣ್ಯ ಮಾನ್ಯರ ಸಹಕಾರ ಪ್ರೋತ್ಸಾಹ ಎಲ್ಲವನ್ನೂ ಒಳಗೊಂಡಂತೆ ಶ್ರೀ ಎಂ ಎಚ್ ಪೂಜಾರಿ, ಶಿಕ್ಷಕರು HPS ಹಿರೇಮಳಗಾವಿ ಹಾಗೂ ಉಪಾಧ್ಯಕ್ಷರು SC/ST ನೌಕರರ ಸಂಘ ಹುನಗುಂದ ಮತ್ತು ನಿರ್ದೇಶಕರು ಶಿಕ್ಷಕರ ಪತ್ತಿನ ಸಹಕಾರಿ ಸಂಘ ಹುನಗುಂದ ಇವರು ಅತ್ಯಂತ ಸೊಗಸಾಗಿ ಸುಂದರವಾಗಿ ಗೀತೆ ರಚಿಸಿ ಹಾಡಿಸಿ ಮರಡಿ, ಬೂದಿಹಾಳ, ಮೂಗನೂರ ಹಾಗೂ ಬಸವನಾಳ ಗ್ರಾಮದವರ ಮೆಚ್ಚುಗೆಗೆ ಪಾತ್ರರಾದರು. ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಎಂಬ ಭಕ್ತಿಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಸ್ತ ಊರಿನ ಗಣ್ಯ ಮಾನ್ಯರಾದ
ಶ್ರೀ ಶಂಕರಗೌಡ ಗೌಡರ, ಶ್ರೀ ಶಾಂತಗೌಡ ಪಾಟೀಲ್, ಶ್ರೀ ವಿ .ಜಿ .ಗಡೆದ (ನಿವೃತ್ತ Pkps ಬ್ಯಾಂಕ್ ವ್ಯವಸ್ಥಾಪಕರು ) ಶ್ರೀ ಭೀಮಪ್ಪ ಪೂಜಾರಿ, ಶ್ರೀ ಮಹಮ್ಮದಸಾಬ್ ವಾಲಿಕಾರ್, ಶ್ರೀ ಬಸವರಾಜ ಗುರಿಕಾರ, ಶ್ರೀ ರಾಮಣ್ಣ ಹೊರಕೇರಿ, ಶ್ರೀ ಅಮಿನಸಾಬ್ ಹೊನ್ಯಾಳ ,ಶ್ರೀ ಮನೋಹರ ಹಡಪದ
ಶ್ರೀ ಗೋಪಾಲ ಹೊರಕೇರಿ, ಶ್ರೀ ರಾಜೇಸಾಬ್ ಸುತಗುಂಡರ ,ಶ್ರೀ ಸಂಗಣ್ಣ ಗೌಡರ, ಶ್ರೀ ಹುಸೇನಸಾಬ್ ವಾಲಿಕಾರ, ಶ್ರೀ ಬಸವರಾಜ ಮೇಟಿ ಶಿಕ್ಷಕರು ಶ್ರೀ ಮುತ್ತು ವಡ್ಡರ ಶಿಕ್ಷಕರು ಶ್ರೀ ಹನಮಂತ ಮಾದರ ಶಿಕ್ಷಕರು ,ಶ್ರೀ ಬಸವರಾಜ್ ಪೂಜಾರಿ ,ಶ್ರೀ ಹನಮಂತ ಪೂಜಾರಿ ,ಶ್ರೀ ಗೈಬುಸಾಬ್ ಚಪೃರಬಂದ ಹನಮಂತ ತಳವಾರ ಹಾಗೂ ಮರಡಿಬೂದಿಹಾಳ ಮೂಗನೂರ ಮತ್ತು ಬಸವನಾಳ ಗ್ರಾಮದ ಗುರುಹಿರಿಯರು ಯುವಕ ಮಿತ್ರರು ಹಾಜರಿದ್ದರು.
ಪ್ರಾಸ್ತಾವಿಕವಾಗಿ ಶ್ರೀ ಎಮ್ ಎಚ್ ಪೂಜಾರಿಯವರು ಮಾತನಾಡಿದರು. ಬಿಡುಗಡೆಯಾದ ಭಕ್ತಿಗೀತೆಯ ಕುರಿತು ಶ್ರೀ ಮುತ್ತು ಯ. ವಡ್ಡರ್ ಶಿಕ್ಷಕರು ಮಾತನಾಡಿದರು. ಶ್ರೀ ಬಿ. ಆಯ್. ಮೇಟಿಯವರು ಊರಿನ ಗಣ್ಯಮಾನ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!