ಬಳ್ಳಾರಿ / ಕಂಪ್ಲಿ : ಎಲ್ಲರೂ ಒಗ್ಗೂಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಲವರ್ದನೆಗೆ, ಪತ್ರಕರ್ತರ ಸಮಸ್ಯೆ ಹಾಗೂ ಕಲ್ಯಾಣಕ್ಕಾಗಿ ಕೆಲಸ ಮಾಡಲಾಗುವುದು ಎಂದು ಕಾ. ನಿ. ಪ ಸಂಘದ ರಾಜ್ಯ ಸಮಿತಿಯ ನೂತನ ಸದಸ್ಯ ಹೆಚ್. ಬಸವರಾಜ ಅಭಿಪ್ರಾಯ ವ್ಯಪ್ತಪಡಿಸಿದರು.
ಪಟ್ಟಣದ ಅತಿಥಿ ಗೃಹದಲ್ಲಿ ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಗೆಲುವು ಸಾಧಿಸಿದ ನಂತರ ಮೊದಲ ಬಾರಿಗೆ ಕಂಪ್ಲಿಗೆ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕಂಪ್ಲಿಗೆ ಎರಡು ಬಾರಿ ಭೇಟಿ ನೀಡಿದಾಗ ಇಲ್ಲಿನ ಪತ್ರಕರ್ತರು ನೀಡಿದ ಬೆಂಬಲ, ಪ್ರೀತಿ, ವಿಶ್ವಾಸದಿಂದ ನನ್ನ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಈ ಋಣ ಮರೆಯಲಿಕ್ಕೆ ಆಗುವುದಿಲ್ಲ. ಸದಸ್ಯ ಸ್ಥಾನ ಕೇವಲ ಹುದ್ದೆ ಮಾತ್ರ. ಹುದ್ದೆಯ ಜೊತೆಗೆ ಜವಾಬ್ದಾರಿಯೊಂದಿಗೆ ಇಲ್ಲಿನ ಬೇಡಿಕೆಗಳನ್ನು ಜಿಲ್ಲಾ ಸಂಘದ ಮುಖೇನ ರಾಜ್ಯ ಸಂಘಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಪತ್ರಕರ್ತರಿಗೆ ನಿವೇಶನ, ಪತ್ರಿಕಾ ಭವನ, ಲ್ಯಾಪ್ ಟಾಪ್, ಜೀವ ವಿಮೆ, ಮಕ್ಕಳ ಶಿಕ್ಷಣಕ್ಕೆ ರಿಯಾಯಿತಿ, ಆರೋಗ್ಯ ಸೇರಿದಂತೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಮಾಡಲಾಗುವುದು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚ್ಯುತಿಬಾರದಂತೆ ನೋಡಿಕೊಳ್ಳಲಾಗುವುದು ಎಂದರು.
ಹಿರಿಯ ಪತ್ರಕರ್ತರ ಬಂಗಿ ದೊಡ್ಡ ಮಂಜುನಾಥ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಸದಸ್ಯ ಜಿ.ಚಂದ್ರಶೇಖರಗೌಡ, ತಾಲೂಕು ಅಧ್ಯಕ್ಷ ಪಿ.ವಿರೇಶ, ಪ್ರಧಾನ ಕಾರ್ಯದರ್ಶಿ ಎಸ್.ಯಮನಪ್ಪ, ಪತ್ರಕರ್ತರಾದ ಹೆಚ್.ಎಂ.ಪಂಡಿತಾರಾಧ್ಯ, ಕರಿ ವಿರುಪಾಕ್ಷಿ, ಭಾವೈಕ್ಯ ವೆಂಕಟೇಶ, ಚಂದ್ರಶೇಖರ, ಗಾದಿಲಿಂಗ, ಜಿ.ಎಂ.ಬಸಯ್ಯಸ್ವಾಮಿ, ರಸೂಲ್, ಮುಖಂಡರಾದ ಬಿ.ನಾರಾಯಣಪ್ಪ, ಸಿ.ಆರ್. ಹನುಮಂತ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















