
ಸುಳ್ವಾಡಿ ದುರಂತ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಹೈಕೋರ್ಟ್ ಜಾಮೀನು ನೀಡಿರುವ ಬಗ್ಗೆ DSS ಸಂಘಟನೆ ಅಂಬೇಡ್ಕರ್ ವಾದ ಸಂಘಟನೆಯ ಮುಂದಿನ ಹೋರಾಟದ ಬಗ್ಗೆ ಚರ್ಚೆ.
ಚಾಮರಾಜನಗರ/ ಹನೂರು: ಈ ದಿನ ಡಿ ಎಸ್ ಎಸ್ ಅಂಬೇಡ್ಕರ್ ವಾದ ಸಂಘಟನೆಯ ಎಲ್ಲಾ ಸದಸ್ಯರುಗಳು ಹನೂರು ತಾಲೂಕಿನ ಲೋಕೋಪಯೋಗಿ ಅತಿ ಗಣ್ಯ ವ್ಯಕ್ತಿಗಳ ಅತಿಥಿ ಗೃಹದಲ್ಲಿ ಸಭೆ ಸೇರಿ ಸುಳ್ವಾಡಿ ದುರಂತದ ಕಿಂಗ್ ಪಿನ್ ಮಹಾದೇಸ್ವಾಮಿಗೆ ಹೈಕೋರ್ಟ್ ಜಾಮೀನು ನೀಡುವುದರಿಂದ ಅದರ ಬಗ್ಗೆ ಮುಂದಿನ ಕಾನೂನು ಹೋರಾಟ ಮಾಡಬೇಕಾಗಿರುವುದರ ಬಗ್ಗೆ ಚರ್ಚಿಸಲಾಯಿತು.
ಮತ್ತು ಡಿಎಸ್ ಎಸ್ ಸದಸ್ಯ ನೋಂದಣಿ ಬಗ್ಗೆ ಚರ್ಚೆ ಮಾಡಲಾಯಿತು ಮತ್ತು ಸ್ಥಳೀಯ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಂಧರ್ಭದಲ್ಲಿ ದೊಡ್ಡಿಂದ್ವಾಡಿ ಸಿದ್ದರಾಜು ರಾಜ್ಯ ಸಂಘಟನಾ ಸಂಚಾಲಕರು, ತಾಲೂಕು ಡಿಎಸ್ಎಸ್ ಸಂಚಾಲಕರು ಮಾದೇಶ್ ಬೈರನತ್ತ ಜಿಲ್ಲಾ ಸಂಚಾಲಕರು ಹಿಂಡಯ್ಯ ವೀರ ,ರಾಚಪ್ಪ ,ಭಾಗ್ಯಮ್ಮ, ವಸಿಂಪಾಶ, ಫಾರೂಕ್ ಪಾಶ ನಾಗಣ್ಣ ಹನೂರು ರಾಮಲಿಂಗಂ ಮಾರ್ಟಳ್ಳಿಮಾರಿಯಪ್ಪ , ಮುರುಗೇಶ್ ಹಾಗೂ ಡಿಎಸ್ಎಸ್ ಸಂಘಟನೆಯ ಸದಸ್ಯರುಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್




















