ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದಿನಾಂಕ 20 ನವಂಬರ್ 2025ರಂದು ಕನಕಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಂಯೋಜಕರಾದ ಶ್ರೀ ಸುರೇಶ ರಾಠೋಡ ಅವರು ಮಕ್ಕಳು ನೋಡಿದ ತಕ್ಷಣ ಅವರಲ್ಲಿ ಏನೆಲ್ಲಾ ಪ್ರತಿಭೆಗಳು ಅಡಗಿವೆ ಎಂದು ಹೇಳಲು ಆಗುವುದಿಲ್ಲ, ಅವರೆಲ್ಲ ಪ್ರತಿಭೆಯನ್ನು ಹೊರಹಾಕಲು ಒಂದು ಅವಕಾಶ ಬೇಕಾಗುತ್ತದೆ. ಅಂತಹ ಒಂದು ಅವಕಾಶ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿರುತ್ತದೆ ಇದರ ಮೂಲಕ ಅದ್ಭುತವಾದ ಪ್ರತಿಭೆ ಹಾಗೂ ಕೌಶಲವನ್ನು ಹೊರಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀ ಆನಂದ ಚವ್ಹಾಣ ಮಾತನಾಡಿ ಸರ್ವತೋಮುಖವಾದ ಕಲಿಕೆಗೆ ಒತ್ತನ್ನು ನೀಡಲಾಗುತ್ತಿದೆ ಕೇವಲ ಓದು ಬರಹ ಅಷ್ಟು ಮಾತ್ರ ಸಾಕಾಗುವುದಿಲ್ಲ, ಜೊತೆ ಜೊತೆಗೆ ಸಾಹಿತ್ಯ, ಸಂಗೀತ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ತುಂಬಾ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಕನಕಪುರ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಗುರುಗಳಾದ ಶ್ರೀ ಮನೋಹರ್ ರಟಕಲ್, ಶ್ರೀ ಬಸಯ್ಯ ಗುತ್ತೇದಾರ್, ಶ್ರೀ ಸಂಗಮೇಶ, ಶ್ರೀ ಸಂತೀಷಕುಮಾರ, ಶ್ರೀ ಕಲ್ಲಪ್ಪ, ಶ್ರೀ ನರಸಪ್ಪ ರುಸ್ತಂಪುರ, ಶ್ರೀ ಬಾಬುರಾವ್ ಬಳ್ಳಾ ಹಾಗೂ ಸಹ ಶಿಕ್ಷಕರು, ಅತಿಥಿ ಶಿಕ್ಷಕರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.
ಮಕ್ಕಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿ ಸುಕ್ತವಾಗಿ ಅಡಗಿರುವ ಪ್ರತಿಭೆಯನ್ನು ಕಾರಂಜಿಯ ರೂಪದಲ್ಲಿ ಹೊರಹಾಕಿದರು. ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಉತ್ತೇಜಿಸಲಾಯಿತು.
ಈ ಕಾರ್ಯಕ್ರಮವನ್ನು ಕನಕಪುರ ಗ್ರಾಮ ಪಂಚಾಯತನ ಅಧ್ಯಕ್ಷರಾಗಿರುವ ಶ್ರೀ ಸುನಿಲ್ ಮೇತ್ರಿ ಅವರು ಉದ್ಘಾಟಿಸಿದರು, ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನಕಪುರದ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಕೃಷ್ಣಪ್ಪ ರಾಥೋಡ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಶ್ರೀ ಸಂತೋಷ್ ಕುಮಾರ್ ನಿರೂಪಿಸಿದರು, ಶ್ರೀ ಕಲ್ಲಪ್ಪ ವಂದಿಸಿದರು.
ಈ ಸಂದರ್ಭದಲ್ಲಿ
ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಲ್ಲಮಡಗಿ, ಶಿಕ್ಷಣ ಪ್ರೇಮಿಗಳಾದ ಪ್ರವೀಣ್ ಮೇತ್ರಿ ಶ್ರೀಕಾಂತ್ ಬಾಗನ್ ಭಾಗ್ಯವಂತ ಶಾರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















