ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ

ಕೊಪ್ಪಳ : ಇಲ್ಲಿನ ಸರ್ಕಾರಿ ಪ್ರೌಢಶಾಲೆ ಬೆಟಗೇರಿಯಲ್ಲಿ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್ ಹಾಗೂ ಸುಂದರ್ ಲಾಲ್ ಬಹುಗುಣ ಹಸಿರುಪಡೆ ವತಿಯಿಂದ ಖ್ಯಾತ ಪರಿಸರವಾದಿ, ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕವಾಗಿ ಗಣಿತ ಶಿಕ್ಷಕ ಹಸಿರು ಪಡೆಯ ಸಂಚಾಲಕ ಮರ್ದಾನಲಿ ಗಡಾದ ಮಾತನಾಡಿ ತಿಮ್ಮಕ್ಕ ಕಡುಬಡತನದಲ್ಲಿ ಹುಟ್ಟಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಅವರಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಲಿಲ್ಲ. ಅನಕ್ಷರಸ್ಥೆಯಾಗಿದ್ದರೂ ನಿಸರ್ಗದ ಜ್ಞಾನದೊಂದಿಗೆ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ವೃಕ್ಷವನವನ್ನು ನಿರ್ಮಿಸಿ ವೃಕ್ಷಮಾತೆ, ವನದೇವತೆಯಾದರು. ರಸ್ತೆ ಬದಿಗಳಲ್ಲಿ ಆಲದ ಮರಗಳನ್ನು ನೆಟ್ಟು ಬೆಳೆಸಿ ಸಾಲುಮರದ ತಿಮ್ಮಕ್ಕ ಎಂದೇ ಚಿರಪರಿಚಿತರಾದರು. ಅವರು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ನೆಟ್ಟ ಪ್ರತಿವೃಕ್ಷದಲ್ಲಿ ಅವರನ್ನು ಕಾಣುತ್ತೇವೆ. ನಮ್ಮ ಮನದಾಳದಲ್ಲಿ ಎಂದಿಗೂ ಜೀವಂತವಾಗಿದ್ದಾರೆ. ಅವರನ್ನು ಮಾದರಿಯಾಗಿಟ್ಟುಕೊಂಡು ಭವಿಷ್ಯದ ದೃಷ್ಟಿಯಿಂದ ಬರುವ ಪೀಳಿಗೆಗೆ ಅವರ ಪರಿಸರ ಪ್ರೇಮ ಬದುಕಿದ ರೀತಿಯನ್ನು ತೋರಿಸಿ ಕೊಡಬೇಕಾದ ಅವಶ್ಯಕತೆ ಇದೆ. ಅವರು ವೃಕ್ಷಗಳನ್ನು ಬೆಳೆಸಲು ಪಟ್ಟ ಪರಿಶ್ರಮದಲ್ಲಿ ಗುಲಗಂಜಿ ಯಷ್ಟಾದರೂ ನಾವು ಅನುಸರಿಸಿದರೆ ಅವರ ಆತ್ಮಕ್ಕೆ ಶಾಂತಿ ಕೋರಿದಂತೆ ಆಗುತ್ತದೆ ಎಂದು ಹೇಳಿದರು. ವಿಜ್ಞಾನ ಶಿಕ್ಷಕಿ ಸುನೀತಾ ಯಾಳಗಿ ಮಾತನಾಡಿ ಪರಿಸರದ ಬಗ್ಗೆ ಅವರಿಗಿದ್ದ ಕಾಳಜಿ, ಅವರು ಮಾಡಿದ ಸಾಧನೆ, ದೊರೆತ ಪುರಸ್ಕಾರಗಳಿಗೆ ಗೌರವಾರ್ಥವಾಗಿ ನಮ್ಮ ಶಾಲೆಯ ಇಕೋ ಕ್ಲಬ್ ಗೆ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಎಂದು ಹೆಸರಿಡಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಪರಶುರಾಮ ಸಾಲ್ಮನಿ ಮಾತನಾಡಿ ಯಾವುದೇ ಫಲಾಪೇಕ್ಷೆಯಿಲ್ಲದೆ ನೂರಾರು ಗಿಡಗಳನ್ನು ನೆಟ್ಟು ಇಡೀ ದೇಶವೇ ತನ್ನಕ್ಕ ತಿರುಗಿನೋಡುವಂತೆ ಮಾಡಿದ್ದು ಸಾಲುಮರದ ತಿಮ್ಮಕ್ಕ. ಅವರಿಗಿದ್ದ ಪರಿಸರದ ಪ್ರೇಮ ಕಾಳಜಿ ಪ್ರೇಮ ನಮ್ಮ ಮಕ್ಕಳು ಮೈಗೂಡಿಸಿಕೊಳ್ಳಬೇಕೆಂದರು. ಹಿರಿಯ ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಮಾತನಾಡಿ ಹಸಿರು ಜೀವನದ ಉಸಿರು ಎಂಬ ತತ್ವವನ್ನು ನಂಬಿದ್ದ ಮತ್ತು ಅಕ್ಷರಸಹ ಅದರಂತೆ ಪಾಲಿಸಿದ ತಿಮ್ಮಕ್ಕ ನಮಗೆಲ್ಲರಿಗೂ ಪ್ರೇರಣೆ, ಸ್ಪೂರ್ತಿಯಾದವರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ತಿಮ್ಮಕ್ಕ ಅವರ ಬಗ್ಗೆ ಸ್ವರಚಿತ ಕವನವನ್ನು ವಾಚಿಸಿ ನುಡಿನಮನ ಸಲ್ಲಿಸಿದರು. ಶಿಕ್ಷಣ ಪ್ರೇಮಿ ಶಂಕ್ರಪ್ಪ ಬಡಿಗೇರ ಮಾತನಾಡಿ ಇಂದು ನಮ್ಮ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ, ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ಏರ್ಪಡಿಸಿದ ಶಿಕ್ಷಕರ ಕಾರ್ಯ ಔಚಿತ್ಯಪೂರ್ಣವಾಗಿದೆ ಎಂದರು. ದೈಹಿಕ ಶಿಕ್ಷಕರಾದ ನಾರಾಯಣಪ್ಪ ಬಿಸನಳ್ಳಿ ಅವರೊಂದಿಗೆ ವಿದ್ಯಾರ್ಥಿಗಳು ಪರಿಸರ ಗೀತೆಗಳನ್ನು ಹಾಡುವುದರ ಮೂಲಕ, ಚಿತ್ರಕಲಾ ಶಿಕ್ಷಕರಾದ ಶಾಂತವೀರಯ್ಯ ಕಳ್ಳಿಮಠ ತಿಮ್ಮಕ್ಕ ಅವರ ಭಾವಚಿತ್ರವನ್ನು ಬಿಡಿಸುವುದರ ಮೂಲಕ, ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಬಸವರಾಜ ಚಿಲವಾಡಿಗಿ ಶಿಕ್ಷಕರಾದ ರವಿಕಿರಣ್ ಟಿಕಾರೆ, ರಾಜಸಾಹೇಬ್ ಬಳಿಗಾರ್, ಸೋಮಪ್ಪ ತಳಕಲ್ ಪರಶುರಾಮ ಯಡವಟ್ಟಿ ಶ್ವೇತಾ ಸೋಮಣ್ಣ ಹಾಗೂ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!