ಬಳ್ಳಾರಿ / ಕಂಪ್ಲಿ: ಪಟ್ಟಣದ ಶಾರದಾ ಶಾಲೆಯ ವಿರೇಶ್ವವ ಸಂಘದ (ಶಾರದಾ ಶಾಲೆ) ಆವರಣದಲ್ಲಿ ನ.28 ರ ಶುಕ್ರವಾರದಂದು ಕನ್ನಡ ಹಿತರಕ್ಷಕ ಸಂಘದಿಂದ ಸಂಘದ 55ನೇ ವಾರ್ಷಿಕೋತ್ಸವ ಹಾಗೂ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂಪ್ಲಿ ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದುಗುಂಪಿ ಅಂಬಣ್ಣ ತಿಳಿಸಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಮಾನ್ಯ ಸ್ಥಳೀಯ ಶಾಸಕರಾದ ಜೆ. ಎನ್. ಗಣೇಶ ಇವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲೂಕು ವಿರೇಶ್ವವ ಸಂಘದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕಾ. ಸಾ. ಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠರವರು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಜೂಗಲ್ ಮಂಜುನಾಯಕ, ಪ್ರಭಾರಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಭಾಗವಹಿಸಲಿದ್ದಾರೆ. ಸ್ಥಳೀಯ ಕಲಾವಿದರಾದ ಚಿದಾನಂದ ಗವಾಯಿ (ಸಂಗೀತ ಕ್ಷೇತ್ರ), ಎಸ್.ಪೂಜಾ (ಯೋಗ ಸಾಧಕಿ) ಇವರಿಗೆ ಸನ್ಮಾನ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕೃತ ಬಂಗಿ ದೊಡ್ಡ ಮಂಜುನಾಥ, ಜಂಬಕ್ಕ (ಜನಪದ ಕ್ಷೇತ್ರ), ಚನ್ನದಾಸರ ಮಾರೆಪ್ಪ (ಬಯಲಾಟ) ಇವರಿಗೆ ವಿಶೇಷ ಸನ್ಮಾನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಕಾರ್ಯಕಾರಿ ಸಂಘದ ಸಮಿತಿ ಸದಸ್ಯ ಜಿ.ಚಂದ್ರಶೇಖರ್ಗೌಡ ಇವರಿಗೆ ಅಭಿನಂದನಾ ಸನ್ಮಾನ, ಕ್ರೀಡೆಯಲ್ಲಿ ಸಾಧನೆ ಮಾಡಿದ ಮದರ್ ಥರೇಸಾ ಪಿ.ಯು.ಕಾಲೇಜು ವಿದ್ಯಾರ್ಥಿನಿಯಾದ ಜ್ಯೋತಿ, ಶಾಷಾಬಿ. ಮಲ್ಲೇಶ್ವರಿ ಮತ್ತು ತಾಲೂಕು ಮಟ್ದದಲ್ಲಿ ಕನ್ನಡ ಮಾದ್ಯಮ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ದದಲ್ಲಿ ಅಂಗ್ಲ ಮಾದ್ಯಮದಲ್ಲಿ ಕನ್ನಡ ವಿಷಯಕ್ಕೆ 100ಕ್ಕೆ 100 ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಕಾರ್ಯದರ್ಶಿ ಸಿ.ಯಂಕಪ್ಪ, ಖಜಾಂಚಿ ಶ್ರೀನಿವಾಸ, ಉಪ ಕಾರ್ಯದರ್ಶಿ ಕೆ.ಮೆಹಬೂಬ್, ಸದಸ್ಯ ಯಂಕಾರೆಡ್ಡಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















