ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಗರಸಭೆ ಪೌರಾಯುಕ್ತ ರಾಜು ಡಿ. ಬಣಕರ ಅವರ ಅಮಾನತ್ತಿಗೆ ಒತ್ತಾಯಿಸಿ ಬಿ. ಎಸ್. ಪಿ. ಪಕ್ಷದವರ ಬೃಹತ್ ಪ್ರತಿಭಟನೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಸಭೆ ಪೌರಾಯುಕ್ತರಾದ ರಾಜು ಡಿ. ಬಣಕರ ರವರು ಬಂದ ನಂತರ ನಗರಸಭೆಯ ಕಛೇರಿಯಲ್ಲಿ ಭ್ರಷ್ಟಾಚಾರ ಮಾಡಿರುತ್ತಾರೆ. ಸರ್ವೇ ನಂ. 46/3, 59/1, 135/1, ತ್ರಿಪೂರಾಂತ ಸರ್ವೆ ನಂ. 106/5 ಬಿ ಬಸವಕಲ್ಯಾಣ 34/9. ಸರ್ವೇ ನಂ. 51/6 ತ್ರಿಪೂರಾಂತದಲ್ಲಿ ಅಕ್ರಮ ಖಾತೆ ನೊಂದಣಿ ಮಾಡಿರುತ್ತಾರೆ.
ಬಸವಕಲ್ಯಾಣ ನಗರದ ಸರ್ವೇ ನಂ. 266 ಕರ್ನಾಟಕ ಸರಕಾರದ ಹೆಸರಿನಲ್ಲಿ ಇದ್ದರೂ ಸಹ ಖಾತೆ ಮಾಡಿದ್ದು, ಸರ್ವೇ ನಂಬರ್ 124. 52/1 ಗ್ರಾಮಿಣ ಪ್ರದೇಶದ ಸರ್ವೇ ನಂ. 4/1 ಸರಕಾರದ ಅನುಮೋದನೆ ಪಡೆಯದೆ ನಗರಸಭೆ ಸಂಖ್ಯೆ ಹಾಕಿ ಈ ಖಾತಾ ಮಾಡಿರುತ್ತಾರೆ. ಸದರಿ ಸ್ಥಳವನ್ನು ಪರಿಶೀಲನೆ ಮಾಡಿದಾಗ ಮೂಲಭೂತ ಸೌಲಭ್ಯಗಳು ಇರುವುದಿಲ್ಲ. ಆದರೂ ಕೂಡಾ ಇಂತಹ ಸ್ಥಳದಲ್ಲಿ ಈ -ಖಾತಾ ಮಾಡಿರುತ್ತಾರೆ. ಮತ್ತು 15ನೇ ಹಣಕಾಸಿನಲ್ಲಿ ಕೆಲವು ಕೆಲಸ ಮಾಡದೆ ಕಾಮಗಾರಿ ಬಿಲ್ಲು ಎತ್ತಿರುತ್ತಾರೆ.
ಬಸವಕಲ್ಯಾಣ ನಗರದಲ್ಲಿ ರಸ್ತೆಗುಂಡಿ ಮುಚ್ಚುವ ಸಲುವಾಗಿ ಹಣ ದುರ್ಬಳಕೆ ಹಾಗೂ ಭ್ರಷ್ಟಾಚಾರ ಮಾಡಿರುತ್ತಾರೆ. ಕೆಲವು ಬೋರವೆಲ್ ಗಳು ರಿಪೇರಿ ಮಾಡದೆ ಬೋಗಸ್ ಬಿಲ್ಲನ್ನು ಮಾಡಿರುತ್ತಾರೆಂದು ಬಿ ಎಸ್ ಪಿ ತಾಲೂಕ ಅಧ್ಯಕ್ಷರಾದ ಶಂಕರ ಫುಲೆ ಅವರ ನೇತೃತ್ವದಲ್ಲಿ ಈ ಧರಣಿ ನಡೆಸಲಾಯಿತು.
ತದ ನಂತರ ಬಸವಕಲ್ಯಾಣ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಶಂಕರ್ ಫುಲೆ ಬಿ ಎಸ್ ಪಿ ತಾಲೂಕ ಅಧ್ಯಕ್ಷರು,
ಅಶೋಕ್ ಮಂಠಾಳಕರ ರಾಜ್ಯ ಕಾರ್ಯದರ್ಶಿಗಳು,
ಜ್ಞಾನೇಶ್ವರ್ ಸಿಂಗಾರೆ ರಾಜ್ಯ ಕಾರ್ಯದರ್ಶಿಗಳು,
ಕಪಿಲ್ ಗೋಡ್ಬೋಲೆ ಜಿಲ್ಲಾಧ್ಯಕ್ಷರು,
ಸಚಿನ್ ಗಿರಿ ಜಿಲ್ಲಾ ಉಪಾಧ್ಯಕ್ಷರು,
ರಮೇಶ್ ರಾಠೋಡ್ ತಾಲೂಕು ಉಪಾಧ್ಯಕ್ಷರು,
ಸಚಿನ್ ಕಾಂಬಳೆ ತಾಲೂಕ ಉಪಾಧ್ಯಕ್ಷರು,
ಮಕ್ಬುಲ್ ಸಾಬ್ ತಾಲೂಕ ಸಂಯೋಜಕರು,
ರವಿ ಉದಾತೆ ತಾಲೂಕ ಪ್ರಧಾನ ಕಾರ್ಯದರ್ಶಿಗಳು,
ಮಹಾದೇವ್ ಗಾಯಕ್ವಾಡ್ ತಾಲೂಕ ಕಾರ್ಯದರ್ಶಿಗಳು,
ಚಂದ್ರಶಿಲ ಗಾಯಕ್ವಾಡ ನಗರ ಘಟಕ ಅಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!