ಬಳ್ಳಾರಿ / ಕಂಪ್ಲಿ : ಪಟ್ಟಣದ ಮೈಕಲ್ ಜಾಕ್ಸನ್ ಡ್ಯಾನ್ಸ್ ಸ್ಕೂಲ್ ನಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಡ್ಯಾನ್ಸ್ ಮಾಸ್ಟರ್ ಎಂ. ಎಸ್. ಮುನ್ನಾ ( ಷಾಶವಲಿ) ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡುವುದರ ಮೂಲಕ ಆರಂಭಿಸಿದರು. ಎಲ್ಲಾ ವಿದ್ಯಾರ್ಥಿಗಳು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ನಂತರ ಡ್ಯಾನ್ಸ್ ಮಾಸ್ಟರ್ ಎಂ. ಎಸ್. ಮುನ್ನಾ ಮಾತಾನಾಡಿ ಪ್ರಸ್ತಾವನೆಯಲ್ಲಿರುವ ಮುಖ್ಯ ಅಂಶಗಳಾದ ಸ್ವಾತಂತ್ರ್ಯ, ನ್ಯಾಯ, ಸಮಾನತೆ, ಮುಕ್ತತೆ ಹಾಗೂ ಭಾತೃತ್ವ ಪ್ಲೇಕಾರ್ಡಗಳನ್ನು ಎಲ್ಲರಿಗೂ ನೋಡುವಂತೆ ಪ್ರದರ್ಶಿಸಿ ಅವುಗಳ ಬಗ್ಗೆ ವಿವರಣೆ ನೀಡಿ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ತಿಳಿಸಿದರು.
ನಂತರ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ಹಾಡಿನ ನೃತ್ಯವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ರಘುನಂದನ್, ಯಶ್ವಂತ್, ಹರ್ಷವರ್ಧನ್, ಮದನ್, ತುಳಸಿ, ಈಶ್ವರಿ, ರಾಧಾ, ಉಷಾ, ಸಾರಿಕಾ, ಲೋಕೇಶ್ವರಿ, ಸನ್ನಿಧಿ, ಪ್ರಕೃತಿ ಮತ್ತು ಸಾನ್ವಿ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















