ಬಳ್ಳಾರಿ/ ಕಂಪ್ಲಿ : ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಕಂಪ್ಲಿ ಪಟ್ಟಣದ ಆರಾಧ್ಯದೇವರಾದ ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಬುಧವಾರದಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರಪ್ಪ ತಿಳಿಸಿದರು.
ಅವರು ದೇವಸ್ಥಾನದ ಆವರಣದಲ್ಲಿ ಜೋಡಿ ಮಹಾರಥಗಳಿಗೆ ಅಳವಡಿಸುವ ಪಂಚಲೋಹದ ಕಳಸಗಳ ಧಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ದೇವಸ್ಥಾನದ ಆವರಣದಲ್ಲಿ ನಡೆದ ಪಂಚ ಕಳಸಗಳ ಹರಾಜಿನಲ್ಲಿ ಪೇಟೆ ಬಸವೇಶ್ವರರ ಕಳಸವನ್ನು ಎನ್.ಎಂ.ಪತ್ರೆಯ್ಯಸ್ವಾಮಿ ಮತ್ತು ಕುಟುಂಬದವರು 26,511ರೂಗಳಿಗೆ, ಶ್ರೀ ನೀಲಮ್ಮನವರ ಕಳಸವನ್ನು ಮಫತ್ ಲಾಲ್ ಕುಟುಂಬದವರು 23,000 ಸಾವಿರೂಗಳಿಗೆ ಹಾಗೂ ಕಂಕಣಧಾರಣವನ್ನು ವಾಲಿಕೊಟ್ರಪ್ಪ ಮತ್ತು ಕುಟುಂಬದವರು 20,101 ರೂಗಳಿಗೆ ಪಡೆದರು.
ಕಳಸಗಳು ಮತ್ತು ಕಂಕಣಗಳಿಗೆ ದೇವಸ್ಥಾನದ ಆರ್ಚಕರು ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಮೆರವಣಿಗೆಯ ಮೂಲಕ ಕಳಸಗಳನ್ನು ತೆಗೆದಕೊಂಡು ಹೋಗಿ ಜೋಡಿ ರಥಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ರಥಗಳಿಗೆ ಅಳವಡಿಸಿದರು. ನ.28 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ನ.29ರಂದು ಸ್ವಾಮಿಯ ಗಂಗೆಸ್ಥಳ ಕಾರ್ಯಕ್ರಮ ವೀರಗಾಸೆ,ಪುರವಂತೆ ನೃತ್ಯಗಳೊಂದಿಗೆ ಜರುಗಲಿದೆ. ಅಂದು ರಾತ್ರಿ ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವವು ವಿವಿಧ ಜಾನಪದ ಕಲಾತಂಡಗಳೊAದಿಗೆ ನಡೆಯಲಿದೆ. ನ.30 ರಂದು ಸಂಜೆ ನಾಲ್ಕು ಗಂಟೆಗೆ ಜೋಡಿ ಮಹಾರಥೋತ್ಸವವು ವಿಜೃಂಭನಣೆಯಿಂದ ಜರುಗಲಿದೆ. ಡಿ.1 ರಂದು ರಾತ್ರಿ ಕಡುಬಿನ ಕಾಳಗ ಮತ್ತು ಡಿ.2ರಂದು ವಸಂತೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ದೇವಸ್ತಾನದ ಧರ್ಮಕರ್ತರಾದ ಯು.ಎಂ.ವಿದ್ಯಾಶಂಕರ್, ಪದಾದಿಕಾರಿಗಳಾದ ಜವುಕಿನ ಸತೀಶ್, ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ, ಚಿನ್ನದಕಾಂತಿ ಶಿವಮೂರ್ತಿ, ಎಸ್.ಬಂಡೆಯ್ಯಸ್ವಾಮಿ, ಸಜ್ಜನರ ಮಂಜುನಾಥ್, ಅರವಿ ಅಮರೇಶಗೌಡ, ಮಣ್ಣೂರು ನವೀನಗೌಡ, ನಮದಿಕೋಲು ಶಿವಪ್ರಸಾದ, ಜಿ.ಶಿವಾನಂದ ಹಾಗೂ ಸಲಹಾ ಸಮಿತಿ ಸದಸ್ಯರು, ವೀರಶೈವ ಸಂಘದ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















