
ಬೆಳಗಾವಿ/ ಮೂಡಲಗಿ : ತಾಲೂಕ ಆಡಳಿತ ಪಂಚಾಯತ ಹಾಗೂ ಮೂಡಲಗಿ ಪುರಸಭೆ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಅಶ್ರಯದಲ್ಲಿ ಮೂಡಲಗಿ ನಗರ ಸರಕಾರಿ ಪ್ರಾಥಮಿಕ ಶಾಲೆ ಅವರದಲ್ಲ ಡಾಕ್ಟರ ಬಿ. ಆರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ನಗರ ಪ್ರಮುಖ ಬೀದಿಗಳ ಮುಖಾಂತರ ತಾಲೂಕ ಆಡಳಿತ ಅಧಿಕಾರಿಗಳು ದಲಿತ ಪರ ಸಂಘಟನಾ ಮುಖಂಡರು, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಮೆರವಣಿಗೆಯಲ್ಲಿ ಭಾಗಿಯಾಗಿ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ಗ್ರೇಡ್ 2 ತಹಶೀಲ್ದಾರ್ ಬಬಲಿ, ಉದ್ಘಾಟಕರಾಗಿ ವೆಂಕಟೇಶ್ ಸೋನಾವಲ್ಕರ, ಅಧಿಕಾರಿಗಳಾದ ಚಿನ್ನನವರ, ನಾಗಣ್ಣವರ ಹಿರೇಮಠ, ಯಲ್ಲಪ್ಪ ಗದಾಡಿ, ತುಕಾರಾಮ ಮಾದರ, ದಲಿತ ಮುಖಂಡರಾದ ರಮೇಶ್ ಸಣ್ಣಕ್ಕಿ, ಶಾಬಪ್ಪ ಸಣ್ಣಕ್ಕಿ, ಲಕ್ಷ್ಮಣ ತೆಳಗಡೆ, ಅಶೋಕ ಸಿದ್ದಲಿಂಗಪ್ಪಗೋಳ, ಸುರೇಶ ಸಣ್ಣಕ್ಕಿ, ರವಿ ಮೂಡಲಗಿ, ವಿಲ್ಸನ್ ಡವಳೇಶ್ವರ, ಪ್ರಭಾಕರ ಮಂಟೂರ, ಈರಪ್ಪ ಡವಳೇಶ್ವರ, ಲಕ್ಷ್ಮಣ ಮೇಳಿಗೇರಿ, ನಂಜುಂಡಿ ಸರ್ವಿ, ಯಮನಪ್ಪ ಮೇತ್ರಿ, ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆ ಸ್ವಾಗತ ಎಡ್ವಿನ್ ಪರಸನ್ನವರ, ವಂದನಾರ್ಪಣೆ ಅರುಣ್ ನುಚ್ಚುಡಿ ನಡಿಸಿಕೊಟ್ಟರು.
ವರದಿ ವಿಲ್ಸನ್ ಡವಳೇಶ್ವರ




















