ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲಕ್ಷ ಕಂಠ ಗೀತಾ ಪಾರಾಯಣ ಕೃಷ್ಣಾರ್ಪಣ ಮಸ್ತು!

ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ತಪಸ್ಸಿನ ಫಲವಾಗಿ ಲಕ್ಷ ಕಂಠ ಗೀತಾ ಪಾರಾಯಣ ಯಶಸ್ವಿಯಾಗಿ ಸಮಾಪನ ಗೊಂಡಿತು. ಶ್ರೀ ಶ್ರೀ ಸುಗುಣೇಂದ್ರತೀರ್ಥ ಪಾದಂಗಳವರು ತಮ್ಮ ಸ್ವಾಗತ ಭಾಷಣದಲ್ಲಿ ಸಂಸ್ಕೃತ ದಲ್ಲಿ ಮಾತನಾಡುತ್ತಾ ನಮ್ಮ ಪುತ್ತಿಗೆ ಮಠದಲ್ಲಿ ಇಂದ್ರನ ಪರಂಪರೆ, ಹಾಗೇ ಇವತ್ತು ನಮ್ಮ ಜೊತೆ ನರೇಂದ್ರರ ರೂಪದಲ್ಲಿ ಸಾಕ್ಷಾತ್ ಅರ್ಜುನ ಆಸೀನರಾಗಿದ್ದಾರೆ. ರಾಮಾಯಣದಲ್ಲಿ ಶ್ರೀ ರಾಮರು ಹದಿನಾಲ್ಕು ವರ್ಷ ವನವಾಸ ಮುಗಿಸಿ ಮರಳಿ ಬಂದಿದ್ದರು, ಹಾಗೆಯೇ ನರೇಂದ್ರ ಮೋದಿಜಿ ಹದಿನಾಲ್ಕು ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದು, ಈಗ ಮತ್ತೆ ರಾಮ ರಾಜ್ಯ ಸ್ಥಾಪನೆಗಾಗಿ ಉಡುಪಿಗೆ ಬಂದಿದ್ದಾರೆ. ಆಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡು ಧ್ವಜಾರೋಹಣ ಮಾಡಿ, ಕೃಷ್ಣ ಸನ್ನಿಧಿಯಲ್ಲಿ ವಿಶ್ವ ಗೀತಾ ಪರ್ಯಾಯವನ್ನು ಕೃಷ್ಣಾರ್ಪಣೆ ಮಾಡಲು ವಿಶ್ವ ನಾಯಕ ಅರ್ಜುನ ಸ್ವರೂಪಿ ನರೇಂದ್ರ ಮೋದಿ ಬಂದಿದ್ದಾರೆ. ನರೇಂದ್ರ ಮೋದಿಯವರು ಆತ್ಮ ನಿರ್ಭರ ಮೂಲಕ ಕೃಷ್ಣನ ಸಂದೇಶವನ್ನು ನಿಸ್ವಾರ್ಥವಾಗಿ ಹರಡುತ್ತಿದ್ದಾರೆ. ಭಗವದ್ಗೀತೆಯಲ್ಲಿ ಕೃಷ್ಣನು ಧರ್ಮ ಸ್ಥಾಪನೆಗೆ ಮತ್ತೆ, ಮತ್ತೆ ಅವತಾರ ತಾಳಿ ಬರುವುದಾಗಿ ಸಾರಿದ್ದು, ದುಷ್ಟರನ್ನು ಶಿಕ್ಷಿಸುವುದಾಗಿಯೂ ಭರವಸೆ ನೀಡಿದ್ದು, ನರೇಂದ್ರ ಮೋದಿಯವರು ದುಷ್ಟರ ನಾಶವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನರೇಂದ್ರ ಮೋದಿಯವರ ಧರ್ಮ ರಕ್ಷಣೆ ಕಾರ್ಯಕ್ಕಾಗಿ ” ಭಾರತ ಭಾಗ್ಯ ವಿದಾತ ” ಪ್ರಶಸ್ತಿ ಕೊಟ್ಟು ಸಮ್ಮಾನಿಸಿ, ವಾರಾಣಾಸಿ ಕಾರಿಡಾರ್ ನಂತೆ ಉಡುಪಿ ಕಾರಿಡಾರ್ ಮಾಡಬೇಕೆಂಬ ಪ್ರಸ್ತಾಪವನ್ನು ಶ್ರೀ ಶ್ರೀ ಸುಗುಣೇಂದ್ರ ಸ್ವಾಮೀಜಿಯವರು ಮಾನ್ಯ ಪ್ರಧಾನಿಯವರ ಮುಂದಿಟ್ಟರು.

ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ನಾನು ಮೂರು ದಿನಗಳ ಹಿಂದೆ ಕುರುಕ್ಷೇತ್ರಕ್ಕೆ ಭೇಟಿ ನೀಡಿದ್ದೆ, ಇವತ್ತು ಮಧ್ವಾಚಾರ್ಯ ಸ್ಥಾಪಿತ ಶ್ರೀ ಕೃಷ್ಣ ಮಂದಿರಕ್ಕೆ ಭೇಟಿ ಕೊಟ್ಟಿರುವುದು ಪರಮಾನಂದವಾಗಿದೆ.
ಈ ದಿನ ಲಕ್ಷ ಮಂದಿ ಭಕ್ತರು ಭಗವದ್ಗೀತೆಯನ್ನು ಕಂಠ ಪಾರಾಯಣ ಮಾಡಿರುವುದು ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದೆ. ನನ್ನ ಜನ್ಮ ಗುಜರಾತ ದಲ್ಲಾಗಿದ್ದು ಉಡುಪಿಗೆ ನಿಕಟ ಸಂಬಂಧವಿದೆ, ಉಡುಪಿಯಲ್ಲಿ ಪೂಜಿತ ಶ್ರೀ ಕೃಷ್ಣ ವಿಗ್ರಹವು ಹಿಂದೆ ಮಾತಾ ರುಕ್ಮಿಣಿ ಪೂಜಿಸುತ್ತಿದ್ದರೆಂಬ ಪ್ರತೀತಿ ಇದೆ. ಕಳೆದ ವರ್ಷ ನಾನು ಸಮುದ್ರದಾಳದಲ್ಲಿ ದ್ವಾರಕಾಧೀಶನ ದರ್ಶನ ಮಾಡಿ ಬಂದಿದ್ದೆ. ಉಡುಪಿಯ ಕೃಷ್ಣನ ದರ್ಶನದಿಂದ ತನಗೆ ಆತ್ಮ ಸ್ಥೈರ್ಯ ವೃದ್ಧಿಸುತ್ತದೆಂದು ತಿಳಿಸಿ, ಉಡುಪಿ ಇನ್ನೂ ಹಲವು ಕಾರಣಗಳಿಗಾಗಿ ಮಹತ್ವ ಹೊಂದಿದೆ, ಜನ ಸಂಘದಿಂದ ಗೆದ್ದ ದೇಶದ ಮೊದಲ ಪುರ ಸಭೆ ಉಡುಪಿ ಆಗಿದ್ದು ದಿವಗಂತ ವಿ.ಯೆಸ್.ಆಚಾರ್ಯರು ಮೊದಲ ಪುರ ಸಭಾದ್ಯಕ್ಷರಾಗಿದ್ದರು. ದೇಶಕ್ಕೆ ಮಾದರಿ ಸ್ವಚ್ಛತಾ ಆಂದೋಲನ 5 ದಶಕಗಳ ಹಿಂದೆ ಉಡುಪಿಯಲ್ಲೆ ಆರಂಭವಾಗಿತ್ತು. ರಾಮ ಚರಿತ ಮಾನಸದಲ್ಲಿ ಕಲಿಯುಗದಲ್ಲಿ ಭಗವಂತನ ನಾಮ ಸ್ಮರಣೆಯೇ ಸರ್ವಸ್ವವೆಂದು ಸಾರಲಾಗಿದೆ. ಒಂದು ಲಕ್ಷ ಭಕ್ತರು ಏಕ ಕಾಲದಲ್ಲಿ ಒಂದು ಲಕ್ಷ ಕಂಠ ಗೀತಾ ಪಾರಾಯಣ ಮಾಡುವುದರಿಂದ ಹೊಸ ಶಕ್ತಿ ನೀಡುತ್ತದೆ. ಈ ಮಹತ್ತರ ಸಾಧನೆ ಮಾಡಲು ಕಾರಣೀಕರ್ತರಾದ ಶ್ರೀ ಸುಗುಣೇಂದ್ರ ತೀರ್ಥರಿಗೆ ಆಭಾರಿಯಾಗಿದ್ದೇನೆ, ಈ ನವ ಕಾಲದಲ್ಲಿ ನಮ್ಮ ಯುವಕರು ಧರ್ಮದ ಆಚರಣೆಗಳಿಂದ ದೂರವಾಗುತ್ತಿರುವ ಈ ಕಾಲ ಘಟ್ಟದಲ್ಲಿ ಇಂಥಾ ಗೀತಾ ಯಜ್ಞ ಯುವ ಸಮಾಜವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಸಹಕಾರಿ ಆಗಲಿದೆ, ಮೂರು ದಿನಗಳ ಹಿಂದೆ ಆಯೋಧ್ಯೆಯಲ್ಲಿ ಭಗವಧ್ವಜ ಆರೋಹಣ ಮಾಡಿದ್ದೆ, ಆಯೋಧ್ಯೆ ಮತ್ತು ಉಡುಪಿಗೆ ನಿಕಟ ಸಂಬಂಧವಿದ್ದು ರಾಮ ಮಂದಿರ ನಿರ್ಮಾಣ ಆಗಲು ದಿವಂಗತ ಪರಮ ಪೂಜ್ಯ ವಿಶ್ವೇಶ ತೀರ್ಥ ಸ್ವಾಮೀಜಿಯವರ ಕೊಡುಗೆಯಿದೆ, ಆ ಕೊಡುಗೆಯನ್ನು ಗುರುತಿಸಿ ಆಯೋಧ್ಯೆಯ ಆರು ದ್ವಾರಗಳಲ್ಲಿ ಒಂದಕ್ಕೆ ಮಧ್ವಾಚಾರ್ಯರ ಹೆಸರಿಡಲಾಗಿದೆ. ಇದು ಉಡುಪಿ, ಕರ್ನಾಟಕ ಮತ್ತು ಸಮಸ್ತ ಭಾರತ ದೇಶಕ್ಕೆ ಹೆಮ್ಮೆಯ ವಿಷಯ. ಮಧ್ವಾಚಾರ್ಯರ ಧ್ವೈತ ಸಿದ್ಧಾಂತದಿಂದ ಭಕ್ತಿ ಚೇತನಗೊಂಡಿದೆ ಮತ್ತು ದಿನ ನಿತ್ಯ ಭಕ್ತರಿಗೆ ಭೋಜನ ಸಂತರ್ಪಣೆ ಮಹತ್ವದ್ದಾಗಿದೆ. ಭಕ್ತಿಯ ಜೊತೆಗೆ ದಾಸ ಸಂಸ್ಕೃತಿ ಕೂಡಾ ಉಡುಪಿಯಿಂದ ಆರಂಭವಾಗಿ ಪುರಂದರ ಮತ್ತು ಕನಕದಾಸರಂಥ ದಾಸ ಶ್ರೇಷ್ಠರು ಲಭಿಸಿದ್ದಾರೆ. ದಾಸರ ಕೀರ್ತನೆಗಳು ಈಗಿನ ಆಧುನಿಕ ಯುಗದಲ್ಲೂ ಪ್ರಸ್ತುತವಾಗಿದ್ದು ಯುವಕರು ಸಾಮಾಜಿಕ ತಾಣಗಳಲ್ಲಿ ಹರಿ ಕೀರ್ತನೆಗಳನ್ನು ಹರಿಯ ಬಿಡುತ್ತಾರೆ.
ಭಗವದ್ಗೀತೆಯಲ್ಲಿ ರಾಷ್ಟ್ರರ ಆಡಳಿತದ ಬಗ್ಗೆಯೂ ವಿವರಿಸಲಾಗಿದ್ದು “ವಸುದೈವ ಕುಟುಂಬ”ದ ಬಗ್ಗೆ ಪ್ರಾಧಾನ್ಯತೆ ಕೊಡಲಾಗಿದೆ, ಜೊತೆಗೆ ದುಷ್ಟರನ್ನು ಶಿಕ್ಷಿಸುವ ಬಗ್ಗೆಯೂ ಒತ್ತು ಕೊಡಲಾಗಿದ್ದು ನಮ್ಮ ಈಗಿನ ಆಡಳಿತದಲ್ಲಿ ಕೆಂಪು ಕೋಟೆಯಿಂದ ಶಾಂತಿ ಸಂದೇಶವನ್ನು ಬಿತ್ತರಿಸುತ್ತೇವೆ, ಹಾಗೂ ಆವಶ್ಯಕತೆ ಬಂದಾಗ ನಮ್ಮ ಸುದರ್ಶನ ಚಕ್ರ ದುಷ್ಟರ ಸಂಹಾರ ಮಾಡುತ್ತದೆ. ಪಹಲ್ಗಾಂವ್ ನಲ್ಲಿ ಆತಂಕವಾದಿ ಆಕ್ರಮಣದ ನಂತರ ಆಪರೇಶನ್ ಸಿಂಧೂರ್ ಮೂಲಕ ನಮ್ಮ ವೈರಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ. ನವ ಭಾರತಕ್ಕೆ ಧರ್ಮ ರಕ್ಷಣೆ ಮಾಡಲು ಮತ್ತು ಧರ್ಮ ಸ್ಥಾಪನೆ ಮಾಡಲೂ ಗೊತ್ತು, ನಾವು ಯಾರಿಗೂ ತಲೆ ತಗ್ಗಿಸುವುದಿಲ್ಲ ಮತ್ತು ದೇಶವಾಸಿಗಳ ರಕ್ಷಣೆಯ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಭಗವದ್ಗೀತೆಯಲ್ಲಿ ಒಂಬತ್ತು ಕರ್ತವ್ಯಗಳನ್ನು ಹೇರಲಾಗಿದೆ. ಇವತ್ತು ನಾನು ನಿಮ್ಮಲ್ಲಿ ಆ ಒಂಬತ್ತು ಕರ್ತವ್ಯಗಳನ್ನು ಪಾಲಿಸಲು ಕರೆ ನೀಡುತ್ತೇನೆ. ಅವುಗಳೆಂದರೆ ನಿಮ್ಮ ಜೀವನದಲ್ಲಿ ಯಾವೊಬ್ಬನನ್ನಾದರೂ ಬಡತನದಿಂದ ಮೇಲೆತ್ತಿ, ಜಲ ರಕ್ಷಣೆ ಮಾಡಿ, ಸಸ್ಯಗಳನ್ನು ನೆಡಿ, ಸ್ವದೇಶಿ ಆಂದೋಲನದಿಂದ ಆತ್ಮ ನಿರ್ಭರ, ವೋಕಲ್ ಪಾರ್ ಲೋಕಲ್, ನ್ಯಾಚುರಲ್ ಫಾರ್ಮಿಂಗ್ ಮುಂತಾದ ಧ್ಯೇಯ ವಾಕ್ಯದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,
ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆ,
ಶ್ರೀ ಪ್ರಹಲ್ಲಾದ್ ಜೋಷಿ,
ಶ್ರೀ ಕೋಟ ಶ್ರೀನಿವಾಸ ಪೂಜಾರಿ,
ಶಾಸಕರಾದ ಶ್ರೀ ಯಶಪಾಲ್ ಸುವರ್ಣ,
ಶ್ರೀ ಗುರ್ಮೆ ಸುರೇಶ್ ಶೆಟ್ಟಿ,
ಶ್ರೀ ಗುರುರಾಜ್ ಗಂಟಿಹೊಳೆ,
ಶ್ರೀ ಲಾಲಾಜಿ ಮೆಂಡನ್ ಸೇರಿದಂತೆ ಗಣ್ಯಾತಿ ಗಣ್ಯರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ಉಪಸ್ಥಿತರಿದ್ದರು.

ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!