ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಮಾಂಬಳ್ಳಿ ಹಿಂಡಿ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ,
ಈ ಸಂದರ್ಭದಲ್ಲಿ ಯಳಂದೂರು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಉಮೇಶ್ ಮಾತನಾಡಿ
ಪಂಚ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಪಂಚ ಯೋಜನೆ ಪ್ರತಿ ಜಿಲ್ಲೆಯಲ್ಲಿ ಸುಮಾರು ಮೀಟಿಂಗ್ ಮಾಡಲಾಯಿತು. ನಂತರ ಜಿಲ್ಲಾ ಮಟ್ಟ ತಾಲೂಕು ಮಟ್ಟ ,ಅಧ್ಯಕ್ಷರು ಸದಸ್ಯರ ಸುಮಾರು ಹತ್ತು ಸಭೆ ಮಾಡಲಾಗಿದೆ, ಐದನೆಯ ಸಭೆಯಲ್ಲಿ ಚರ್ಚೆ ಮಾಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ಸಂವಾದ ಕಾರ್ಯಕ್ರಮ ಮಾಡಿ ಸವಲತ್ತು ಸರಿಯಾಗಿ ತಲುಪಿತ್ತುದಿಯೇ ಎಂದು ಎಲ್ಲರ ಸಮ್ಮುಖದಲ್ಲಿ ಕುಂದು ಕೊರತೆ ಬಗ್ಗೆ ಚರ್ಚೆ ಮಾಡಿ ಫಲಾನುಭವಿಗಳು ಚರ್ಚೆ ಮಾಡಲು ಸೇರಿದ್ದೇವೆ ಎಂದು ಹೇಳಿದರು.
ನಂತರ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರು ಚಂದ್ರು ಮಾತನಾಡಿ ಸಂವಾದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅಭಿನಂದಿಸಿ ಪರಾಮರ್ಶೆ ಸಮಿತಿ ಜಿಲ್ಲಾ ಕಮಿಟಿ ತಾಲೂಕು ಮಟ್ಟದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇದರಲ್ಲಿ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಸಿಡಿಪಿಓ ಅವರು ಕೈ ಜೋಡಿಸಿ ಸ್ಥಳೀಯ ಮಟ್ಟದಲ್ಲಿ ಏನಾದರೂ ಲೋಪದೋಷಗಳಿದ್ದರೆ
ಸರಿಪಡಿಸಿ ಫಲಾನುಭವಿಗಳಿಗೆ ಅನುಕೂಲವಾಗುವಂತೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಕೊಡುತ್ತಿದ್ದಾರೆ ಆ ಕೀರ್ತಿ ಅವರಿಗೆ ಸಲ್ಲುತ್ತದೆ, ಮಹಿಳೆಯರು ಉಚಿತ ಅಕ್ಕಿ ಹಸಿವಿನಿಂದ ಬಳಲಬಾರದು ಎಂದು
ಬಡವರ ಕಷ್ಟ ಬಗೆಹರಿಸಲು ಸಾಧ್ಯ ಎಂದರು ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆಯ ಹಣವು ಕಂತಿನ ಲೆಕ್ಕ ಇದು ಬರುತ್ತದೆ ತಿಂಗಳ ಲೆಕ್ಕದಲ್ಲಿ ಅಲ್ಲ, ಮುಂದಿನ ದಿನಗಳಲ್ಲಿ ಮುಂದಿನ ಎಲ್ಲಾ ಕಂತಿನ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ಆಶ್ವಾಸನೆ ನೀಡಿದರು.
ಗೃಹ ಜ್ಯೋತಿ ಉಚಿತ ವಿದ್ಯುತ್ ಬಗ್ಗೆ ಮಾತನಾಡಿ ನಂತರ ಅನ್ನ ಭಾಗ್ಯ ಅದರ ಬಗ್ಗೆ ಮಾತನಾಡಿ ಯಾರು ಹಸಿವಿನಿಂದ ಬಳಲಬಾರದು ಎಂದು ಈ ಯೋಜನೆ ನಮ್ಮ ಸಿದ್ದರಾಮಯ್ಯನವರು ತಂದಿದ್ದಾರೆ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಶಕ್ತಿ ಯೋಜನೆ ಮೂಲಕ ಕೆ ಎಸ್ ಆರ್ ಟಿ ಸಿ ಫ್ರೀ ಆಗಿ ಸರ್ಕಾರಿ ಬಸ್ಸುಗಳಲ್ಲಿ ಸ್ವಾಭಿಮಾನವಾಗಿ ಓಡಾಡಲು ಮಾಡಿಕೊಟ್ಟಿದ್ದಾರೆ, ಇದೆಲ್ಲಾ ಯೋಜನೆಗಳು ಸ್ವಾಭಿಮಾನದ ಬದುಕು ಮಹಿಳೆಯರು ಕಟ್ಟಿಕೊಳ್ಳಲು ಮಾಡಲಾಗಿದೆ ಎಂದರು.
ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಫಲಾನುಭವಿಗಳ ಜೊತೆ ಸಂವಾದ ನಡೆಸಿ ಅವರ ಕುಂದು ಕೊರತೆಗಳನ್ನು ಪರಿಶೀಲನೆ ಮಾಡಿ ಆದಷ್ಟು ಕುಂದುಕೊರತೆಗಳನ್ನು ಸ್ಥಳದಲ್ಲೇ ಸರಿಪಡಿಸಿಕೊಟ್ಟರು ಉಳಿದಂತಹ ಕುಂದು ಕೊರತೆಗಳು ಮುಂದಿನ ದಿನಗಳಲ್ಲಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಯಳಂದೂರು ತಾಲೂಕು ಗ್ಯಾರೆಂಟ್ ಅಧ್ಯಕ್ಷರು ಪ್ರಭು ಪ್ರಸಾದ್ ಮಾತನಾಡಿ
ಪಂಚ ಗ್ಯಾರಂಟಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದಾಗೆ ಇದು ಅಸಾಧ್ಯ ಎಂದಿದ್ದರು
ಕೆಲವಲ ,35 ದಿನದಲ್ಲಿ ಮಹಿಳೆಯರಿಗೆ ಸಬಲೀಕರಣ ಹಾಗೂ ಸ್ವಾವಲಂಬಿ ಯೋಜನೆಗಳನ್ನು ಜಾರಿಗೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದರು ಎಂದರು.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನಗಳ ಅಧ್ಯಕ್ಷ ಚಂದ್ರು, ಬೆಳಂದೂರು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪ್ರಭು ಪ್ರಸಾದ್, ಮಾಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಲ್ಲೇಶ್ , ಗ್ರಾಮ ಪಂಚಾಯಿತಿ ಸದಸ್ಯರು ಅಗರ ಮಾಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಗರ ಮಾಂಬಳ್ಳಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್



















