
ಕಾಳಗಿ, WORT ಸಂಸ್ಥೆಯ ಹೆಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನಾ ಜಲಾನಯನ ಉದ್ಘಾಟನಾ ಕಾರ್ಯಕ್ರಮ ಕಂದಗೋಳ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಲಾಯಿತು.
ವಾಟರ್ ಸಂಸ್ಥೆಯ ಹೆಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನ ಜಲಾಯನ ಉದ್ಘಾಟನೆ ಕಾರ್ಯಕ್ರಮ ಜಿಲ್ಲಾ ಪಂಚಾಯತ್ ಸಿ ಇ ಓ ಭುವರಸಿಂಗ್ ಮೀನಾ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮವನ್ನು ಕಂದಗೊಳ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಡಬ್ಲ್ಯೂ ಆರ್ ಟಿ ಸಂಸ್ಥೆ ಈ 10 ಗ್ರಾಮಗಳನ್ನು ಆಯ್ಕೆ ಮಾಡಿದ್ದು ಸಂತೋಷದ ವಿಷಯ ಈ ಗ್ರಾಮಗಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಪ್ರದೇಶ ಗುಡ್ಡಗಾಡು ಆಗಿರುವುದರಿಂದ ಮಳೆ ಬಂದಾಗ ಹರಿದು ಓಡಿ ಹೋಗುವ ನೀರು, ನಡೆಯುವ ಹಾಗೆ, ಮತ್ತು ನಡೆದು ಹೋಗುವ ನೀರು ನಿಲ್ಲುವ ಹಾಗೆ, ಮತ್ತು ನಿಂತ ನೀರು ಇಂಗುವ ಹಾಗೆ, ಇಂಗಿದ ನೀರು ಬಾವಿ ಮತ್ತು ಕೊಳವೆ ಬಾಯಿಂದ ತೆಗೆದುಕೊಂಡು ಪರಿವರ್ತನೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು. ಮತ್ತು ವರ್ಷದಮಳೆಯಿಂದ ಎಕ್ಕರೆಯಲ್ಲಿ 20 ಕುಂಟಲ ಮಣ್ಣು ಹರಿದು ಹೋಗುತ್ತದೆ, ಹಾಗೆ ಒಂದು ಎಕರೆಯಲ್ಲಿ ಬೆಳೆದ ತೊಗರಿ ಕಟ್ಟಿಗೆ, ಹತ್ತರಿಂದ ಹನ್ನೆರಡು ಕ್ವಿಂಟಲ್ ಬರುತ್ತದೆ, ಅದರಿಂದನೂ ತಾವು ಅರಣಿ ಹಾಕಿಕೊಂಡು ಗೊಬ್ಬರ ಮಾಡಿಕೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರು ವೀರಣ್ಣ ಗಂಗಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೊಣಗಿ, ಮಂಜುಳಾ ಸಿಂಗೆ ಅಧ್ಯಕ್ಷರು ಗ್ರಾಮ ಪಂಚಾಯತ, ನಾಗವೇಣಿ ರಾಠೋಡ ಅಧ್ಯಕ್ಷರು ಗ್ರಾಮ ಪಂಚಾಯತ,ಕೆವಿಕೆ ಅಧಿಕಾರಿಗಳಾದ ರಾಜೇಂದ್ರ, ತಾಲೂಕ ಪಂಚಾಯತ್ ಅಧಿಕಾರಿಯಾಗಿ ಬಸಲಿಂಗಪ್ಪ ಡಿಗ್ಗಿ, ತಾಲೂಕ ಕೃಷಿ ಅಧಿಕಾರಿಯಾದ ಸಂಜುಕುಮಾರ, ವಿಕಾಸ್ ಪಟೇದಾರ್, ಚೇತನ್ ಪಾಟೀಲ್, ಮತ್ತು ಪಂಚಾಯತ ಅಧಿಕಾರಿಗಳು, ರೈತ ಮುಖಂಡರು ರೇವಣಸಿದ್ಧಪ್ಪ, ಸಾತ್ನೂರ, ಮಂಜು ಪಾಟೀಲ್, ಗುರು ಬೋಧನ್, ಸಿದ್ದನಗೌಡ, ಸಿದ್ದು ಪಾಟೀಲ್, ಚಂದ್ರಕಾಂತ ಸಿಂಗೆ, ಮಲ್ಲು ವಟುವಟಿ, ರಾಜು ದೊಡ್ಡ ಮನಿ, ಶಿವಾನಂದ್ ಗೌಡಪ್ಪನವರ, ಮತ್ತು ಆಯ್ಕೆಯಾದ 10 ಗ್ರಾಮಗಳಾದ ಕಂದಗೂಳ, ವಟವಟಿ, ರೇವಾಯಿ , ಬೇಡಸೂರ್, ಮುಕ್ರಂಬಾ, ಗೊಣಗಿ, ದುತ್ತರ್ಗಾ, ಪಂಗರಗಾ, ಮಾವಿನಸುರ, ಅರಣಕಲ್, ಗ್ರಾಮದ ಸುಮಾರು 400ಕ್ಕೂ ಹೆಚ್ಚು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ



















