ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಪ್ರಕೃತಿಯನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವದು ನಮ್ಮೆಲ್ಲರ ಕರ್ತವ್ಯ” ನ್ಯಾ. ಮರಿಯಪ್ಪ.

ಯಾದಗಿರಿ/ಗುರುಮಠಕಲ್: ಪರಿಸರ ಸವಾಲುಗಳ ಬಗ್ಗೆ ಅರಿವು ಮತ್ತು ಪರಿಸರ ಸಂರಕ್ಷಣೆಗಾಗಿ ಸುಸ್ಥಿರ ಅಭ್ಯಾಸಗಳು, ವೈಯಕ್ತಿಕ ಜವಾಬ್ದಾರಿ ಹಾಗೂ ಅಭಿವೃದ್ಧಿಯ ಜೊತೆ ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಅವರು ಅಭಿಪ್ರಾಯ ಪಟ್ಟರು.

ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ,ಜಿಲ್ಲಾ ಪೊಲೀಸ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಯಾದಗಿರಿ ಹಾಗೂ ಪುರಸಭೆ ಗುರುಮಠಕಲ್‌, ಇವರುಗಳ ಸಹಯೋಗದಲ್ಲಿ
“ಇಂದಿನ ಪರಿಸರ ರಕ್ಷಣೆಯೇ ನಾಳೆಯ ಭದ್ರತೆ” ಕುರಿತು ಜಾಥಾ ಹಾಗೂ ಕಾನೂನು ಅರಿವು – ನೆರವು ಕಾರ್ಯಕ್ರಮ” ಪಟ್ಟಣದ ಸಿಹಿ ನೀರು ಬಾವಿಯಿಂದ ಮುಖ್ಯ ರಸ್ತೆಮೂಲಕ ಪುರಸಭೆ ಕಛೇರಿಯವರೆಗೆ ಜಾಥಾ ನಡೆಸಿ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಸಸಿ ನೆಟ್ಟು, ಸಭಾಂಗಣದಲ್ಲಿ ಕಾರ್ಯಕ್ರಮದ ಜರುಗಿತು.

ಪರಿಸರ ರಕ್ಷಣೆಗೆ ಕಾನೂನು ಯಥಾವತ್ತಾಗಿ ಜಾರಿಯಾಗಬೇಕು, ಅನಧಿಕೃತ ರೆಸಾರ್ಟಗಳ ನಿರ್ಮಾಣಕ್ಕಾಗಿ ಸಾಕಷ್ಟು ಕಾಡು ನಾಶ ಆಗುತ್ತಿರುವದು, ನೀರಿನ ಮಿತಬಳಕೆ ಮಾಡದೇ ಇರುವದು ಅಂತರ್ಜಲ ನೀರಿನ ಸಂರಕ್ಷಣೆಗೆ ತಳಮಟ್ಟದಲ್ಲಿ ಜಾಗೃತಿಯ ಅವಶ್ಯಕತೆ ಇದೆ ಎಂದು ಕಾರ್ಯಕ್ರಮ ಚಾಲನೆ ನೀಡಿ ನ್ಯಾ. ಮರಿಯಪ್ಪ ಹೇಳಿದರು.

ಪರಿಸರ ಸಂರಕ್ಷಣೆಯ ಕಾನೂನು ಮತ್ತು ಸಾಮಾಜಿಕ ಆಯಾಮಗಳ ಕುರಿತು ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ನಮ್ಮ ಪಾತ್ರ, ನಾವು ನಮ್ಮಿಂದ ಎಷ್ಟು ಸಾಧ್ಯ ಅಷ್ಟು ಕೊಡುಗೆ ನೀಡಬೇಕು ಹಸಿ ಕಸ ಮತ್ತು ವಣ ಕಸದ ವಿಂಗಡಿಸಿ ಹಾಕುವದರಿಂದ ಆಗುವ ಉಪಯೋಗ ಮತ್ತು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ನಿಷೇಧ ಮಾಡಿ ಬಟ್ಟೆ ಚೀಲ ಉಪಯೋಗಿಸುವ ಮೂಲಕ ಪರಿಸರ ಸಂರಕ್ಷಣಾ ವಿಧಾನಗಳನ್ನು ಜಿಲ್ಲಾ ಮಾಲಿನ್ಯ ನಿಯಂತ್ರಣ ಪರಿಸರ ಅಧಿಕಾರಿಗಳಾದ ಆದಮ ಪಟೇಲ, ಹನಮಪ್ಪ, ಶಕುಂತಲಾ
ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗುರುಮಠಕಲ್ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಮಹಿಪಾಲರೆಡ್ಡಿ ಎ.ಎಸ್.ಐ, ಗುರುಮಠಕಲ್ ಪ್ರಾದೇಶಿಕ ವಲಯ ಆರಣ್ಯಧಿಕಾರಿ ರಾಹುಲ್ ಸಾಗರೆ, ಪ್ರಶಾಂತ್ ಪರಿಸರ ಅಭಿಯಂತರರು ಗುರುಮಠಕಲ್, ಭೀಮಾಶಂಕರ ಎಸ್ ಆಶನಾಳ, ನ್ಯಾಯವಾದಿಗಳು ಹಾಗೂ ಪ್ರಧಾನ ಕಾರ್ಯಾದರ್ಶಿ ಯಾದಗಿರಿ ಸೇರಿದಂತೆ ಪುರಸಭೆ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು, ಹವಿಶ್ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!