
ಚಾಮರಾಜನಗರ: ಹನೂರು ತಾಲೂಕಿನ ಅಂಬೇಡ್ಕರ್ ವೃತ್ತದಿಂದ ಕೊಳ್ಳೇಗಾಲ ಅಂಬೇಡ್ಕರ್ ವೃತ್ತದಲ್ಲಿ ಕಾಲ್ನಡಿಗೆ ಜಾಥಾ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಸಿದ್ದರಾಜು ಮಾತನಾಡಿ ಸುಲ್ವಡಿ ವಿಷಪ್ರಸಾದ ದುರಂತದಲ್ಲಿ ನೊಂದದಂತ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಭೀಮ ಕೋರೆಗಾಂವ್ 208ನೇ ವರ್ಷದ ವಿಜಯೋತ್ಸವದ ಸಂಧರ್ಭದಲ್ಲಿ ಹನೂರು ಪಟ್ಟಣದಿಂದ ಕೊಳ್ಳೇಗಾಲದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ತನಕ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನೆ ಸಂಚಾಲಕ ದೊಡ್ಡಇಂದವಾಡಿ ಸಿದ್ದರಾಜು ತಿಳಿಸಿದ್ದರು.
ಹನೂರು ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದರು,
ನಮ್ಮ ದಲಿತರ ಸಮಾನತೆಗಾಗಿ ಭೀಮ ಕೋರೆಗಾಂವ್ ನೆಡೆದಿದ್ದು ನಾವು ಪ್ರತಿ ವರ್ಷ ವಿಶೇಷ ಆಚರಣೆಗಳನ್ನು ಮಾಡಿಕೊಂಡು ಬರುತ್ತಾ ಇದ್ದೇವೆ ನಮ್ಮ ದೇಶದಲ್ಲಿ ದಲಿತರಿಗೆ ಬದುಕು ಹಕ್ಕು ಇನ್ನೂ ಕೂಡಾ ಮರೀಚಿಕೆಯಾಗಿ ಉಳಿದಿದೆ ಎಂದರು.
ಕಳೆದ ಏಳು ವರ್ಷದ ಹಿಂದೆ ನಮ್ಮ ಭಾಗದಲ್ಲಿ ನೆಡೆದ ಸುಲ್ವಡಿ ವಿಷ ಪ್ರಸಾದ ದುರಂತದಲ್ಲಿ ಅನೇಕ ದಲಿತರು ತೀರಿಕೊಂಡರು ಹಾಗೂ ಇನ್ನು ಕೆಲವರು ಬದುಕಿ ಉಳಿದರು ಅವರ ಅರೋಗ್ಯ ಸ್ಥಿತಿ ದಿನದಿನೆ ಹದಗೆಟ್ಟಿದೆ ಎಂದರು.
ದಲಿತರ ಸಾವು ನೋವಿಗೆ ಬೆಲೆ ಇಲ್ಲದಂತಾಗಿದೆ ತಮ್ಮ ಅಧಿಕಾರದ ದುರಾಸೆಗೆ ಬಡವರು ದಲಿತರ ಜೀವನದ ಮೇಲೆ ಚೇಲಾಟ ಆಡಿದ್ದಾರೆ ಅಂತವರಿಗೆ ಕೋರ್ಟ್ ಜಾಮೀನು ನೀಡಿರುವುದು ದುರದೃಷ್ಟಕಾರವಾಗಿದೆ ಎಂದರು.
ಸರ್ಕಾರ ದುರಂತದಲ್ಲಿ ಮಡಿದವರಿಗೆ ಸಂಕಷ್ಟ ಅನುಭವಿಸಿದರಿಗೆ ಇನ್ನು ಕೂಡ ನ್ಯಾಯ ಕೊಟ್ಟಿಲ್ಲ ಸಂತ್ರಸ್ತರಿಗೆ ಸರ್ಕಾರ ಸೌಲಭ್ಯಗಳನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಹನೂರು ಪಟ್ಟಣದ ಸುತ್ತ ಮುತ್ತ ಗ್ರಾಮಗಳಿಂದ ಹಾಗೂ ಮಾರ್ಟಳ್ಳಿ ಗ್ರಾಮಗಳಿಂದ ಸಂತ್ರಸ್ತ ಕುಟುಂಬದವರು ಸ್ವಂತ ವಾಹನಗಳನ್ನು ಮಾಡಿಕೊಂಡು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು.
ಅಭಿಮಾನ ಮೆರೆದ ದಲಿತ ಮುಖಂಡರು ಹನೂರು ಪಟ್ಟಣದಿಂದ ಜಾಥಾದಲ್ಲಿ ಪಾಲ್ಗೊಂಡ ಅಷ್ಟು ಜನಗಳಿಗೂ ದಾರಿ ಮದ್ಯೆ ಜ್ಯೂಸ್ ಪಾನಕ ಬ್ರೆಡ್ ಬಿಸ್ಕೆಟ್ ಪಾನೀಯಗಳನ್ನು ನೀಡಿ ಸತ್ಕಾರ ಮಾಡಿದರು.
ಕೊಳ್ಳೇಗಾಲಕ್ಕೆ ಪ್ರವೇಶ ಆಗುತ್ತಿದ್ದಂತೆ ಅಂಬೇಡ್ಕರ್ ಅಭಿಮಾನಿಗಳು ಬರಮಾಡಿಕೊಂಡು ಊಟದ ವ್ಯವಸ್ಥೆ ಮಾಡಿ ಸತ್ಕಾರ ಮಾಡಿದರು.
ಈ ಸಂಧರ್ಭದಲ್ಲಿ ಡಿ.ಎಸ್.ಎಸ್ ಅಂಬೇಡ್ಕರ್ ವಾದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಸಿದ್ದರಾಜು, ತಾಲೂಕು ಅಧ್ಯಕ್ಷ ಮಾದೇಶ್ ,ನಾಗರಾಜು ಸುಂದ್ರಮ್ಮ ಗುರುದೇವ್ ದೊಡ್ಡಯ್ಯ ಈರತಯ್ಯ ಕೆಂಪಣ್ಣ ,ವಾಸಿಂ, ಪಾರುಕ್ ,ಶಾಂತಣ್ಣ , ರಾಮಲಿಂಗಮ್, ಮಾದೇಶ್,ಮುರುಗೇಶ್ ಮಾರ್ಟಳ್ಳಿ ಚಿಕ್ಕತಾಯಮ್ಮ ಸೇರಿದಂತೆ ಇತರರು ಇದ್ದರು.
ವರದಿ :ಉಸ್ಮಾನ್ ಖಾನ್.




















