ವಿಜಯಪುರ/ ಮುದ್ದೇಬಿಹಾಳ : ಗುಡಿಹಾಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಎರಡರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಸಿಹಿ ಹಂಚಿ ಹೊಸ ವರ್ಷದ ಹಾಗೂ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯ ಶುಭಾಶಯಗಳನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡಿಹಾಳದ ಮುಖ್ಯ ಗುರುಗಳಾದ ಸಂಗಮೇಶ ಶಾಂತಪ್ಪ ನವಲಿ ರವರು ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಆಟಿಕೆಗಳನ್ನು ಹಾಗೂ ಸೌಲಭ್ಯಗಳನ್ನು ಸವಲತ್ತುಗಳನ್ನು ಮೇಲಾಧಿಕಾರಿಗಳು ಒದಗಿಸಿಕೊಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಎಲ್ಲಮ್ಮ ಉತಾಳೆ ಅಂಗನವಾಡಿ ಸಹಾಯಕಿ ಶರಣಮ್ಮ ಜೋಗಿನ ಅಂಗನವಾಡಿ ಒಂದರ ಕಾರ್ಯಕರ್ತೆ ಪ್ರಿಯಾ ಬಿರಾದಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳದ ಮುಖ್ಯ ಗುರುಗಳಾದ ಸಂಗಮೇಶ ಶಾಂತಪ್ಪ ನವಲಿ ಸಹ ಶಿಕ್ಷಕಿಯರಾದ ಲಕ್ಷ್ಮೀ ಮನಿಕಟ್ಟಿ ಅತಿಥಿ ಶಿಕ್ಷಕಿಯರಾದ ಕಾಶಿಬಾಯಿ ಹಾದಿಮನಿ ಅಕ್ಷರ ದಾಸೋಹ ಯೋಜನೆಯ ಮುಖ್ಯ ಅಡಿಗೆಯವರಾದ ರುದ್ರಮ್ಮಜಲಪುರ ಹಣಮವ್ವ ಹಡಲಗೇರಿ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















