ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರದೀಪ ಕುಮಾರ ಮಲ್ಲಪ್ಪ ಮಾನೆ ಅವರ ಅಧಿಕಾರ ಅವಧಿಯಲ್ಲಿ 2022 – 23ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಹಿಂಗಣಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಮೀಸಲು ಇಟ್ಟಿರುತ್ತಾರೆ. ಸದ್ಯ ಈ ಹಣವನ್ನು ಪಂಚಾಯತಿ ಕಾಂಪೌಂಡಗೆ ಬಳಕೆ ಮಾಡಿರುತ್ತಾರೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೋರಿರುತ್ತಾರೆ ಯಾವುದೇ ಜಾಹೀರಾತು ಹೊರಡಿಸಿಲ್ಲ ಗುತ್ತಿಗೆದಾರರ ಅಕೌಂಟಿಗೆ ಹಣ ವರ್ಗಾವಣೆ ಮಾಡಿರುವುದಿಲ್ಲ ಸರ್ಕಾರಿ ನಿಯಮ ಉಲ್ಲಂಘನೆ ಆಗಿದೆ ಎಂದು ನಾವು ದಿನಾಂಕ 4.11.2025 ರಂದು ದೂರು ಸಲ್ಲಿಸಿದೆವು ದೂರು ಸಲ್ಲಿಸಿ ಒಂದೂವರೆ ತಿಂಗಳಾದರೂ ಇಂಡಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭೀಮಾಶಂಕರ್ ಕನ್ನೂರ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು
ದೂರು ಸಲ್ಲಿಸಿದವರಾದ ಲಕ್ಷ್ಮಿಕಾಂತ್ ಏಳಗಿ,
ಶಿವು ಗುಡಮಿ ,ಉಮೇಶ್ ಮಾಣಿಕಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಿನದಲ್ಲಿ ಆ ಕೆಲಸದ ದಾಖಲಾತಿ ನೀಡದಿದ್ದರೆ
ತಾಲೂಕು ಪಂಚಾಯತಿಗೆ ಬೀಗ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ ಲೋಹಿತ್ ಕುಮಾರ್ ರೂಗಿ




















