ಬಾಗಲಕೋಟೆ : ಮುಧೋಳ ತಾಲೂಕಿನ ಹಿರೇಆಲಗುಂಡಿಯಲ್ಲಿ ರಾಷ್ಟ್ರೀಯ ಬಸವ ಚಿಂತನ ಬಳಗದ ಆಶ್ರಯದಲ್ಲಿ ಶನಿವಾರ ದಿ. 3 ರಂದು ಸಂಜೆ 7:30 ರಿಂದ 8:30ರ ವರೆಗೆ 25ನೇ ಮಾಸಿಕ ಶಿವಾನುಭವ ಕಾರ್ಯಕ್ರಮವು ಜರುಗಲಿದೆ ಎಂದು ಸಂಘಟಕ ಹನುಮಂತ ಗಲಬಿ ಅವರು ತಿಳಿಸಿದ್ದಾರೆ. 25ನೆಯ ಶಿವಾನುಭವ ಕಾರ್ಯಕ್ರಮದಲ್ಲಿ ಮುಗಳಕೋಡದ ಶ್ರೀ ಸಿದ್ಧಾರೂಢ ಭಾರತ ಪರಮಪೂಜ್ಯ ಶರಣಬಸವ ಶಾಸ್ತ್ರಿಗಳವರು ಉಪದೇಶಾಮೃತವನ್ನು ನೀಡಲಿದ್ದಾರೆ ಈ ಸಂದರ್ಭದಲ್ಲಿ ಸಾಧಕರಿಗೆ ಗೌರವ ಭಜನೆ ಓಂಕಾರ ಮೊದಲಾದ ಕಾರ್ಯಕ್ರಮಗಳು ಎಂದರು. ಚಿಂತನ ಬಳಗದ ಮುಖ್ಯಸ್ಥರಾದ ಸುಹಾಸಿನಿ ಮುರನಾಳ ಹಾಗೂ ಗಿರಿಜಮ್ಮ ತೊರಲಿ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ.




















