ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಸಂಭ್ರಮ

ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಶತಮಾನೋತ್ಸವದ ಸಂದರ್ಭದಲ್ಲಿ ತುಂಗಾ ತೀರದಲ್ಲಿ ಜರುಗಲಿರುವ ಐತಿಹಾಸಿಕ ತೆಪ್ಪೋತ್ಸವಕ್ಕೆ ನಗರದ ಸಾರ್ವಜನಿಕರಿಗೆ ಆತ್ಮೀಯ ಆಮಂತ್ರಣ.

ಶಿವಮೊಗ್ಗ ನಗರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿರುವ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸ್ತುತ ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಸಂಭ್ರಮ ಮನೆಮಾಡಿದೆ. ಈ ಅಭೂತಪೂರ್ವ ಸಂಭ್ರಮದ ಅಂಗವಾಗಿ ಇಂದು ದಿನಾಂಕ 03.01.2026ರ ಶನಿವಾರ ಸಂಜೆ ಪವಿತ್ರ ತುಂಗಾ ನದಿಯ ಮಡಲಿನಲ್ಲಿ ಭವ್ಯ ‘ತೆಪ್ಪೋತ್ಸವ’ ಕಾರ್ಯಕ್ರಮ ಜರುಗಲಿದ್ದು, ನಗರದ ಸಮಸ್ತ ಭಕ್ತಾದಿಗಳು ಭಾಗವಹಿಸಬೇಕೆಂದು ಈ ಮೂಲಕ ಆಮಂತ್ರಿಸುತ್ತೇನೆ.

ಕೆಳದಿ ಅರಸರ ಕಾಲದಿಂದಲೂ ಐತಿಹಾಸಿಕ ಮಹತ್ವ ಪಡೆದಿರುವ ಹಳೆಯ ಶಿವಮೊಗ್ಗದ ಕೋಟೆ ಪ್ರದೇಶವು ಹಿಂದೂ ಸಂಸ್ಕೃತಿಗೆ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯವು ಭಕ್ತರ ಶ್ರದ್ಧಾಕೇಂದ್ರವಾಗಿದ್ದು, ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ದಕ್ಷಿಣಾಭಿಮುಖವಾಗಿ ಹರಿಯುವ ಪುಣ್ಯನದಿ ತುಂಗಾ ತೀರದಲ್ಲಿ ಈ ದೇವಾಲಯವು ಇರುವುದು ನಗರದ ಸೌಭಾಗ್ಯ. ಕಳೆದ 74 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ತೆಪ್ಪೋತ್ಸವವು, ಶಿವಮೊಗ್ಗದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ.

ಸೂರ್ಯಾಸ್ತದ ಮನಮೋಹಕ ಹೊತ್ತಿನಲ್ಲಿ, ವಿದ್ಯುತ್ ದೀಪಗಳಿಂದ ಶೃಂಗರಿಸಲ್ಪಟ್ಟ ಭವ್ಯ ತೆಪ್ಪದಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳು ತುಂಗಾ ನದಿಯಲ್ಲಿ ವಿಹರಿಸುವ ದೃಶ್ಯ ಅತ್ಯಂತ ನಯನಮನೋಹರವಾಗಿರುತ್ತದೆ. ನದಿಯ ಅಲೆಗಳ ಮೇಲೆ ತೇಲಿಬರುವ ದೈವಿಕ ಕಳೆಯನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಭಕ್ತರು ತುಂಗಾ ತೀರಕ್ಕೆ ಆಗಮಿಸುತ್ತಾರೆ. ಪಟಾಕಿಗಳ ಸಂಭ್ರಮ, ಮಂತ್ರಘೋಷ ಹಾಗೂ ಭಕ್ತರ ಜೈಕಾರದ ನಡುವೆ ನಡೆಯುವ ಈ ಕಾರ್ಯಕ್ರಮವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶಿವಮೊಗ್ಗದ ಭಾವೈಕ್ಯತೆ ಮತ್ತು ಸಂಭ್ರಮದ ಸಂಕೇತವಾಗಿದೆ.

ನಮ್ಮ ನಗರದ ಇತಿಹಾಸ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ವಿನಂತಿಸಿದ್ದಾರೆ.

ದಿನಾಂಕ: 03-01-2026, ಶನಿವಾರ
ಸಮಯ: ಸಂಜೆ 6:00 ಗಂಟೆಯಿಂದ
ಸ್ಥಳ: ಕೋರ್ಪಲಯ್ಯ ಛತ್ರದ ಹಿಂಭಾಗ,
ತುಂಗಾ ನದಿ ತೀರ, ಕೋಟೆ ರಸ್ತೆ, ಶಿವಮೊಗ್ಗ.

ವರದಿ: ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!