ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಳ್ಳಾರಿ ಗಲಭೆ: 20 ಜನರ ಬಂಧನ, ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಬಂಧನದ ಭೀತಿ!

ಬಳ್ಳಾರಿ : ಬ್ಯಾನರ್​ ಕಟ್ಟು ಸಂಬಂಧ ಜನವರಿ 1 ರಂದು ಬಳ್ಳಾರಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ಸಂಘರ್ಷದಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಈ ನಡುವೆ ಬ್ರೂಸ್​ಪೇಟೆ ಪೊಲೀಸರು ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಒಟ್ಟು ಆರು ಎಫ್​​ಐಆರ್ ದಾಖಲಾಗಿದ್ದು, ಒಟ್ಟು 20 ಜನರನ್ನು ಬಂಧಿಸಿದ್ದಾರೆ. 10 ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಬಂಧಿತ ಬಿಜೆಪಿ ಕಾರ್ಯಕರ್ತರು
ಬಿ.ರವಿ, ರವಿಬಾಬು, ಪೋತಪ್ಪ, ಬಜ್ಜಪ್ಪ, ಜಿ.ಶ್ರೀನಿವಾಸ, ಷಡಕ್ಷರಿ, ರಂಗಸ್ವಾಮಿ, ಗುರುಪ್ರಸಾದ್, ಪಿ.ಶ್ರೀನಿವಾಸ ರೆಡ್ಡಿ, ಲಕ್ಷಣ, ತಿಮ್ಮಪ್ಪ ಬಂಧನಕ್ಕೆ ಒಳಗಾದವರ ಬಿಜೆಪಿ ಕಾರ್ಯಕರ್ತರು.

ಬಂಧಿತ ಕೈ ಕಾರ್ಯಕರ್ತರ ಪಟ್ಟಿ :

ಕಾರ್ತಿಕ್(25), ಮುಕ್ಕಣ್ಣ(28), ಇನಾಯತುಲ್ಲಾ(24), ರಾಜು(20), ಮುಸ್ತಫಾ(22), ಶ್ರೀಕಾಂತ್(30), ಮೊಹಮ್ಮದ್ ರಸೂಲ್(35), ಬಾಬು(38), ವೆಂಕಟೇಶ್(38), ಮುಬಾಶಿರ್(25) ಬಂಧಿತ ಕಾಂಗ್ರೆಸ್ ಕಾರ್ಯಕರ್ತರು.

ಮೂವರು ಅಂಗರಕ್ಷಕರು ವಶಕ್ಕೆ :

ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಪ್ರಾಣಬಿಟ್ಟಿದ್ದ. ಈತನ ಬೆನ್ನು ಹೊಕ್ಕಿದ್ದ 12 MM ಬುಲೆಟ್ ಯಾರ ಗನ್​ನಿಂದ ಬಂದಿದ್ದು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್ ಸಿಂಗ್​ನನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್​ನನ್ನ ವಶಕ್ಕೆ ಪಡೆದಿದ್ದಾರೆ.
ಜೊತೆಗೆ ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್‌ ಸಿಂಗ್, ಗುರುಚರಣ್​ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂಜಾಬ್ ಮೂಲದ ಈ ಮೂವರು ಖಾಸಗಿ ಗನ್​ಮ್ಯಾನ್​ಗಳು, ಜನವರಿ 1ನೇ ತಾರೀಕು ಫೈರಿಂಗ್ ನಡೆಸಿದ್ದರು.

ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಸಂಕಷ್ಟ

ಈ ನಡುವೆ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಸಂಕಷ್ಟ ಶುರುವಾಗಿದೆ. ಗಲಾಟೆಗೆ ಕುಮ್ಮಕ್ಕು ಕೊಟ್ಟ ಆರೋಪದಲ್ಲಿ ಬಂಧನ ಮಾಡೋ ಸಾಧ್ಯತೆಯಿದೆ. ಪೊಲೀಸರು ಸುಮಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಈ ನಡುವೆ ಗಲಭೆಯ ಒಂದೊಂದೇ ದೃಶ್ಯಗಳು ಹೊರಬೀಳ್ತಿವೆ. ಸದ್ಯ ಟಿವಿ9ಗೆ ಸಿಕ್ಕ ವಿಡಿಯೋವೊಂದು, ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿಗೆ ಮೊದಲೇ ಪ್ಲ್ಯಾನ್ ಆಗಿತ್ತಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಯಾಕಂದ್ರೆ, ಈ ವಿಡಿಯೋದಲ್ಲಿ ಪುಂಡರ ಗುಂಪೊಂದು ಆಟೋದಲ್ಲಿ ಬಾಟಲ್ ಹಾಗೂ ಪೆಟ್ರೋಲ್ ಬಾಂಬ್ ತುಂಬಿಸಿಕೊಂಡು ಬಂದಿತ್ತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!