ಕ್ಷೇತ್ರದ ಜನರು ನನಗೆ ನೀಡಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಇಲ್ಲಿಯವರೆಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಮುಂದೆಯು ಸಹ ಮಾಡುತ್ತೇನೆ, ಗ್ರಾಮಗಳ ಅಭಿವೃದ್ದಿಗೆ ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾಸ್ತಿಗೌಡನ ದೊಡ್ಡಿ ಗ್ರಾಮದಲ್ಲಿ ಜನಪರ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ, ಕನಕ ಹಾಗೂ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಘ (ರಿ.), ಶ್ರೀ ಬೀರೇಶ್ವರ ದೇವಸ್ಥಾನದ ದತ್ತಿ ಮತ್ತು ಅಭಿವೃದ್ಧಿ (ರಿ.) ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈ ಭಾಗದಲ್ಲಿದ್ದ ನೀರಿನ ಸಮಸ್ಯೆಯನ್ನು ಒಂದು ಹಂತದಲ್ಲಿ ಬಗೆಹರಿಸಿದ್ದೇನೆ, ನೀರಾವರಿ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆಯಾ ಭಾಗದ ರೈತರ ಸಭೆ ಕರೆದು ನಿರ್ವಹಣೆ ಸಂಬಂಧ ನಿಮಗೆ ಬಿಡಲಾಗುವುದು ಅಲ್ಲದೇ ನೀರನ್ನು ಬಳಸಿಕೊಳ್ಳಲು ಸ್ಥಳೀಯರ ಸಮಿತಿ ಮಾಡಬೇಕಾಗಿದೆ, ಈ ಭಾಗದ ಮೂಲಭೂತ ಸಮಸ್ಯೆಗಳನ್ನು ಪಟ್ಟಿ ಮಾಡಿ ಕ್ರಿಯಾ ಯೋಜನೆ ಮಾಡಲಾಗಿದ್ದು ಅನುದಾನ ಬಿಡುಗಡೆಯಾದ ಬಳಿಕ ತೆಳ್ಳನೂರಿನಿಂದ ಚಿಕ್ಕಲ್ಲೂರು ರಸ್ತೆಯನ್ನು ಮೆಟ್ಲಿಂಗ್ ರಸ್ತೆ ನಿರ್ಮಾಣ ಮಾಡಿ ಡಾಂಬರೀಕರಣ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರಲ್ಲದೇ ಮಾಸ್ತಿಗೌಡನ ದೊಡ್ಡಿ ಗ್ರಾಮದಲ್ಲಿ ನೂತನ ಕನಕ ಸಮುದಾಯ ಭವನ ನಿರ್ಮಾಣ ಮಾಡಲು ಒಂದು ಕ್ರಿಯಾ ತಯಾರಿಸಿ ಅದಕ್ಕೆ ತಗಲುವ ವೆಚ್ಚವನ್ನು ಯಾವ ಕೃಡೀಕರಣ ಮಾಡಬೇಕು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಈಗಾಗಲೇ ಬೀರೇಶ್ವರ ದೇವಸ್ಥಾನಕ್ಕೆ 5 ಲಕ್ಷ ಅನುದಾನ ನೀಡಿದ್ದು ಇನ್ನೂ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುರುಬ ಸಂಘದ ಮಾಜಿ ರಾಜ್ಯಾಧ್ಯಕ್ಷ ಸುಬ್ಬಣ್ಣ, ಕುರುಬ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರಭಾವತಿ,ಕೊಳ್ಳೇಗಾಲ ತಾಲ್ಲೂಕು ಕುರುಬರ ಸಂಘ ಅಧ್ಯಕ್ಷ ನಂಜೇಗೌಡ, ಖಜಾಂಚಿ ವೆಂಕಟೇಗೌಡ, ಬ್ರಹ್ಮಲಿಂಗಯ್ಯ, ಮಹದೇವ್, ಹನೂರು ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಶಿವಪ್ಪ, ಜನಪರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಚಿಕ್ಕಲ್ಲೂರು, ಹನೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜುನಾಯ್ಡು ಜಿ ,ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ ಉಸ್ಮಾನ್ ಖಾನ್




















