ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಯಿ ಪಬ್ಲಿಕ್ ಶಾಲೆಯಲ್ಲಿ ಅಕ್ಷರಮಾತೆ ಸಾವಿತ್ರಿಭಾಯಿ ಫುಲೆಯವರ ಜಯಂತಿ ಆಚರಣೆ

ಕನಕಗಿರಿ : ಜನವರಿ 3, ಶನಿವಾರದಂದು ದೇಶದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರಮಾತೆ ಸಾವಿತ್ರಿ ಭಾಯಿ ಫುಲೆಯವರ ಜಯಂತಿ ಕಾರ್ಯಕ್ರಮವನ್ನು ಮಕ್ಕಳಿಂದ ಅವರ ಜೀವನಶೈಲಿ ಆಧಾರಿತ ನಾಟಕದ ಅಭಿನಯದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಸಹ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ನಾಯ್ಕ ಅವರ ಉತ್ತಮ ಯೋಜನೆ, ಸಹಶಿಕ್ಷಕಿಯಾದ ರೋಜಾ ರವರ ನಿರ್ದೇಶನದಂತೆ ವಿದ್ಯಾರ್ಥಿನಿ ಅಮೃತಾ ಭಾವಿಕಟ್ಟಿ ಸಾವಿತ್ರಿ ಭಾಯಿ ಫುಲೆಯವರ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದಳು.
ಸಂಗಮೇಶ ಹಟ್ಟಿ ಸಾವಿತ್ರಿಭಾಯಿ ಯವರ ಪತಿಯಾದ ಜ್ಯೋತಿ ಭಾ ಫುಲೆಯವರ ಪಾತ್ರವನ್ನು ನಿಭಾಯಿಸಿದರು.
ಮಕ್ಕಳಾದ ಶ್ರೇಯಸ್ ರಕ್ಕಸಗಿ, ಜಸವಂತ ಹೊಸಳ್ಳಿ, ಚೇತನ್ ಕುಮಾರ, ಪವನ್ ಕುಮಾರ , ಅಚಿಂತ್ಯಾ , ತನ್ವಿತಾ.ಟಿ, ಲಕ್ಷ್ಮೀ ಹಟ್ಟಿ, ಹರ್ಷಿತಾ ಪಾಟೀಲ್, ಅನ್ವಿತಾ, ತನಿಷಾ ಕಾತರಕಿ, ಸನಾ , ಸಾರಾ ಹಂಚಿನಾಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಾಮಸ್ಥರ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿದರು. ಶಿಕ್ಷಕಿಯರಾದ ತ್ರಿವೇಣಿ ರಾಮ್ ಜಿ ಮತ್ತು ಮರಿಯಮ್ಮ ರವರು ಸಾವಿತ್ರಿ ಭಾಯಿ ಫುಲೆಯವರ ಜೀವನ ಆಧರಿಸಿದ ಹಾಡನ್ನು ಮನಮುಟ್ಟುವಂತೆ ಹಾಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಹರೀಶ ನಾಯಕ, ಸಹಶಿಕ್ಷಕರಾದ ಮಂಜುನಾಥ ಮಿಟ್ಲಕೋಡ, ಮಂಜುನಾಥ ಪಾಟೀಲ್, ವೆಂಕಟೇಶ ಕಂಠಿ ಸಹಶಿಕ್ಷಕಿಯರಾದ ಬೀಬಿ ಫಾತಿಮಾ, ಮೇಘಾಶ್ರೀ. ಪಿ , ನೀಲಾ ಚಿತ್ರಗಾರ, ರಾಜೇಶ್ವರಿ.ವಿ , ರಿಯಾನಾ ಬೇಗಂ, ಸುನೀತಾ ಹಿರೇಮಠ ಹಾಗೂ ಬೋಧಕೇತರ ಸಿಬ್ಬಂದಿಯಾದ ವೆಂಕಟೇಶ ಕಲಿಕೇರಿ, ಜುಬೇದಾ ಬೇಗಂ, ಜಡೇಶ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ ಹನುಮಂತಪ್ಪ ನಾಯಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!